ಬೆಳಗಾವಿ ಆಸ್ಪತ್ರೆಗೆ ಕೊವ್ಯಾಕ್ಸಿನ್ ಪ್ರಯೋಗ ಅನುಮತಿ ಸಿಗಲು ಏನು ಕಾರಣ?

ಬೆಳಗಾವಿ, ಜುಲೈ 05: ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗೆ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಅನುಮತಿ ನೀಡಿದ ಸುದ್ದಿ ತಿಳಿದಿರಬಹುದು. ಬಹುತೇಕ ಆಗಸ್ಟ್ 15ರೊಳಗೆ ಸ್ವದೇಶಿ ಲಸಿಕೆ ತಯಾರಾಗಿ, ಪ್ರಯೋಗ ಮಾಡಿ, ಫಲಿತಾಂಶ ಪಡೆದು, ಮಾರುಕಟ್ಟೆಗೆ ತರಲಾಗುತ್ತದೆ. ಕರ್ನಾಟಕದ ಬೆಳಗಾವಿಯ ಖಾಸಗಿ ಆಸ್ಪತ್ರೆ ಸೇರಿದಂತೆ ದೇಶದ ಹಲವೆಡೆ 12 ಆಸ್ಪತ್ರೆ, ಸಂಶೋಧನಾ ಕೇಂದ್ರಗಳಲ್ಲಿ ಪ್ರಯೋಗ ಜಾರಿಯಲ್ಲಿದೆ.

ಕ್ಲಿನಿಕಲ್ ಟ್ರಯಲ್ ಗೆ ಬಳಸಬಹುದು ಎಂದು ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದ ಬಳಿಕ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಗೆ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಕೂಡಾ ಅನುಮತಿ ನೀಡಿ, ಪ್ರಯೋಗಕ್ಕೆ ಅವಧಿ ನಿಗದಿ ಮಾಡಿದೆ. ಲಸಿಕೆ ತಯಾರಿಕೆಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐಜಿ) ಸಹಕಾರ ನೀಡಿದೆ.

ಹಲವು ವೈದ್ಯಕೀಯ ಸಂಸ್ಥೆ ಪೂರ್ವಭಾವಿ ಅಧ್ಯಯನಗಳಿಂದ ಕಂಡುಕೊಂಡ ಫಲಿತಾಂಶಗಳ ಆಧಾರದ ಮೇಲೆ ಮಾನವರ ಮೇಲೆ ಪ್ರಯೋಗಿಸಲು ಅನುಮತಿ ನೀಡಲಾಗಿದೆ ಎಂದು ಐಸಿಎಂಆರ್ ಹೇಳಿದೆ. ಕರ್ನಾಟಕದಲ್ಲಿ ಅನೇಕ ಉನ್ನತ ತಂತ್ರಜ್ಞಾನವುಳ್ಳ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿದ್ದರೂ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಮಾಡಲು ಅನುಮತಿ ಸಿಕ್ಕಿದ್ದು ಏಕೆ? ಎಂಬುದಕ್ಕೆ ಉತ್ತರ ಮುಂದಿದೆ...

ದೇಶದ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್

ದೇಶದ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್

ಕರ್ನಾಟಕದ ಬೆಳಗಾವಿಯ ಜೀವನ್ ರೇಖಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಬಹುತೇಕ ಆರಂಭಗೊಂಡಿದೆ. ಏಮ್ಸ್ ದೆಹಲಿ ಹಾಗೂ ಹೈದರಾಬಾದ್, ನಿಜಾಮ್ಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲೂ ರೋಗಿಗಳ ಮೇಲೆ ಈ ಲಸಿಕೆಯ ಮೊದಲ ಪ್ರಯೋಗ ನಡೆಯಲಿದೆ.

ಇದಲ್ಲದೆ, ಎಸ್ ಆರ್ ಎಂ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಕಾಂಚೀಪುರಂ, ಸರ್ಕಾರಿ ಸ್ವಾಮ್ಯದ ಕಿಂಗ್ ಜಾರ್ಜ್ ಆಸ್ಪತ್ರೆ, ವಿಶಾಖಪಟ್ಟಣಂ, ಏಮ್ಸ್ ಪಾಟ್ನಾ, ಗೋವಾದ ಸಿಆರ್ ಒಎಂ ಹಾಗೂ ರೇಡ್ಕರ್ ಆಸ್ಪತ್ರೆ ಸಹಯೋಗದಲ್ಲಿ ಪ್ರಯೋಗ ನಡೆಯಲಿದೆ.

ಸಂಶೋಧನಾ ಕೇಂದ್ರಗಳಿಲ್ಲದ ಆಸ್ಪತ್ರೆಗಳಿವೆ

ಸಂಶೋಧನಾ ಕೇಂದ್ರಗಳಿಲ್ಲದ ಆಸ್ಪತ್ರೆಗಳಿವೆ

ಕರ್ನಾಟಕದ ಬೆಳಗಾವಿಯ ಜೀವನ್ ಸಖಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಲ್ಲದೆ ಗಿಲುರ್ಕರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ(ನಾಗಪುರ್), ಪ್ರಖರ್ ಆಸ್ಪತ್ರೆ(ಕಾನ್ಪುರ್), ರಾಣಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ (ಗೋರಖ್ ಪುರ್) ಸಣ್ಣ ಮಟ್ಟದ ಖಾಸಗಿ ಆಸ್ಪತ್ರೆಗಳಿಗೂ ಅನುಮತಿ ನೀಡಲಾಗಿದೆ. ಈ ಆಸ್ಪತ್ರೆಗಳಲ್ಲಿ ಸಂಶೋಧನಾ ಕೇಂದ್ರಗಳಿಲ್ಲ, ಮೆಡಿಕಲ್ ಕಾಲೇಜ್ ಜೊತೆ ಸಂಪರ್ಕ ಹೊಂದಿಲ್ಲ ಎಂಬುದು ವಿಶೇಷ. ಪ್ರಖರ್ ಆಸ್ಪತ್ರೆ ಈ ಮುಂಚೆ ಮಲೇರಿಯಾಗೆ ಆಯುರ್ವೇದ ಔಷಧಿ ಪ್ರಯೋಗದಲ್ಲಿ ಪಾಲ್ಗೊಂಡಿತ್ತು. ರಾಣಾ ಆಸ್ಪತ್ರೆ ಐವಿಎಫ್ ನಲ್ಲಿ ಪರಿಣತಿ ಪಡೆದಿದೆ, ಇಲ್ಲಿ ತನಕ ಯಾವುದೇ ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿಲ್ಲ, ಇದು ಮೊದಲ ಅನುಭವ.

ಕ್ಲಿನಿಕಲ್ ಟ್ರಯಲ್ ನೀಡಲು ಕಾರಣವೇನು?

ಕ್ಲಿನಿಕಲ್ ಟ್ರಯಲ್ ನೀಡಲು ಕಾರಣವೇನು?

ಎಲ್ಲಾ ನಿಯಮಾವಳಿಗೆ ಬದ್ಧವಾಗಿದ್ದರಿಂದ ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸಂಶೋಧನಾ ಕೇಂದ್ರಗಳಿಲ್ಲದ್ದರೂ ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಲು ಮುಖ್ಯ ಕಾರಣ ಆ ಆಸ್ಪತ್ರೆಗಳಲ್ಲಿ ಈ ಮುಂಚೆ ನಡೆಸಲಾದ ಬೇರೆ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿವೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆ ಈ ಹಿಂದೆ ಟೈಫಾಯ್ಡ್ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ನಡೆಸಿದ ಮಾನ್ಯತೆ ಹೊಂದಿದ್ದರಿಂದ ಕೊವ್ಯಾಕ್ಸಿನ್ ಪ್ರಯೋಗಕ್ಕೆ ಆಯ್ಕೆ ಮಾಡಲಾಗಿದೆ ಎಂದು ಐಸಿಎಂಆರ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಯೋಗದ ಅವಧಿ 28 ದಿನಗಳು ಅಗತ್ಯ

ಪ್ರಯೋಗದ ಅವಧಿ 28 ದಿನಗಳು ಅಗತ್ಯ

ಒಮ್ಮೆ ಕ್ಲಿನಿಕಲ್ ಟ್ರಯಲ್ ಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡ ಬಳಿಕ, ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ಆತನ ದೇಹದಲ್ಲಿ Antibodies ಉತ್ಪಾದನೆಯಾಗಿ ಕೊವಿಡ್ 19 ವೈರಸ್ ವಿರುದ್ಧ ಸಂಪೂರ್ಣ ಹೋರಾಡುವ ಪ್ರತಿನಿರೋಧಕ ಶಕ್ತಿ ಯಶಸ್ವಿಯಾಗಲು 28 ದಿನಗಳು ಅಗತ್ಯವಿದೆ. ಆತುರವಾಗಿ ಡೇಟಾ ಪಡೆಯಲು ಸಾಧ್ಯವಿಲ್ಲ. ರೋಗಿಗಳ ವೈರಸ್ ವಿರುದ್ಧದ ನಿರೋಧಕ ಶಕ್ತಿ ಇತಿಹಾಸ, ಟ್ರಯಲ್ ಅವಧಿ ಹಾಗೂ ನಂತರದ ಸ್ಥಿತಿ ಗತಿ ಬಗ್ಗೆ ಸಮಗ್ರ ಮಾಹಿತಿಯನ್ನು ಸಮಿತಿ ಪರಿಶೀಲಿಸಲಿದೆ. ಕೇಂದ್ರ ಸಮಿತಿ ಅನುಮತಿ ನೀಡಿದ ಬಳಿಕ ಮಾರುಕಟ್ಟೆಗೆ ಲಸಿಕೆ ಬಿಡಬಹುದು ಎಂದು ಒಡಿಶಾದ ಮೆಡಿಕಲ್ ಸೈನ್ಸ್ ಎಸ್ ಯು ಎಂ ಆಸ್ಪತ್ರೆ ಎಪಿಡೆಮಿಯೊಲಾಜಿಸ್ಟ್ ಡಾ. ವೆಂಕಟ್ ರಾವ್ ಹೇಳಿದ್ದಾರೆ.

ಕ್ಲಿನಿಕಲ್ ಟ್ರಯಲ್ ಬಗ್ಗೆ ಮಾತನಾಡಿದ ಬೆಳಗಾವಿ ಆಸ್ಪತ್ರೆ ಪ್ರತಿನಿಧಿ

ಕ್ಲಿನಿಕಲ್ ಟ್ರಯಲ್ ಬಗ್ಗೆ ಮಾತನಾಡಿದ ಬೆಳಗಾವಿ ಆಸ್ಪತ್ರೆ ಪ್ರತಿನಿಧಿ

ಕ್ಲಿನಿಕಲ್ ಟ್ರಯಲ್ ಬಗ್ಗೆ ಮಾತನಾಡಿದ ಬೆಳಗಾವಿ ಆಸ್ಪತ್ರೆ ಪ್ರತಿನಿಧಿ ಡಾ ಅಮಿತ್ ಭಾತೆ, ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲು ಐಸಿಎಂಆರ್ ಅನುಮತಿ ನೀಡಿದೆ. ಈ ಬಗ್ಗೆ ಡೇಟಾ ದಾಖಲಿಕರಣ ಇನ್ನೂ ಆರಂಭಿಸಿಲ್ಲ, ನಿಗದಿತ ಅವಧಿಯಲ್ಲಿ ಕ್ಲಿನಿಕಲ್ ಟ್ರಯಲ್ ಯಶಸ್ವಿಗೊಳಿಸುವ ಭರವಸೆ ನೀಡುತ್ತೇವೆ, 200ಕ್ಕೂ ಅಧಿಕ ಮಂದಿಗೆ ಲಸಿಕೆ ನೀಡುವ ಅನುಮತಿ ಸಿಕ್ಕಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ 18 ರಿಂದ 55 ವರ್ಷದೊಳಗಿನ 50 ಮಂದಿ ಮೇಲೆ ಲಸಿಕೆ ಪ್ರಯೋಗವಾಗಲಿದೆ. ಈ ರೋಗಿಗಳಿಗೆ ಕಿಡ್ನಿ, ಹೃದಯ, ಶ್ವಾಸಕೋಶ, ಅನಿಯಮಿತ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಇರಬಾರದು ಎಂಬ ನಿಯಯವಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+