KSRTC Strike: ಸಾರಿಗೆ ನೌಕರರು ಸೇರಿ ವಿವಿಧ ಸಂಘಟನೆಗಳ ಧರಣಿ: ಸರ್ಕಾರಕ್ಕೆ ಮೊದಲೇ ದಿನವೇ ಪ್ರತಿಭಟನೆ ಬಿಸಿ
ಬೆಂಗಳೂರು, ಡಿಸೆಂಬರ್ 09: ಬೆಳಗಾವಿಯಲ್ಲಿ ಇಂದು ಕರ್ನಾಟಕ ವಿಧಾನಮಂಡಲ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಇತ್ತ ವಿವಿಧ ಸಂಘಟನೆಗಳು, ಸಾರಿಗೆ ನೌಕರರು ಸೇರಿದಂತೆ ಅನೇಕ ಸಮುದಾಯ, ವರ್ಗದ ಜನರು ಮೀಸಲಾತಿ, ವೇತನ ಪರಿಷ್ಕರಣೆ, ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಹತ್ತಾರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಚಿಕ್ಕೋಡಿ, ಬೆಳಗಾವಿ ಭಾಗದ ವಿವಿಧ ಕಡೆಗಳಲ್ಲಿ ಏಕಕಾಲಕ್ಕೆ ಸೋಮವಾರ ಅನೇಕ ಪ್ರತಿಭಟನೆಗಳು ನಡೆಯುತ್ತಿವೆ.
ಕರ್ನಾಟಕ ಸರ್ಕಾರಕ್ಕೆ ಚಳಿಗಾಲ ಅಧಿವೇಶನ ಮೊದಲೇ ಪ್ರತಿಭನೆಗಳ ಬಿಸಿ ತಟ್ಟಿದೆ. ಕರ್ನಾಟಕ ರಾಜ್ಯ ಸಾರಿಗೆ ನೌಕರರು ಈಗಾಗಲೇ (KSRTC Bus strike) ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಿಸೆಂಬರ್ 31ರಿಂದ ರಾಜ್ಯವ್ಯಾಪಿ ಮುಷ್ಕರ ನಡೆಸುವುದಾಗಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳಗಾವಿಯ ಕೊಡಂಸಕಪ್ಪ ಬಳಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುಸುವ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿದರು.

ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಈಡೇರಿಸಬೇಕು. ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಇಟ್ಟು ಚರ್ಚೆ ಮಾಡಬೇಕು. ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡಿಸೆಂಬರ್ 31ರಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ನಿಗಮ (NWKRTC) ಬಿಎಂಟಿಸಿ ಹಾಗೂ ಕೆಕೆಆರ್‌ಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳ ನೌಕರರು ವೇತನ ಹೆಚ್ಚಳಕ್ಕೆ ಕಾಯುತ್ತಿದ್ದಾರೆ. ಇದು ಸಾಧ್ಯವಾಗದಿದ್ದಲ್ಲಿ, ಡಿಸೆಂಬರ್ 31 ರ ಬಳಿಕ ರಾಜ್ಯವ್ಯಾಪಿ ಸಾರಿಗೆ ವ್ಯವಸ್ಥೆ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಮೊಟ್ಟೆ ವಿತರಣೆ ವಾಪಾಸ್ ಪಡೆಯಿರಿ: ಜೈನ್ ಮುನಿ ಆಗ್ರಹ
ಇನ್ನೂ ಚಿಕ್ಕೋಡಿಯ ಬಸ್ತವಾಡ ಗ್ರಾಮದಲ್ಲಿ ಸೋಮವಾರ ಜೈನ್ ಸಮಾಜದ ಜೈನ ಮುನಿ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರು.
ಸರ್ಕಾರ ನಮ್ಮ ಮನವಿ ಆಲಿಸಬೇಕು, ಜೈನ ಸಮುದಾಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಆ ನಿಗಮ ಮಂಡಳಿಗೆ ಪ್ರತಿವರ್ಷ 200 ಕೋಟಿ ಅನುದಾನ ನೀಡಬೇಕು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಜೈನರ ನೇಮಕ ಆಗಬೇಕು. ಜೈನ ಸಮುದಾಯಕ್ಕೆ ಶೇ 20% ಮೀಸಲಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಜೈನ್ ಮುನಿಗಳು ಮನವಿ ಮಾಡಿದರು.
ಜೈನ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ಕೊಡುವ ನಿರ್ಧಾರ ವಾಪಸ್ ಪಡೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸಮಾವೇಶದಲ್ಲಿ ಜೈಮ ಮುಖಂಡರು, ಸ್ವಾಮೀಜಿಗಳು ಪಾಲ್ಗೊಂಡಿದ್ದಾರೆ. ಜೈನಮುನಿಗಳು ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಮೊಟ್ಟ ವಿತರಣೆ ನಿಲ್ಲಿಸುವಂತೆ ಕೇಳಿಕೊಂಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ
ಪ್ರಕರಣ ಸಿಬಿಐಗೆ ನೀಡುವುದು ಸೇರಿದಂತೆ ವಿವಿಧ ಬೇಡಿರಿಕೆಗಾಗಿ ಆಗ್ರಹಿಸಿ ಸೋಮವಾರ ಬೆಳಗಾವಿ ನಗರದ ಸುವರ್ಣ ಗಾರ್ಡನ್‌ನಲ್ಲಿ 'ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ'ದ ವತಯಿಂದ ಧರಣಿ ನಡೆಸಲಾಯಿತು. ಹೂಗಾರ ಸಮಾಜದ ವಿವಿಧ ನಾಮವಳಿ ಹೊಂದಿದ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಳ್ಳಿಗುದ್ದಿ ಗ್ರಾಮದ ಬಾಳಕೃಷ್ಣ ಹೂಗಾರ ಕಪಲೆ ಪ್ರಕರಣ ಹಾಗೂ ಶಂಕರ ಹೂಗಾರ ಪ್ರಕರಣಗಳನ್ನು ಸಿಬಿಐಗೆ ನೀಡಬೇಕು ಎಂದು ಸಂಘದ ಮುಖ್ಯಸ್ಥರು ಸರ್ಕಾರವನ್ನು ಒತ್ತಾಯಿಸಿದರು.
ಈವರೆಗೂ ತಮ್ಮ ಬೇಡಿಕೆಗಳನ್ನು ಆಲಿಸದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿನಿರತರು ಆಕ್ರೋಶ ಹೊರ ಹಾಕಿದರು. ನಮಗೆ ನ್ಯಾಯ ಕೊಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ ಅವರು, ಗೆಲ್ಲುವವರೆಗೂ ನಾವು ಹೋರಾಡುತ್ತಿವೆ ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟ
ಇತ್ತ 2ಎ ಮೀಸಲಾತಿಗೆ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಹೋರಾಟಕ್ಕೆ ರೂಪು ರೇಷೆ ಸಿದ್ಧವಾಗಿದೆ. ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಪಂಚಮಸಾಲಿಗಳು ಸಿದ್ಧವಾಗಿದ್ದಾರೆ. ಇತ್ತ ಸರ್ಕಾರ ಸಚಿವರು, ಪ್ರಮುಖ ನಾಯಕರನ್ನು ಬಿಟ್ಟು ಶ್ರೀಗಳು, ಹೋರಾಟಗಾರರ ಮನವೊಲಿಕೆಗೆ ಮುಂದಾಗಿದೆ.












Click it and Unblock the Notifications