ಬೆಳಗಾವಿ: ಶ್ರೀರಾಮಲು ಹೇಳಿಕೆಗೆ ಬೆಂಬಲ ಸೂಚಿಸಿದ ಶಾಸಕ ಪಿ.ರಾಜೀವ್
ಬೆಳಗಾವಿ, ಜುಲೈ.30: ನಾನು ದಕ್ಷಿಣ ಕರ್ನಾಟಕದ ಅಭಿವೃದ್ಧಿಯನ್ನು ನೋಡಿದ್ದೇನೆ. ಉತ್ತರ ಕರ್ನಾಟಕದಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದ್ದೇನೆ. ಪ್ರಾಯೋಗಿಕವಾಗಿ ಎರಡನ್ನೂ ನೋಡಿದಾಗ ಎಂಥಹ ತಾರತಮ್ಯ ಇದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಹೇಳಿದರು.
ಜಿಲ್ಲೆಯ ರಾಯಭಾಗ ತಾಲೂಕಿನ ಹಾರೊಗೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಗೋಡು ಚಳುವಳಿಯಿಂದ ಹಿಡಿದು, ಬಹಳಷ್ಟು ಹೋರಾಟಗಳನ್ನು ನೋಡಿದರೆ ದಕ್ಷಿಣ ಕರ್ನಾಟಕ ಬಹಳಷ್ಟು ಅಭಿವೃದ್ಧಿ ಆಗಿದೆ.
ಅಭಿವೃದ್ಧಿ ಆಗಿರುವ ಜಿಲ್ಲೆಗಳಿಗೆ ಮತ್ತೆ ಅನುದಾನ ಕೊಟ್ಟರೆ, ಉತ್ತರ ಕರ್ನಾಟಕ ಅಭಿವೃದ್ಧಿ ಆಗುವುದಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕಣ್ಣೆದುರಿಗೆ ಕರ್ನಾಟಕ ಇಬ್ಭಾಗ ಆಗೋದನ್ನ ನಾವೆಲ್ಲರೂ ನೋಡಬೇಕಾಗುತ್ತದೆ.

ಜನಸಂಖ್ಯೆ ನೋಡಿ ಅಭಿವೃದ್ಧಿ ಮಾಡಿದಾಗ ಮಾತ್ರ ಅಖಂಡ ಕರ್ನಾಟಕ ಇರಲು ಸಾಧ್ಯ. ಒಂದು ಭಾಗ ಅಭಿವೃದ್ಧಿ ಆದರೆ ಇಡೀ ಕರ್ನಾಟಕ ಅಭಿವೃದ್ಧಿ ಆಗಿದೆ ಎನ್ನಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications