ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಲೋಕಸಭಾ ವ್ಯಾಪ್ತಿಯ 8 ಅಸೆಂಬ್ಲಿ ಕ್ಷೇತ್ರದಲ್ಲಿ ಯಾರ ಪ್ರಾಬಲ್ಯ ಹೆಚ್ಚು?

|
Google Oneindia Kannada News

ಕೋವಿಡ್ ಎರಡನೇ ಹಂತದ ಹಾವಳಿಯ ನಡುವೆಯೂ ರಾಜ್ಯದ ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ಏರಲಾರಂಭಿಸಿದೆ. ಹೊಸ ಕೋವಿಡ್ ಮಾರ್ಗಸೂಚಿಯನ್ನು ರಾಜಕೀಯ ಪಕ್ಷಗಳು ಯಾವ ರೀತಿ ಅನುಸರಿಸಲಿದೆ ಎಂದು ಕಾದು ನೋಡಬೇಕಿದೆ.

ಎಂಟು ಜಿಲ್ಲೆಗಳಲ್ಲಿ ಕೆಲವೊಂದು ಕೋವಿಡ್ ನಿರ್ಬಂಧವನ್ನು ಹೇರಲಾಗಿದ್ದು, ಇದರಲ್ಲಿ ಬಸವಕಲ್ಯಾಣ ಕ್ಷೇತ್ರ ಮಾತ್ರ ನಿರ್ಬಂಧದ ಜಿಲ್ಲಾ ವ್ಯಾಪ್ತಿಯಲ್ಲಿ ಬರಲಿದೆ. ಆದರೆ, ಸರಕಾರದ ಮಾರ್ಗಸೂಚಿಯಲ್ಲಿ ಚುನಾವಣಾ ಪ್ರಚಾರದ ಬಗ್ಗೆಯೂ ಪ್ರಸ್ತಾವನೆ ಇದೆ.

ಬೆಳಗಾವಿ ಉಪ ಚುನಾವಣೆ ಬಿಜೆಪಿಗೆ 'ಕಬ್ಬಿಣದ ಕಡಲೆ': ಕಾರಣಗಳು ಐದುಬೆಳಗಾವಿ ಉಪ ಚುನಾವಣೆ ಬಿಜೆಪಿಗೆ 'ಕಬ್ಬಿಣದ ಕಡಲೆ': ಕಾರಣಗಳು ಐದು

ಏಪ್ರಿಲ್ ಹದಿನೇಳರಂದು ಮೂರು ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಬೆಳಗಾವಿ ಕ್ಷೇತ್ರದ ಚುನಾವಣೆಗೆ ಒಟ್ಟು ಹದಿನೆಂಟು ಅಭ್ಯರ್ಥಿಗಳು (ನಾಮಪತ್ರ ಹಿಂದಕ್ಕೆ ಪಡೆಯುವ ಮುನ್ನ) ಕಣದಲ್ಲಿದ್ದಾರೆ.

ಇದರಲ್ಲಿ ನೇರ ಹಣಾಹಣಿ ಬಿಜೆಪಿಯ ಮಂಗಲ ಅಂಗಡಿ ಮತ್ತು ಕಾಂಗ್ರೆಸ್ಸಿನ ಸತೀಶ್ ಜಾರಕಿಹೊಳಿಯ ನಡುವೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ 2018ರ ಚುನಾವಣೆಯಲ್ಲಿ ಯಾವ ಪಕ್ಷ ಜಯಭೇರಿ ಬಾರಿಸಿತ್ತು ಎನ್ನುವ ಮಾಹಿತಿ ಮುಂದಿದೆ:

ಸುರೇಶ್ ಅಂಗಡಿ ಪತ್ನಿ ಸ್ಪರ್ಧೆ: ಸತೀಶ್ ಜಾರಕಿಹೊಳಿ ಹಣೆಬರಹ ಈ ಹಿರಿಯ ಕಾಂಗ್ರೆಸ್ ಮುಖಂಡರ 'ಕೈ'ಯಲ್ಲಿ!ಸುರೇಶ್ ಅಂಗಡಿ ಪತ್ನಿ ಸ್ಪರ್ಧೆ: ಸತೀಶ್ ಜಾರಕಿಹೊಳಿ ಹಣೆಬರಹ ಈ ಹಿರಿಯ ಕಾಂಗ್ರೆಸ್ ಮುಖಂಡರ 'ಕೈ'ಯಲ್ಲಿ!

 ಅರಭಾವಿ, ಬೆಳಗಾವಿ ಉತ್ತರ

ಅರಭಾವಿ, ಬೆಳಗಾವಿ ಉತ್ತರ

ಕ್ಷೇತ್ರ: ಅರಭಾವಿ
ವಿಜೇತ ಅಭ್ಯರ್ಥಿ, ಪಕ್ಷ: ಬಾಲಚಂದ್ರ ಜಾರಕಿಹೊಳಿ (ಬಿಜೆಪಿ)
ಸೋತ ಅಭ್ಯರ್ಥಿ, ಪಕ್ಷ: ಭೀಮಪ್ಪ ಗುಂಡಪ್ಪ ಗಡದ್ (ಜೆಡಿಎಸ್)
ಗೆದ್ದ ಮತಗಳ ಅಂತರ: 47,328

ಕ್ಷೇತ್ರ: ಬೆಳಗಾವಿ ಉತ್ತರ
ವಿಜೇತ ಅಭ್ಯರ್ಥಿ, ಪಕ್ಷ: ಅನಿಲ್ ಎಸ್ ಬೆನಕೆ (ಬಿಜೆಪಿ)
ಸೋತ ಅಭ್ಯರ್ಥಿ, ಪಕ್ಷ: ಫೈರೋಜ್ ಸೇಠ್ (ಕಾಂಗ್ರೆಸ್)
ಗೆದ್ದ ಮತಗಳ ಅಂತರ: 17,267
(ಚಿತ್ರದಲ್ಲಿ: ಬಾಲಚಂದ್ರ ಜಾರಕಿಹೊಳಿ)

 ಗೋಕಾಕ, ಬೆಳಗಾವಿ ದಕ್ಷಿಣ

ಗೋಕಾಕ, ಬೆಳಗಾವಿ ದಕ್ಷಿಣ

ಕ್ಷೇತ್ರ: ಗೋಕಾಕ (ಉಪಚುನಾವಣೆ - 2019)
ವಿಜೇತ ಅಭ್ಯರ್ಥಿ, ಪಕ್ಷ: ರಮೇಶ್ ಜಾರಕಿಹೊಳಿ (ಬಿಜೆಪಿ)
ಸೋತ ಅಭ್ಯರ್ಥಿ, ಪಕ್ಷ: ಲಖನ್ ಜಾರಕಿಹೊಳಿ (ಕಾಂಗ್ರೆಸ್)
ಗೆದ್ದ ಮತಗಳ ಅಂತರ: 29,006

ಕ್ಷೇತ್ರ: ಬೆಳಗಾವಿ ದಕ್ಷಿಣ
ವಿಜೇತ ಅಭ್ಯರ್ಥಿ, ಪಕ್ಷ: ಅಭಯ್ ಪಾಟೀಲ್ (ಬಿಜೆಪಿ)
ಸೋತ ಅಭ್ಯರ್ಥಿ, ಪಕ್ಷ: ಎಂ.ಡಿ. ಲಕ್ಷ್ಮೀನಾರಾಯಣ (ಕಾಂಗ್ರೆಸ್)
ಗೆದ್ದ ಮತಗಳ ಅಂತರ: 58,692
(ಚಿತ್ರದಲ್ಲಿ: ರಮೇಶ್ ಜಾರಕಿಹೊಳಿ)

 ಬೆಳಗಾವಿ ಗ್ರಾಮಾಂತರ, ಬೈಲಹೊಂಗಲ

ಬೆಳಗಾವಿ ಗ್ರಾಮಾಂತರ, ಬೈಲಹೊಂಗಲ

ಕ್ಷೇತ್ರ: ಬೆಳಗಾವಿ ಗ್ರಾಮಾಂತರ
ವಿಜೇತ ಅಭ್ಯರ್ಥಿ, ಪಕ್ಷ: ಲಕ್ಷ್ಮೀ ಹೆಬ್ಬಾಳ್ಕರ್ (ಕಾಂಗ್ರೆಸ್)
ಸೋತ ಅಭ್ಯರ್ಥಿ, ಪಕ್ಷ: ಸಂಜಯ್ ಪಾಟೀಲ್ (ಬಿಜೆಪಿ)
ಗೆದ್ದ ಮತಗಳ ಅಂತರ: 51,724

ಕ್ಷೇತ್ರ: ಬೈಲಹೊಂಗಲ
ವಿಜೇತ ಅಭ್ಯರ್ಥಿ, ಪಕ್ಷ: ಶಿವಾನಂದ ಕೌಜಲಗಿ (ಕಾಂಗ್ರೆಸ್)
ಸೋತ ಅಭ್ಯರ್ಥಿ, ಪಕ್ಷ: ಜಗದೀಶ್ ಚೆನ್ನಪ್ಪ ಮೇಟಗುಡ್ (ಪಕ್ಷೇತರ)
ಗೆದ್ದ ಮತಗಳ ಅಂತರ: 5,122
(ಚಿತ್ರದಲ್ಲಿ: ಲಕ್ಷ್ಮೀ ಹೆಬ್ಬಾಳ್ಕರ್)

 ಸೌಂದತ್ತಿ ಎಲ್ಲಮ್ಮ, ರಾಮದುರ್ಗ

ಸೌಂದತ್ತಿ ಎಲ್ಲಮ್ಮ, ರಾಮದುರ್ಗ

ಕ್ಷೇತ್ರ: ಸೌಂದತ್ತಿ ಎಲ್ಲಮ್ಮ
ವಿಜೇತ ಅಭ್ಯರ್ಥಿ, ಪಕ್ಷ: ವಿಶ್ವನಾಥ್ ಚಂದ್ರಶೇಖರ್ ಮಾಮನಿ (ಬಿಜೆಪಿ)
ಸೋತ ಅಭ್ಯರ್ಥಿ, ಪಕ್ಷ: ಆನಂದ ಚೋಪ್ರಾ (ಪಕ್ಷೇತರ)
ಗೆದ್ದ ಮತಗಳ ಅಂತರ: 6,291

ಕ್ಷೇತ್ರ: ರಾಮದುರ್ಗ
ವಿಜೇತ ಅಭ್ಯರ್ಥಿ, ಪಕ್ಷ: ಮಹಾದೇವಪ್ಪ ಶಿವಲಿಂಗಪ್ಪ ಯಡವಾಡ (ಬಿಜೆಪಿ)
ಸೋತ ಅಭ್ಯರ್ಥಿ, ಪಕ್ಷ: ಅಶೋಕ್ ಮಹಾದೇವಪ್ಪ ಪಟ್ಟಣ್ (ಕಾಂಗ್ರೆಸ್)
ಗೆದ್ದ ಮತಗಳ ಅಂತರ: 2,875
(ಚಿತ್ರದಲ್ಲಿ: ವಿಶ್ವನಾಥ್ ಚಂದ್ರಶೇಖರ್ ಮಾಮನಿ)

English summary
Belagavi Loksabha Constituency Eight Assembly Segment, Which Party Won How Many Seats?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X