ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರಾಠಿಗರ ಮಹಾಮೇಳಾವದಲ್ಲಿ ಎಂಕ, ನೋಣ ಸೀನ

By Mahesh
|
Google Oneindia Kannada News

ಬೆಳಗಾವಿ, ಡಿ.9: ಅತ್ತ ಸುವರ್ಣ ವಿಧಾನಸೌಧದಲ್ಲಿ ಅಚ್ಚರಿಯೆಂಬಂತೆ ನೂರಕ್ಕೆ ನೂರು ಶಾಸಕರಿಂದ ತುಂಬಿದ್ದರೆ, ಇತ್ತ ಮರಾಠಿಗರ ಮಹಾಮೇಳಾವದಲ್ಲಿ ಎಂಕ ನೋಣ ಸೀನ ಎಂಬಂತೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಾಣಿಸಿಕೊಂಡಿದ್ದು ಎದ್ದು ಕಾಣುತ್ತಿತ್ತು.

ಚಳಿಗಾಲ ಅಧಿವೇಶನ ಆರಂಭದ ದಿನದಲ್ಲೇ ಕೋಲಾ ಹಲದ ವಾತಾವರಣ ಪ್ರತಿಪಕ್ಷಗಳ ಧರಣಿ, ಬಿಜೆಪಿಯೇ ಬೆಚ್ಚಿಬೀಳುವಂತಿದ್ದ ರೇವಣ್ಣ-ಎಚ್ಡಿಕೆ ಸೋದರರ ಜುಗಲ್ ಬಂದಿ, ಭಜನೆ ಮಾಡುತ್ತಾ ಸದನಕ್ಕೆ ಬಂದ ಬಿಜೆಪಿ ಶಾಸಕ, ಮುಂದುವರೆದ ರೈತರ ಪ್ರತಿಭಟನೆ ಎಲ್ಲವೂ ಸದನ ಒಳಹೊರಗಿನ ಚಿತ್ರಣವಾಗಿತ್ತು.

ಸುವರ್ಣಸೌಧದದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್​ ಆಯೋಜಿಸಿದ್ದ ಮಹಾಮೇಳಾವಕ್ಕೆ ಮರಾಠಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗಾವಿ, ಖಾನಾಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ನಿರೀಕ್ಷಿಸಿದ್ದ ಸಂಭಾಜಿ ಪಾಟೀಲ್ ಗೆ ತೀವ್ರಮುಖಭಂಗವಾಗಿದೆ. [ಶರಣ್ರೀ..ಮಹಾಮೇಳಾವ ಫ್ಲಾಶ್ ಬ್ಯಾಕ್ ಓದ್ರಲ್ಲಾ]

Sambhaji Patil

ಮರಾಠಿಗರನ್ನು ಆಕರ್ಷಿಸಲು ಮಹಾರಾಷ್ಟ್ರದಿಂದ ಯಾವೊಬ್ಬ ನಾಯಕರು ಬಂದಿರಲಿಲ್ಲ. ಬಾಳಾ ಠಾಕ್ರೆ, ಆರ್ ಆರ್ ಪಾಟೀಲ್ ಕಂಡಿದ್ದ ಜನತೆ ಈ ಬಾರಿ ಸಂಭಾಜಿ ಪಾಟೀಲ್ ಕರೆಗೆ ಓಗೊಡಲಿಲ್ಲ.

ಬೆಳಗ್ಗೆ ಅತ್ತ ಸದನ ಆರಂಭವಾಗುತ್ತಿದ್ದಂತೆ ಇತ್ತ 'ಉಠೆ ತಲ್ವಾರ್' ಎಂದು ಘರ್ಜಿಸಬೇಕಿದ್ದ ಮರಾಠಿಗರು ವೇದಿಕೆಯಲ್ಲಿ ಅತ್ತಿಂದಿತ್ತ ಶತಪಥ ಹಾಕಿದ್ದಷ್ಟೇ ಬಂತು. ಮಟಮಟ ಮಧ್ಯಾಹ್ನ ಮುಜುಗರದ ನಡುವೆಯೇ ಶಾಸಕ ಸಂಭಾಜಿ ಪಾಟೀಲ್ ಮತ್ತು ಅರವಿಂದ ಪಾಟೀಲ್​ ಸಮ್ಮೇಳನ ಸ್ಥಳವಾದ ವ್ಯಾಕ್ಸೀನ್ ಡಿಪೋದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ನಾಲ್ಕು ಮಾತನಾಡಿ ಸಮಾರಂಭವನ್ನು ಮುಗಿಸುವ ಆತುರ ತೋರಿದರು.

ಕರವೇ ಪ್ರತಿಭಟನೆ:ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ್​​​​ ಅವರ ನೇತೃತ್ವದ ಮಹಾಮೇಳವಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಪ್ರತಿಭಟನೆಯೇ ಜೋರಾಗಿತ್ತು.

Rakshana Vedike

ಕರವೇ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಚೆನ್ನಮ್ಮ ಸರ್ಕಲ್ ನ ಬಳಿ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದರು. [ಮೊದಲ ದಿನದ ಕಲಾಪದ ಮುಖ್ಯಾಂಶಗಳು]

2006 ರಿಂದ ಮಹಾಮೇಳಾವ ನಡೆಸುತ್ತಾ ಬಂದಿರುವ ಎಂಇಎಸ್ ಗೆ ಬಿಎಸ್ ಯಡಿಯೂರಪ್ಪ ಅವರು 2009ರಲ್ಲಿ ತಡೆಯೊಡ್ಡಿದ್ದರು. ಅದರೆ, ಈ ಬಾರಿ ಶಾಂತಿಯುತ ಸಮ್ಮೇಳನ ನಡೆಸುವುದಾಗಿ ಹೇಳಿ ಎಂಇಎಸ್ ಅನುಮತಿ ಪಡೆದುಕೊಂಡಿತ್ತು. ಎಂಇಎಸ್ ಅಧ್ಯಕ್ಷ ದೀಪಕ್ ದಳವಿ, ವಸಂತರಾವ್ ಪಾಟೀಲ್, ಮಾಜಿ ಶಾಸಕ ಮನೋಹರ್ ಕಿನೇಕರ್ ಮುಂತಾದವರು ಮೇಳಾವ್ ಯಶಸ್ಸಿಗಾಗಿ ಶ್ರಮಿಸಿದ್ದು ವ್ಯರ್ಥವಾಗಿದೆ.

ಆದರೂ ಛಲಬಿಡದ ಎಂಇಎಸ್ ತನ್ನ ಮುಂದಿನ ಯೋಜನೆಯಂತೆ ಸುವರ್ಣ ವಿಧಾನ ಸೌಧದ ಮುಂದೆ ಧರಣಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಮುಂದಾಗಿದೆ.


English summary
Lathi charge on Karnataka Rakshana Vedike activists in Belagavi on Tuesday December 9 Kannada activists protesting against Maharashtra Ekikaran Samiti in Chenamma circle. However MahaMelav organised by MES was total failure this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X