ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಐವರು ಪೊಲೀಸರಿಗೂ ಸೋಂಕು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮೇ 27: ಪೊಲೀಸರ ಎದೆಯಲ್ಲೂ ಕೊರೊನಾ ನಡುಕ ಹುಟ್ಟಿಸಿದೆ. ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸಿದ ಐವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

Recommended Video

3C ಪಾಲಿಸಿ ಮೂಲಕ ಕೊರೊನಾ ವಿರುದ್ಧ ಜಯಸಾಧಿಸಿದ ಜಪಾನ್..! | Japan against Corona

ಹಾಸನ ಮೂಲದ ಐವರು ಪೊಲೀಸರಿಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ತಿಳಿದುಬಂದಿದ್ದು, ಅವರ ಜತೆ ಕರ್ತವ್ಯ ನಿರ್ವಹಿಸಿದ್ದ ಇಲ್ಲಿನ ಪೇದೆಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಈಗ ಆತಂಕ ಶುರುವಾಗಿದೆ. ಕುಗನೊಳ್ಳಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕರ್ನಾಟಕದ ಗಡಿಯಾಗಿದ್ದು, ಗಡಿಯ ಚೆಕ್ ಪೋಸ್ಟ್ ಗೆ ಕರ್ತವ್ಯಕ್ಕೆಂದು ಹಾಸನ ಮೂಲದ ಪೊಲೀಸರು ಹಾಜರಾಗಿದ್ದರು. ಈಗ ಇವರಲ್ಲಿ ಕೊರೊನಾ ಇರುವುದು ಪತ್ತೆಯಾಗಿದೆ.

 Five Policemen Tested Coronavirus Positive In Belagavi

ಮಂಡ್ಯದಲ್ಲಿ ಪೇದೆಗೆ ಕೊರೊನಾ; ಸನ್ನಡತೆಯ ಕೈದಿಗಳ ಬಿಡುಗಡೆ?ಮಂಡ್ಯದಲ್ಲಿ ಪೇದೆಗೆ ಕೊರೊನಾ; ಸನ್ನಡತೆಯ ಕೈದಿಗಳ ಬಿಡುಗಡೆ?

ಕೊರೊನಾ ಕುರಿತ ಕರ್ತವ್ಯಕ್ಕಾಗಿ 150ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬೆಳಗಾವಿ ಜಿಲ್ಲಾಡಳಿತ ನಿಯೋಜಿಸಿತ್ತು. ಇದೀಗ ಕರ್ತವ್ಯದಲ್ಲಿರುವ ಪೊಲೀಸರಿಗೂ ಭಯ ಕಾಡುತ್ತಿದೆ. ಮೇ 20ರಂದು ಬೆಳಗಾವಿಯಿಂದ ಹಾಸನಕ್ಕೆ ಹಿಂದಿರುಗಿದ್ದ ಪೊಲೀಸ್ ಸಿಬ್ಬಂದಿಗೆ ನಿನ್ನೆಯ ಹೆಲ್ತ ಬುಲೇಟಿನ್ ನಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢವಾದ ಹಿನ್ನೆಲೆಯಲ್ಲಿ ನಿಪ್ಪಾಣಿ ಚೆಕ್ ಪೋಸ್ಟ್ ನಲ್ಲಿ ಆತಂಕ ಶುರುವಾಗಿದೆ.

English summary
Five hassan based policemen who were in belagavi checkpost duty tested coronavirus positive
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X