ಬುದ್ಧಿಮಾತು ಹೇಳಿದ್ದಕ್ಕೆ ಅಥಣಿಯಲ್ಲಿ ಹೆಂಡತಿಯನ್ನೇ ಕೊಂದ ಗಂಡ
ಬೆಳಗಾವಿ, ಮಾರ್ಚ್16: ಬುದ್ಧಿಮಾತು ಹೇಳಿದಳು ಎಂಬ ಕಾರಣಕ್ಕೆ ಹೆಂಡತಿಯನ್ನು ಗಂಡ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಅಥಣಿ ತಾಲೂಕಿನಲ್ಲಿ ನಡೆದಿದೆ.
ಲಕ್ಷ್ಮೀಬಾಯಿ (48) ಕೊಲೆಯಾದ ಮಹಿಳೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಸಿದ್ದರಾಯ ಮೊಳೆ ಕೊಡಲಿಯಿಂದ ಕೊಚ್ಚಿ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.

ಹೆಂಡತಿ ಜೊತೆ ಸಿದ್ದರಾಯ ಯಾವಾಗಲೂ ಜಗಳವಾಡಿಕೊಳ್ಳುತ್ತಿದ್ದ. ಹೀಗಾಗಿ ಗಂಡನಿಗೆ ಜಗಳವಾಡಬೇಡ ಎಂದು ಲಕ್ಷ್ಮೀಬಾಯಿ ಬುದ್ಧಿವಾದ ಹೇಳಿದ್ದಾರೆ. ಈ ಸಂದರ್ಭ, ನನಗೇ ಬುದ್ಧಿವಾದ ಹೇಳ್ತಿಯಾ ಎಂದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಥಣಿ ಪೊಲೀಸರು ಸಿದ್ದರಾಯನನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications