ಬೆಳಗಾವಿ : ಶುಕ್ರವಾರದ ಕಲಾಪದ ಮುಖ್ಯಾಂಶಗಳು

ಬೆಳಗಾವಿ, ಡಿ. 12 : ಪ್ರತಿಪಕ್ಷಗಳ ಧರಣಿ ನಡುವೆಯೇ ತಿದ್ದುಪಡಿ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಗಿದೆ. ಕಾನೂನು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಸಿಎಂ ಸಿದ್ದರಾಮಯ್ಯ ಪರವಾಗಿ ಐದು ವಿಧೇಯಕಗಳನ್ನು ಮಂಡಿಸಿದ್ದಾರೆ.

ಕರ್ನಾಟಕ ಮೌಲ್ಯವರ್ಧಿತ ತೆರಿಗೆ (2ನೇ ತಿದ್ದುಪಡಿ) 2014, ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2014, ಕರ್ನಾಟಕ ಶಿಕ್ಷಣ (ತಿದ್ದುಪಡಿ 2014), ಕರ್ನಾಟಕ ಕಾಕಂಬಿ ನಿಯಂತ್ರಣ 2014 ಹಾಗೂ ಕರ್ನಾಟಕ ಪೌರ ಸಭೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗಿದೆ. ವಿಧೇಯಕ ಮಂಡನೆ ಬಳಿಕ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.

cmin council

ಹೆಚ್ಚು ಶುಲ್ಕ ಪಡೆದರೆ ಕಠಿಣ ಕ್ರಮ : ವಿವಿ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಾಲೇಜುಗಳಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದಿರುವುದು ಸಾಬೀತಾದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದುಪಡಿಸುವುದಾಗಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ವಿಧಾನಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವಿ.ಸೋಮಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದರೆ ಅಂತಹ ಕಾಲೇಜುಗಳ ವಿರುದ್ಧ ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದರೆ ಮಾನ್ಯತೆ ರದ್ಧತಿ ಮಾಡಲಾಗುವುದು ಎಂದರು.

ಮಾಧ್ಯಮ ನಿಯಮ ಉಲ್ಲಂಘಿಸಿದರೆ ಕ್ರಮ : ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮದ ನಿಯಮ ಉಲ್ಲಂಘಿಸಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಎಚ್ಚರಿಸಿದ್ದಾರೆ. ವಿಧಾನಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಎಂ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿಡಿಪಿಐ, ಬಿಇಓ ಜೊತೆ ಈಗಾಗಲೇ ಮಾತುಕತೆ ನಡೆಸಿ ಶಿಕ್ಷಣ ಮಾಧ್ಯಮ ಉಲ್ಲಂಘಿಸಿ ನಡೆಸುತ್ತಿರುವ ಶಾಲೆಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಸದನದಲ್ಲಿ ಚೌವಾಣ್ ತಬ್ಬಿಬ್ಬು : ಶುಕ್ರವಾರದ ಕಲಾಪದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಔರಾದ್ ಶಾಸಕ ಪ್ರಭು ಚೌವಾಣ್ ಅವರಿಗೆ ಹೊರಹೋಗುವಂತೆ ಆದೇಶ ನೀಡಿದರೂ ಅವರು ಕುಳಿತೇ ಇದ್ದರು. ಕೊನೆಗೆ ಅಧಿಕಾರಿಗಳು ಚೌವಾಣ್ ಬಳಿ ಬಂದು ಸಭಾಧ್ಯಕ್ಷರು ರೂಲಿಂಗ್ ನೀಡಿದ್ದಾರೆ. ತಾವು ಹೊರ ಹೋಗಬೇಕೆಂದು ಹೇಳಿದರು. ಗುರವಾರದ ಇಡೀ ದಿನದ ಕಲಾಪವನ್ನು ನುಂಗಿದ್ದ ಪ್ರಭು ಚೌವಾಣ್ ಪ್ರಕರಣ ಇಂದು ಅವರನ್ನು ಒಂದು ದಿನ ಅಮಾನತು ಮಾಡುವುರೊಂದಿಗೆ ಮುಕ್ತಾಯಗೊಂಡಿದೆ.

ಸದನದಲ್ಲಿ 'ಕತ್ತಿ' ವರಸೆ : ಸದನದಲ್ಲಿ 'ಕತ್ತಿ' ವರಸೆ ಆರಂಭವಾಗಿದೆ. ಹುಕ್ಕೇರಿಯ ಬಿಜೆಪಿ ಶಾಸಕ ಶಾಸಕ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ರಚನೆ ವಿಚಾರ ಪ್ರಸ್ತಾಪಿಸಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಉಮೇಶ್ ಕತ್ತಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

umesh katti

ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಮಾಜಿ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಖನೆಗಳು ರೈತರಿಗೆ ಬಾಕಿ ಹಣವನ್ನು ಪಾವತಿ ಮಾಡುತ್ತಿಲ್ಲ. ಸರ್ಕಾರ ಇದನ್ನು ಕೊಡಿಸಲು ವಿಫಲವಾಗಿದೆ. ಇಲ್ಲೂ ಸರ್ಕಾರ ಉತ್ತರ ಕರ್ನಾಟಕ ಭಾಗದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ ಎಂದು ಸದನದಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಉತ್ತರ ಕೊಡಲಿ : ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಂತಾದವರು ಹಣಕಾಸು ಇಲಾಖೆಗೆ ಸಂಬಂಧಿಸಿದ ವಿಷಯಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ನೀಡಬೇಕು ಎಂದು ಸದನದಲ್ಲಿ ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಚಿವರ ಪರವಾಗಿ ಮುಖ್ಯಮಂತ್ರಿ ಉತ್ತರಿಸಬಹುದು. ಮುಖ್ಯಮಂತ್ರಿಯ ಪರವಾಗಿ ಸಚಿವರೂ ಉತ್ತರಿಸಬಹುದು. ಯಾರೇ ಉತ್ತರ ಕೊಟ್ಟರೂ ಅದು ಸರ್ಕಾರದ ಉತ್ತರವಾಗುತ್ತದೆ. ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಬೇಕು ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.

ಕಬ್ಬು ಸಮಸ್ಯೆ, ಸಚಿವರ ಉತ್ತರ : ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚೆ ಆರಂಭವಾಗಿದ್ದು ಸಹಕಾರ ಸಚಿವ ಮಹದೇವ ಪ್ರಸಾದ್ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. 2,500 ರೂ. ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಮಾಡಿದೆ. ಆದರೆ, ಕೆಲವು ಕಾರ್ಖಾನೆಗಳು ಈ ಹಣವನ್ನು ಪಾವತಿ ಮಾಡಿಲ್ಲ ಎಂದು ಸಚಿವರು ಸದನಕ್ಕೆ ಉತ್ತರ ನೀಡಿದರು.

ನಾಲ್ಕನೇ ದಿನದ ಕಲಾಪ ಆರಂಭ : ಬೆಳಗಾವಿ ಚಳಿಗಾಲದ ಅಧಿವೇಶನದ ಶುಕ್ರವಾರದ ಕಲಾಪ ಆರಂಭವಾಗಿದೆ. ಸದನಕ್ಕೆ ಇನ್ನು ಮೊಬೈಲ್ ತರುವಂತಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆದೇಶ ಹೊರಡಿಸಿದ್ದಾರೆ. ಪ್ರಭು ಚೌವಾಣ್ ಅವರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಲಾಗಿದೆ.

ಶುಕ್ರವಾರದ ಅಧಿವೇಶನ ಆರಂಭವಾಗುವುದಕ್ಕೂ ಮೊದಲು ವಿಧಾನಸಭೆಯಲ್ಲಿ ಮೊಬೈಲ್‌ ವೀಕ್ಷಣೆ ಪ್ರಕರಣದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ವರ್ತನೆ ವಿರೋಧಿಸಿ ಜೆಡಿಎಸ್‌ ಮೌನ ಪ್ರತಿಭಟನೆ ನಡೆಸಿತು. [ಗುರುವಾರದ ಕಲಾಪದಲ್ಲಿ ಏನಾಯ್ತು?]

ಸುವರ್ಣಸೌಧ ಮುಂಭಾಗದಿಂದ ವಿಧಾನಸಭೆ ಹಾಗೂ ವಿಧಾನಪರಿಷತ್‌ ಸಭಾಂಗಣದವರೆಗೂ ಜೆಡಿಎಸ್‌ ಸದಸ್ಯರು ಕನ್ನಡ ಬಾವುಟ ಹಿಡಿದು, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮೌನ ಮೆರವಣಿಗೆ ನಡೆಸಿದರು. [ಸದನದಲ್ಲಿ ಸುದ್ದಿ ಮಾಡಿದ ಚೌವಾಣ್ ಯಾರು?]

ಗುರುವಾರದ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಪ್ರಭು ಚೌವಾಣ್ ಫೋಟೋಗಳನ್ನು ನೋಡಿದ ವಿಷಯ ಪ್ರಸ್ತಾಪಿಸಿದ್ದರು. 'ಬಿಜೆಪಿ ಶೇಮ್ ಶೇಮ್' ಎಂದು ಘೋಷಣೆ ಕೂಗಲು ಆರಂಭಿಸಿದ್ದರು. ಬಿಜೆಪಿ ವಸತಿ ಸಚಿವ ಅಂಬರೀಶ್ ರಾಜೀನಾಮೆಗೆ ಪಟ್ಟು ಹಿಡಿದಿತ್ತು. ಆದ್ದರಿಂದ ಇಡೀ ದಿನದ ಕಲಾಪ ಮೊಬೈಲ್‌ ಗದ್ದಲಕ್ಕೆ ಬಲಿಯಾಗಿತ್ತು. ಇಂದು ಬಿಜೆಪಿ ಶಾಸಕರು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+