ಬೆಳಗಾವಿ: ಸಿಡಿ ಲೇಡಿ ಕಿಡ್ನಾಪ್ ಕೇಸ್ ಬೆಂಗಳೂರಿನ ಆರ್.ಟಿ ನಗರ ಠಾಣೆಗೆ ವರ್ಗಾವಣೆ

ಬೆಳಗಾವಿ, ಮಾರ್ಚ್ 18: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಿಡಿ ಯುವತಿಯ ಕಿಡ್ನಾಪ್ ಪ್ರಕರಣವನ್ನು ಬೆಳಗಾವಿಯಿಂದ ಬೆಂಗಳೂರಿನ ಆರ್.ಟಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಬೆಂಗಳೂರಿನ ಆರ್.ಟಿ.ನಗರಕ್ಕೆ ವರ್ಗಾವಣೆ ಮಾಡಿದ್ದಾರೆ. ಕಿಡ್ನಾಪ್ ಪ್ರಕರಣದ ಪ್ರಾಥಮಿಕ ವರದಿಯನ್ನು ಬೆಳಗಾವಿ ಎಪಿಎಂಸಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಪ್ರಕರಣದ ಪ್ರಾಥಮಿಕ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ ಬಳಿಕ, ಡಿಜಿ ಐಜಿಪಿಗೆ ಸಿಡಿ ಲೇಡಿ ಕಿಡ್ನಾಪ್ ಕೇಸ್ ಫೈಲ್ ಜೊತೆ ಬೆಂಗಳೂರಿಗೆ ರವಾನಿಸಲಾಯಿತು. ಈಗ ಯುವತಿಯ ಪೋಷಕರು ನೀಡಿದ್ದ ಅಪಹರಣ ಪ್ರಕರಣ ಬೆಂಗಳೂರಿಗೆ ವರ್ಗಾವಣೆಗೊಂಡಂತಾಗಿದೆ.

 Jarkiholi CDs Accused Girl Kidnap Case Transferred To RT Nagar Police Station From Belagavi

ಸಿಡಿ ಪ್ರಕರಣದ ಯುವತಿಯ ತಂದೆ ತಮ್ಮ ಮಗಳು ಬೆಂಗಳೂರಿನ ಪಿ.ಜಿಯಿಂದ ಅಪಹರಣ ಆಗಿದ್ದಾಳೆಂದು ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಬೆಂಗಳೂರಿನ ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಪಿಜಿಯಿಂದ ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಲಾಗಿತ್ತು.

ಜೀವ ಭಯ ಹಿನ್ನೆಲೆ ಬೆಂಗಳೂರಿಗೆ ತೆರಳದೆ ಬೆಳಗಾವಿಯಲ್ಲಿ ದೂರು ನೀಡುತ್ತಿದ್ದೇವೆ ಎಂದು ಯುವತಿಯ ತಂದೆ ದೂರಿನ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ ಪ್ರಾಥಮಿಕ ತನಿಖೆ ಮಾಡಿ ಪ್ರಕರಣವನ್ನು ಬೆಂಗಳೂರಿನ ಆರ್.ಟಿ.ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಸಿಡಿ ಪ್ರಕರಣವನ್ನು ಎಸ್ಐಟಿ ತಂಡವು ತನಿಖೆ ಚುರುಕುಗೊಳಿಸಿದ್ದು, ಕೆಲವು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ.

Recommended Video

      'ಯುವತಿ ನನ್ನನ್ನ ಸಂಪರ್ಕಿಸಿದ್ದು ನಿಜ, ಆದ್ರೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ' ಸಿಡಿ ಪ್ರಕರಣದ ಶಂಕಿತ ವ್ಯಕ್ತಿಯಿಂದ ವಿಡಿಯೋ ವೈರಲ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+