ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಜಲಾವೃತ

|
Google Oneindia Kannada News

ಬೆಳಗಾವಿ, ಆಗಸ್ಟ್ 6: ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಸಂಪೂರ್ಣ ಜಲಾವೃತವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರ, ಬೆಳಗಾವಿ, ಹುಬ್ಬಳ್ಳಿ, ಗದಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಪ್ರವಾಹವನ್ನು ತಂದೊಡ್ಡಿದೆ. ಇದಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಇತರೆ ಮನೆಗಳು ಕೂಡ ಜಲಾವೃತವಾಗಿದೆ.

ಬೆಳಗಾವಿ- ಪುಣೆ ರಾಷ್ಟ್ರೀಯ ಹೆದ್ದಾರಿ 4 ಜಲಾವೃತ; ಸಂಚಾರ ಬಂದ್ ಬೆಳಗಾವಿ- ಪುಣೆ ರಾಷ್ಟ್ರೀಯ ಹೆದ್ದಾರಿ 4 ಜಲಾವೃತ; ಸಂಚಾರ ಬಂದ್

ಮಲಪ್ರಭಾ ನದಿ ನೀರು ನುಗ್ಗುತ್ತಿದೆ. ಕೊಯ್ನಾ ಜಲಾಶಯ ಭರ್ತಿಯಾಗಿದ್ದು, ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿ ಕೃಷ್ಣಾದಿಂದಲೂ ಸಾಕಷ್ಟು ನೀರು ಬಿಡುಗಡೆ ಮಾಡಲಾಗಿದೆ.

Khanapur MLA Anjali Nimbalkar House Full Of Water

ಜಿಲ್ಲಾದ್ಯಂತ ರಭಸದ ಮಳೆ ಮುಂದುವರಿದಿದ್ದು, ಬೆಳಗಾವಿ- ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿ 4 ಜಲಾವೃತವಾಗಿ ಹೊಳೆಯಂತೆ ಕಾಣುತ್ತಿದೆ. ಕೇವಲ ಅರ್ಧ ಗಂಟೆಯಲ್ಲಿ 2 ಕಿಲೋ ಮೀಟರ್‌ವರೆಗೂ ನೀರು ತುಂಬಿಕೊಂಡು ಹೆದ್ದಾರಿಯ ಗುರುತೇ ಸಿಗದಂತಾಗಿದೆ.

ನೀರು ಸಂಪೂರ್ಣ ಇಳಿಯುವವರೆಗೂ ಸಂಚಾರ‌ ಮಾಡದಂತೆ ಬೆಳಗಾವಿಯ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದಾರೆ. ರೈಲ್ವೆ ಪೊಲೀಸ್ ಠಾಣೆಗೆ ನುಗ್ಗಿದ ನೀರು: ಬಿರುಸುಗೊಂಡ ಮಳೆಯಿಂದಾಗಿ ರೈಲ್ವೆ ಪೊಲೀಸ್ ಠಾಣೆಗೂ ನೀರು ನುಗ್ಗಿದೆ. ಸುಮಾರು ಎರಡು ಅಡಿಯಷ್ಟು ನೀರು ಒಳಗೆ ನುಗ್ಗಿದ್ದು, ಠಾಣೆಯಲ್ಲಿನ ದಾಖಲಾತಿಗಳು ಒದ್ದೆಯಾಗಿವೆ.

English summary
Khanapur MLA Anjali Nimbalkar House Full Of Water, As the monsoon rains strengthened across south Maharashtra and north Karnataka, five districts of north interior Karnataka Belagavi, Bagalkot, Vijayapura, Raichur and Yadgir continued to witness widespread flooding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X