ಹಿಂಡಲಗಾ ಜೈಲಿನಲ್ಲಿ ಕಡ್ಲೆಕಾಯಿ ಸಿಪ್ಪೆಯೊಳಗೆ ಗಾಂಜಾ ಪೂರೈಕೆ

ಬೆಳಗಾವಿ, ಜುಲೈ 14: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಗಾಂಜಾ ಕೂಡ ಆರಾಮವಾಗಿ ಸಿಗ್ತಿದೆ ಎಂಬ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗಾಂಜಾವನ್ನು ಜೈಲಿನೊಳಗೆ ತರಿಸಲು ಎಂಥ ಖತರ್ನಾಕ್ ಉಪಾಯ ಮಾಡಿದ್ದಾರೆ ಗೊತ್ತೆ?

ಹೌದು, ನೀವು ಖಂಡಿತಾ ಅಚ್ಚರಿ ಪಡ್ತೀರಿ. ಕಡ್ಲೆಕಾಯಿ ಸಿಪ್ಪೆಯೊಳಗೆ ಗಾಂಜಾ ಇಟ್ಟು, ಅದನ್ನು ಕೈದಿಗಳಿಗೆ ಪೂರೈಸುತ್ತಿರುವುದು ಬಯಲಾಗಿದೆ. ಯಾರೋ ವ್ಯಕ್ತಿ ಕೈದಿಯೊಬ್ಬನಿಗೆ ತಂದುಕೊಟ್ಟಿದ್ದ ಕಡಲೆಕಾಯಿಯನ್ನು ಅಧಿಕಾರಿಗಳು ಪರಿಶೀಲಿಸಿದಾಗ ಈ ಅಕ್ರಮ ದಂಧೆ ಗೊತ್ತಾಗಿದೆ.

Marijuana supplied cleverly to prisoners in Hindalaga jail

ಕಾರಾಗೃಹದ ಸಂದರ್ಶಕರ ಕೊಠಡಿಯಲ್ಲಿ ಪತ್ತೆಯಾದ ಕಡ್ಲೆಕಾಯಿಯೊಳಗೆ ಗಾಂಜಾ ತುಂಬಲಾಗಿತ್ತು. ಇದರಿಂದ ಹುಷಾರಾದ ಸಿಬ್ಬಂದಿ, ಕೈದಿಗಳ ಕಡೆಯವರು ಕಡ್ಲೆಕಾಯಿ ತಂದುಕೊಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ.

ಗಾಂಜಾ ಕಳ್ಳಸಾಗಣೆ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿದೆ. ಕೈದಿಗಳಿಗೆ ಕಡಲೇ ಬೀಜ ತಂದಿದ್ದರೆ ಅನುಮಾನ ಇರುತ್ತಿರಲಿಲ್ಲ. ಆದರೆ ಕಡಲೆಕಾಯಿ ಸಿಪ್ಪೆ ಸಮೇತ ಇದ್ದದ್ದು ಅನುಮಾನಕ್ಕೆ ಕಾರಣವಾಗಿ ಪರಿಶೀಲಿಸಿದೆವು. ಸಿಪ್ಪೆ ಬಿಡಿಸಿ ಬೀಜವನ್ನು ತೆಗೆದು ಆ ಜಾಗದಲ್ಲಿ ಗಾಂಜಾ ತುಂಬಿ ಮತ್ತೆ ಸಿಪ್ಪೆಯನ್ನು ಅಂಟಿಸಿ ಪೂರೈಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಂಜಾ ತುಂಬಿದ್ದ ಕಡ್ಲೆಕಾಯಿ ಒಬ್ಬ ಕೈದಿ ಬಳಿ ಸಿಕ್ಕಿದೆ. ಆತನಿಗೆ ತಂದುಕೊಟ್ಟವರು ಯಾರು ಎನ್ನುವುದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+