'ನಾನು ಏನೇ ಹೇಳಿದ್ರು ಉಲ್ಟಾ ಮಾಡಿ ಅಪಪ್ರಚಾರ ಮಾಡ್ತೀರಿ'

ಬೆಳಗಾವಿ, ಡಿ. 17 : ನಟ ಮತ್ತು ವಸತಿ ಸಚಿವ ಅಂಬರೀಶ್ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ. 'ರಾಜಕೀಯದಲ್ಲಿದ್ದೇವೆ ಎಂಬ ಕಾರಣಕ್ಕೆ ನಮ್ಮ ವಿರುದ್ಧ ಈ ರೀತಿ ವದಂತಿಗಳನ್ನು ಹಬ್ಬಿಸಬಾರದು. ನಮಗೂ ಆತ್ಮಗೌರವ, ಮರ್ಯಾದೆ ಎಂಬುದಿದೆ. ಮಗಳು, ಮೊಮ್ಮಗಳನ್ನು ಮುದ್ದಾಡುವ ಸ್ವಾತಂತ್ರ್ಯವೂ ನಮಗಿಲ್ಲವೇ?' ಎಂದು ಅವರು ಪ್ರಶ್ನಿಸಿದ್ದಾರೆ.

ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗೊಂದಿಗೆ ಮಾತನಾಡಿದ ವಸತಿ ಸಚಿವ ಅಂಬರೀಶ್, 'ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ರಾಜಕೀಯದಲ್ಲಿರುವ ವಿರುದ್ಧ ವದಂತಿಗಳನ್ನು ಹಬ್ಬಿಸುತ್ತೀರಿ, ರಾಜಕೀಯದಲ್ಲಿರುವ ಕಾರಣಕ್ಕಾಗಿ ನಾವು ಮಗಳು, ಮೊಮ್ಮಗಳನ್ನೂ ಮುದ್ದಾಡುವಂತಿಲ್ಲವೇ?' ಎಂದು ಪ್ರಶ್ನಸಿದರು.

Ambareesh

ಇತ್ತೀಚೆಗೆ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಆದ ಅಪಪ್ರಚಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಂಬರೀಶ್, 'ಮಾಧ್ಯಮಗಳ ಜತೆ ನಾನು ಮಾತನಾಡುವುದಿಲ್ಲ. ನಾನು ಏನೇ ಹೇಳಿದರೂ ಅದನ್ನು ಉಲ್ಟಾ ಮಾಡಿ ಅಪಪ್ರಚಾರ ಮಾಡುತ್ತಿದ್ದೀರಾ, ಮಗಳು, ಮೊಮ್ಮಗಳಿಗೆ ಮುತ್ತಿಕ್ಕಿದರೆ ಅಂಬರೀಶ್ ಯಾರನ್ನೋ ಇಟ್ಟುಕೊಂಡಿದ್ದಾನೆ ಎಂದು ಬಿಂಬಿಸಲಾಗುತ್ತಿದೆ' ಎಂದು ದೂರಿದರು. [ಅಂಬಿ 'ಮುತ್ತಿ'ನ ರಹಸ್ಯ ಬಯಲು]

'ರಾಜಕೀಯದಲ್ಲಿದ್ದೇವೆ ಎಂಬ ಕಾರಣಕ್ಕೆ ನಮ್ಮ ವಿರುದ್ಧ ಈ ರೀತಿ ವದಂತಿಗಳನ್ನು ಹಬ್ಬಿಸಬಾರದು. ನಮಗೂ ಆತ್ಮಗೌರವ, ಮರ್ಯಾದೆ ಎಂಬುದಿದೆ. ಮಗಳು, ಮೊಮ್ಮಗಳನ್ನು ಮುದ್ದಾಡುವ ಸ್ವಾತಂತ್ರ್ಯವೂ ನಮಗಿಲ್ಲವೇ? ಎಂದು ಪ್ರಶ್ನಿಸಿದ ಅಂಬರೀಶ್, 'ನಾಳೆ ಅಂಬರೀಶ್ ಮಗನನ್ನು ತಬ್ಬಿಕೊಂಡರೆ ಅಂಬರೀಶ್ ಸಲಿಂಗಕಾಮಿ ಎಂದು ಬಿಂಬಿಸಬಹುದೇನೋ?' ಎಂದು ಹೇಳಿ ಕಲಾಪಕ್ಕೆ ಹೊರಟು ಹೋದರು.

ಅಂದಹಾಗೆ ಅಂಬರೀಶ್ ಅವರು ನಟ ಜೈಜಗದೀಶ್ ಅವರ ಪುತ್ರಿ ವೈಭವಿ ಅವರ ಗಲ್ಲಕ್ಕೆ ಚುಂಬಿಸಿದ ಫೋಟೋ ಕಳೆದವಾರ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ಇದರ ಬಗ್ಗೆ ಭಾರೀ ಚರ್ಚೆ ನಡೆದ ನಂತರ ವೈಭವಿ ಅವರೇ ಈ ಬಗ್ಗೆ ಮಾಧ್ಯಮಗಳಿಗೆ ಬಂದು ಸ್ಪಷ್ಟನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+