• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದ ವೀರಯೋಧನಿಗೆ ಮರಣೋತ್ತರ ಕೀರ್ತಿ ಚಕ್ರ ಗೌರವ

|

ನವದೆಹಲಿ, ಆಗಸ್ಟ್ 15: ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು 111 ಯೋಧರಿಗೆ ಶೌರ್ಯ ಪ್ರಶಸ್ತಿ ನೀಡಲಾಯಿತು. ರಾಜ್ಯದ ವೀರಯೋಧ ಪ್ರಕಾಶ್ ಜಾಧವ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ಗೌರವ ಪ್ರಧಾನ ಮಾಡಲಾಯಿತು.

ರಾಷ್ಟ್ರೀಯ ರೈಫಲ್ಸ್ (ಮಹಾರ್) ನ ಸೇನಾ ಸದಸ್ಯರಾಗಿದ್ದ ಕರ್ನಾಟಕದ ಬೆಳಗಾವಿಯ ನಿಪ್ಪಾಣಿ ತಾಲೂಕಿನ ಸಪ್ಪರ್ ಪ್ರಕಾಶ್ ಜಾಧವ್ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ನೀಡಲಾಗಿದೆ.

ಪ್ರಕಾಶ್ ಜಾಧವ್ ಅವರು, ಕಳೆದ ವರ್ಷ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದರ ಜೊತೆಗೆ ಧೈರ್ಯದಿಂದ ಕಾದಾಡಿ ಹುತಾತ್ಮರಾಗಿದ್ದರು. ಪತ್ನಿ ಹಾಗೂ ಮಗಳನ್ನು ಅಗಲಿರುವ ಪ್ರಕಾಶ್ ಜಾಧವ್(29) 2007ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು.

ಬಾಲಾಕೋಟ್ ಏರ್‌ಸ್ಟ್ರೈಕ್‌ನ ಹೀರೋ, ಪಾಕಿಸ್ತಾನ ಸೈನ್ಯಕ್ಕೆ ಸಿಕ್ಕರೂ ಎದೆಗುಂದದೆ, ಶಾಂತತೆಯಿಂದ, ಸಮಚಿತ್ತತೆಯಿಂದ ವರ್ತಿಸಿ ಭಾರತೀಯ ಸೇನೆಯ ಕೀರ್ತಿಯನ್ನು ಜಗತ್ತಿಗೆ ಗೊತ್ತಾಗುವಂತೆ ಮಾಡಿದ ಅಭಿನಂದನ್ ಅವರಿಗೆ ಇಂದು ವೀರಚಕ್ರ ಗೌರವ ನೀಡಲಾಗಿದೆ.

ಅಷ್ಟೆ ಅಲ್ಲದೆ, ಬಾಲಾಕೋಟ್ ದಾಳಿಯಲ್ಲಿ ಪಾಕಿಸ್ತಾನದ ಸೇನಾ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದ ಎಲ್ಲ ವಾಯುಪಡೆಯ ಪೈಲೆಟ್‌ಗಳಿಗೆ ವಾಯುಸೇನಾ ಪದಕ ಪಡೆದಿದ್ದಾರೆ.

English summary
Karnataka Belgaum district's soldier Prakash Jadhav gets Keerthi Chakra award posthumous.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X