Belagavi: ಕುಂದಾನಗರಿ ಬೆಳಗವಿ ಜಿಲ್ಲೆಯ ಹಲವೆಡೆ ಮಟ ಮಟ ಮಧ್ಯಾಹ್ನವೇ ಆರ್ಭಟಿಸಿದ ಮಳೆರಾಯ, ಏನೆಲ್ಲಾ ಅನಾಹುತಗಳಾದ್ವು ಗೊತ್ತಾ?
Belagavi: ಈಗಾಗಲೇ ಕಳೆದ ಕೆಲವು ವಾರಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿದೆ. ಇದೀಗ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಇಂದು (ಜೂನ್ 06) ಮಟ ಮಟ ಮಧ್ಯಾಹ್ನವೇ ಕುಂದಾನಗರಿ ಬೆಳಗಾವಿ ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಹಾಗಾದರೆ ಭಾರೀ ಮಳೆಯಿಂದ ಏನೆಲ್ಲಾ ಅನಾಹುತಗಳು ಸಂಭವಿಸಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕುಂದಾನಗರಿ ಬೆಳಗಾವಿ ಮತ್ತು ಅಕ್ಕಪಕ್ಕದ ಹಳ್ಳಿಗಳಲ್ಲಿ ಗುರುವಾರ (ಜೂನ್ 06) ಮಧ್ಯಾಹ್ನವೇ ಧಾರಕಾರ ಮಳೆ ಸುರಿದಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಸುಮಾರು ಮಧ್ಯಾಹ್ನ 2 ಗಂಟೆ ವೇಳೆಗೆ ಅಬ್ಬರದ ಮಳೆಯಾದ ಪರಿಣಾಮ ನಗರದ ಹಲವೆಡೆ ಮನೆಗಳು ಜಲಾವೃತವಾದ ಘಟನೆಗಳು ನಡೆದಿದೆ.

ಕುಂದಾನಗರಿ ಬೆಳಗಾವಿ ಮತ್ತು ಅಕ್ಕಪಕ್ಕದ ಹಳ್ಳಿಗಳಲ್ಲಿ ಗುರುವಾರ (ಜೂನ್ 06) ಮಧ್ಯಾಹ್ನವೇ ಧಾರಕಾರ ಮಳೆ ಸುರಿದಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಸುಮಾರು ಮಧ್ಯಾಹ್ನ 2 ಗಂಟೆ ವೇಳೆಗೆ ಅಬ್ಬರದ ಮಳೆಯಾದ ಪರಿಣಾಮ ನಗರದ ಹಲವೆಡೆ ಮನೆಗಳು ಜಲಾವೃತವಾದ ಘಟನೆಗಳು ನಡೆದಿದೆ ಅಂತಾ ಪ್ರಜಾವಾಣಿ ವರದಿ ಮಾಡಿದೆ
ಹೊಸೂರು ರಸ್ತೆಯ ವಿಜಯ ಸೋಸಿಯಲ್ ಕ್ಲಬ್, ಪೊಲೀಸ್ ಠಾಣೆ, ಬಸ್ ನಿಲ್ದಾಣ ಮುಖ್ಯ ರಸ್ತೆಗಳು ಮಳೆ ನೀರಿನಿಂದ ಕೆರೆಯಂತೆ ಮಾರ್ಪಟ್ಟಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಈಟಿ ಬಸವೇಶ್ವರ ದೇವಸ್ಥಾನ ಹತ್ತಿರದ ಎಂ.ಜಿ.ಹೌಸಿಂಗ್ ಕಾಲೊನಿಯಲ್ಲೂ ಭಾರೀ ಮಳೆಯಿಂದ ಸೂಕ್ತ ರಸ್ತೆಗಳಿಲ್ಲ ಕಾರಣ ಇಡೀ ಕಾಲೊನಿ ಕೆಸರುಮಯವಾಗಿ ಮಾರ್ಪಟ್ಟಿದ್ದು, ಇಲ್ಲಿನ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ತಿಳಿದುಬಂದಿದೆ.
ಇನ್ನು ಇಂಚಲ ಕ್ರಾಸ್‌ನಲ್ಲಿ ಗುಂಡಿಗಳು ತುಂಬಿ ಹರಿದಿದ್ದರಿಂದ ತಾಲ್ಲೂಕು ಕೇಂದ್ರ ಬಸ್ ನಿಲ್ದಾಣ, ರಾಯಣ್ಣ ವೃತ್ತದ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ತುಂಬಿ ಹರಿದಿದೆ. ಅಲ್ಲದೆ, ಬಜಾರ ಗಣಾಚಾರಿ ಮಳಿಗೆ ಹಿಂಬದಿಯ ಗುಂಡಿಗಳು ಸಹ ತುಂಬಿ ತ್ಯಾಜ್ಯ ಸಹಿತ ಮುಖ್ಯ ರಸ್ತೆ ಮೇಲೆ ಹರಿದಿದೆ. ಪರಿಣಾಮ ಬಜಾರ ರಸ್ತೆ ಕೆಲಕಾಲ ದುರ್ವಾಸನೆಯಿಂದ ಕೂಡಿದ್ದು, ಇದರಿಂದ ಇಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ, ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಟಾರುಗಳ ದುರಸ್ತಿಗೆ ತುರ್ತು ಕ್ರಮ ವಹಿಸಿದರು. ಗಟಾರುಗಳಲ್ಲಿನ ತ್ಯಾಜ್ಯ ತೆರವುಗಳಿಸಿ ಮಳೆ ನೀರು ಹರಿದುಹೋಗಲು ಅನುವು ಮಾಡಿಕೊಟ್ಟರು. ಈ ವೇಳೆ ಬಜಾರ ರಸ್ತೆಯಲ್ಲಿ ತಾಸುಗಳವರೆಗೆ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.












Click it and Unblock the Notifications