Get Updates
Get notified of breaking news, exclusive insights, and must-see stories!

ಕನ್ನಡ ಕಟುಕರ ಕೈಯಲ್ಲಿ ಸಿಲುಕಿಕೊಂಡಿದೆ; ಮಾಜಿ ಸಿಎಂ ಎಚ್‌ಡಿಕೆ ಆಕ್ರೋಶ

ಬೆಳಗಾವಿ, ಡಿಸೆಂಬರ್ 21: ಬೆಳಗಾವಿಯಲ್ಲಿ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಪುಂಡಾಟದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ ಅಂತ ನಾನು ಹಿಂದೆಯೇ ಹೇಳಿದ್ದೆ, ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ. ಬೆಳಗಾವಿಯಲ್ಲಿ ನಡೆದ ವಿಕೃತಿ ಬಗ್ಗೆ, #ಕನ್ನಡಿಗರಹೆಮ್ಮೆ ಸಂಗೊಳ್ಳಿ ರಾಯಣ್ಣ ಅವರಿಗಾದ ಅಪಚಾರದ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳ ಬದ್ಧತೆ ಬಗ್ಗೆ ಈಗ ಪ್ರಶ್ನೆ ಉಂಟಾಗಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಮಾತೆತ್ತಿದರೆ ರಾಷ್ಟ್ರದ ಸಮಗ್ರತೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕವು 30 ರಾಜ್ಯಗಳಲ್ಲಿ ಒಂದು ರಾಜ್ಯವಷ್ಟೆ. ಕನ್ನಡವು ದೇಶದ ಭಾಷೆಗಳಲ್ಲಿ ಒಂದು ಭಾಷೆ ಮಾತ್ರ. ಆದರೆ ನಮಗೆ ಕರ್ನಾಟಕವೇ ಕರ್ಮಭೂಮಿ. ಕನ್ನಡವೇ ತಾಯಿ. ನಾವು ಕನ್ನಡಮ್ಮನ ಕರುಳಬಳ್ಳಿಗಳು ಎಂದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

Former CM HD Kumaraswamy Condemns MES And Shiv Sena Activists Violence Against Kannadigas


ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಕೇವಲ ಚುನಾವಣೆ ಬಂದಾಗ ವೋಟ್ ಮಾಡುವ ಮತಯಂತ್ರ ಹಾಗೂ ತೆರಿಗೆ ರೂಪದಲ್ಲಿ ಕೇಂದ್ರದ ಖಜಾನೆ ತುಂಬುವ ಅಕ್ಷಯ ಪಾತ್ರೆ. ಆದರೆ, ನಮಗೆ ನೆರೆ, ಬರ ಬಂದಾಗ ಅವರ ಮುಂದೆಯೇ ಭಿಕ್ಷೆಗೆ ನಿಲ್ಲಬೇಕು! ಇದೆಂಥಾ ವಿಪರ್ಯಾಸ? ಎಂದು ವ್ಯಂಗ್ಯವಾಡಿದರು.

ಗಡಿ, ಭಾಷೆ, ಜಲದ ಪ್ರಶ್ನೆ ಬಂದಾಗ ರಾಷ್ಟ್ರೀಯ ಪಕ್ಷಗಳ ಆದ್ಯತೆ ಕನ್ನಡ- ಕರ್ನಾಟಕ ಅಲ್ಲ. ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡಲು ಬಂದವರನ್ನು ಸಹಿಸಿಕೊಳ್ಳುತ್ತಿದ್ದೇವೆ. ಕನ್ನಡಿಗರ ತೆರಿಗೆ ಹಣದಲ್ಲಿ ಜಾರಿ ಮಾಡಿದ ಯೋಜನೆ, ರಸ್ತೆ, ಸೇತುವೆಗಳಿಗೆ ಮಹಾರಾಷ್ಟ್ರದಲ್ಲಿ ಹುಟ್ಟಿದವರ ಹೆಸರಿಟ್ಟು ಔದಾರ್ಯ ತೋರುತ್ತಿದ್ದೇವೆ. ಇದು ಇನ್ನೆಷ್ಟು ದಿನ? ಎಂದು ಅಸಮಾಧಾನ ಹೊರಹಾಕಿದರು.

Former CM HD Kumaraswamy Condemns MES And Shiv Sena Activists Violence Against Kannadigas

ಬೆಳಗಾವಿಯ ಒಂದು ಹಳ್ಳಿಯಲ್ಲಿ ಹುಟ್ಟಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಅದೇ ಬ್ರಿಟಿಷರು ಬಿಗಿದ ನೇಣು ಹಗ್ಗಕ್ಕೆ ಕೊರಳು ಕೊಟ್ಟ ಸಂಗೊಳ್ಳಿ ರಾಯಣ್ಣ ಅವರನ್ನು ಅಪಮಾನಿಸುತ್ತಾರೆ. ಅದೇ ಮೊಘಲರ ವಿರುದ್ಧ ಹೋರಾಡಿದ ಶಿವಾಜಿಯನ್ನು ಕೊಂಡಾಡುತ್ತಾರೆ. ಇದೆಂಥಾ ದೇಶಪ್ರೇಮ? ರಾಷ್ಟ್ರಪ್ರೇಮದಲ್ಲೂ ಬೇಧ ಭಾವವೇ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

2006ರಲ್ಲಿ ಶಿವಸೇನೆ- ಎಂಇಎಸ್ ಗಡಿ ತಂಟೆ ಮಾಡಿದಾಗ, ಆಗ ಕೇಂದ್ರದಲ್ಲಿ ಗೃಹ ಮಂತ್ರಿಯಾಗಿದ್ದ ಅದೇ ರಾಜ್ಯದ ನಾಯಕರು ಬೆಳಗಾವಿ ಮೇಲೆ ಕಣ್ಣು ಹಾಕಿದಾಗ, ಅಲ್ಲಿ ವಿಧಾನಸಭೆ ಕಲಾಪ ನಡೆಯಿತು. ಸುವರ್ಣಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆಯೂ ಆಯಿತು. ಇದು ಕನ್ನಡದ ಒಂದು ಸಣ್ಣ ಪಕ್ಷಕ್ಕೆ ಇದ್ದ ಬದ್ಧತೆ. ಈ ಎದೆಗಾರಿಕೆ ರಾಷ್ಟ್ರೀಯ ಪಕ್ಷಗಳಿಗೆ ಏಕಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಾಯಣ್ಣರ ಪ್ರತಿಮೆ ಮೇಲೆ ʼಕೈʼ ಇಟ್ಟವರ ಮೇಲೆ ಕರುಣೆ ತೋರುತ್ತಿರುವುದು ಯಾಕೆ? ಎಂಇಎಸ್ ಬಗ್ಗೆ ಎರಡು ನಾಲಗೆಯಲ್ಲಿ ಮಾತನಾಡುವ ʼಕೈಚಳಕʼದ ಮರ್ಮವೇನು? ಮಸೂದೆಗಳನ್ನು ಇಟ್ಟುಕೊಂಡು ಕನ್ನಡದ ಆಸ್ಮಿತೆಯ ಮೇಲಾದ ದಾಳಿಯನ್ನು ʼವಿಷಯಾಂತರʼ ಮಾಡುವ ಹುನ್ನಾರ ಏಕೆ? ಎಂದು ಪರೋಕ್ಷವಾಗಿ ವಿಪಕ್ಷ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದರು.

Former CM HD Kumaraswamy Condemns MES And Shiv Sena Activists Violence Against Kannadigas

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ಮಹಾನ್ ನಾಯಕರನ್ನು ಅಪಮಾನಗೊಳಿಸುವವರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮಂಗಳವಾರ ಬೆಳಗಾವಿಯ ಅನಗೋಳ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಾಣೆ ಮಾಡಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಯಣ್ಣ ಮೂರ್ತಿ ಧ್ವಂಸ ಅಪಮಾನ ಮಾಡುವವರು ಮಾನಸಿಕ ರೋಗಿಗಳು. ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಈ ರೀತಿ ಮಾಡುತ್ತಿದ್ದಾರೆ. ಆದರೆ ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರು ಶಿವಾಜಿ ಮೂರ್ತಿಗೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿ 7 ಜನರನ್ನು ಬಂಧಿಸಲಾಗಿದೆ. ಅನಗೋಳ ರಾಯಣ್ಣ ಮೂರ್ತಿಗೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿ 37 ಜನರನ್ನು ಬಂಧಿಸಲಾಗಿದೆ. ಬಸವೇಶ್ವರ ಭಾವಚಿತ್ರ ಅಪಮಾನ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+