NWKRTC: ಬೆಳಗಾವಿ ಘಟಕದಲ್ಲೇ ನೇಣಿಗೆ ಕೊರಳೊಡ್ಡಿದ ಚಾಲಕ: ಸಾರಿಗೆ ಇಲಾಖೆ ಹೇಳೋದೇನು?
ಬೆಳಗಾವಿ, ಏಪ್ರಿಲ್ 02: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬೆಳಗಾವಿ 2ನೇ ಘಟಕದಲ್ಲಿ ಬೆಳಗ್ಗೆ ಚಾಲಕ ಆತ್ಮತ್ಯೆ ಮಾಡಿಕೊಂಡ ಘಟನೆ ಬುಧವಾರ (ಏಪ್ರಿಲ್ 2)ಬೆಳಗ್ಗೆ 7 ಗಂಟೆ ಆಸುಪಾಸಿಗೆ ಜರುಗಿದೆ. ಪ್ರಕರಣವು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಘಟನೆ, ಕಿರುಕುಳ, ಸಿಬ್ಬಂದಿ ಸಾವಿನ ಕುರಿತು NWKRTC ಸಾರಿಗೆ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ.
ಮೃತ ಚಾಲಕನನ್ನು ಬಾಲಚಂದ್ರ ಎಸ್ ತುಕ್ಕೋಜಿ (48) ದುರ್ದೈವಿಯಾಗಿದ್ದಾರೆ. ಘಟಕದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಚಾಲಕ 2ನೇ ಘಟಕದಲ್ಲಿ 19 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಯಾವುದೇ ಹಂತದಲ್ಲಿಯೂ ಸಹ ಅವರು ಘಟಕ ವ್ಯವಸ್ಥಾಪಕರು ಅಥವಾ ಸಂಸ್ಥೆಯ ಅಧಿಕಾರಿಗಳೊಂದಿಗೆ ತಂಟೆ ತಕರಾರು ಇಲ್ಲದೇ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಮಾರ್ಚ್ 17 ರಿಂದ 27ರವರೆಗೆ ಅವರಿಗೆ ರಜೆ ನೀಡಲಾಗಿತ್ತು. ಅದೇ ರೀತಿ ದಿನಾಂಕ ಮಾರ್ಚ್ 29 ರಿಂದ 30-3-25 ರಂದು ಅವರು ಕರ್ತವ್ಯಕ್ಕೆ ಬಾರದೇ ಇದ್ದರೂ ಸಹ ಅವರಿಗೆ ನಂತರದಲ್ಲಿ ಅವರಿಗೆ ರಜೆ ಮಂಜೂರಾತಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸದ್ಯ ಸಾರಿಗೆ ಇಲಾಖೆ ಘಟನೆ, ಚಾಲಕ ಸಾವಿನ ಕುರಿತು ನೀಡಿದ ಸ್ಪಷ್ಟನೆ ತನಿಖೆ ನಡೆಸಿ ತೀರ್ಪು ಕೊಟ್ಟಂತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
10 ವರ್ಷಗಳಿಂದ ಕೌಟುಂಬಿಕ ವೈಷಮ್ಯ?
ನಂತರ ಮಾರ್ಚ್ 31 ಮತ್ತು ಏಪ್ರಿಲ್ 1 ಮೃತ ಚಾಲಕರು ಕರ್ತವ್ಯ ನಿರ್ವಹಿಸಿದ್ದಾರೆ. ಮೃತ ಚಾಲಕ ತಾಯಿ ಯಲ್ಲವ್ವ ಮತ್ತುವರ ಸಹೋದರಿಅವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಣ್ಣೀರಲ್ಲಿ ಮುಳುಗಿದ್ದಾರೆ. ಬಾಲಚಂದ್ರ ಮತ್ತು ಅವನ ಹೆಂಡತಿ ಶ್ರೀಮತಿ ಶಿಲ್ಪಾ ಇವರಿಗೆ ಕಳೆದ 10 ವರ್ಷಗಳಿಂದ ಕೌಟುಂಬಿಕ ವೈಷಮ್ಯ ಇತ್ತು NWKRTC ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ.

ಮೃತ ಬಾಲಚಂದ್ರ ತಮ್ಮ ತಾಯಿಯನ್ನು ಹಾಗೂ ಸಹೋದರಿ ಭೇಟಿ ಮಾಡಿದರೆ, ಆರ್ಥಿಕವಾಗಿ ಚಿಕ್ಕ ಪುಟ್ಟ ಸಹಾಯ ಮಾಡಿದರೇ ಅವರೊಂದಿಗೆ ಪತ್ನಿ ಜಗಳ ಕಾಯ್ದು ಅವನಿಗೆ ಹಿಂಸೆ ಮಾಡಿದ್ದರು. ಈ ಸಂಬಂಧ ಒದ್ದಾಡುತ್ತಿದ್ದ ಚಾಲಕ ಪತ್ನಿ, ತಾಯಿಯ ಕಡೆಯಿಂದ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು NWKRTC ಮುಖ್ಯಸ್ಥರು ತಿಳಿಸಿದ್ದಾರೆ..
ಮೃತ ಚಾಲಕನಿಗೆ ಕಿರುಕುಳ, ತೊಂದರೆ ನೀಡಿಲ್ಲ: ಇಲಾಖೆ
ಈ ಕುರಿತು ಬೆಳಗಾವಿ ಮಾರ್ಕೆಟ್ ಪೊಲಿಸ್ ಠಾಣೆಯ ಅಧಿಕಾರಿಗಳು ಎಲ್ಲ ಮಾಹಿತಿ ಪಡೆದು ಪ್ರಾಥಮಿಕ ಹಂತದ ತನಿಖೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ. ಇದರ ಬೆನ್ನಲ್ಲೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಮೃತರು ಘಟಕದಲ್ಲಿ ಸುಮಾರು 19 ,ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ರಜೆ ಅಥವಾ ಯಾವುದೇ ವಿಷಯದಲ್ಲಿ ಘಟಕ ವ್ಯವಸ್ಥಾಪಕರಿಂದಾಗಲೀ ಅಥವಾ ಸಂಸ್ಥೆಯ ಯಾವುದೇ ಅಧಿಕಾರಿಗಳಿಂದಾಗಲಿ ಯಾವುದೇ ರೀತಿಯ ತೊಂದರೆ ಇಲ್ಲವೇ ಕಿರುಕುಳ ನೀಡಲಾಗಿಲ್ಲ ಎಂದು NWKRTC ಸ್ಪಷ್ಟನೆ ನೀಡಿದೆ.
ಮೃತರ ತಾಯಿ ಯಲ್ಲವ್ವ ಅವರು ಮಾರ್ಕೆಟ್ ಪೊಲಿಸ್ ಠಾಣೆ ಮಗನ ಆತ್ಮಹತ್ಯೆಗೆ ಅವನ ಪತ್ನಿ ಶಿಲ್ಪಾ ಅವರ ಕಿರುಕುಳವೇ ಕಾರಣ ಎಂದು ದೂರು ನೀಡಿದ್ದಾರೆ ಎಂದು ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ಆತ್ಮಹತ್ಯೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಇತ್ಯಾದಿಗಳು ದೊರೆತಿಲ್ಲ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ. ಸದ್ಯ ನಡೆದ ಘಟನೆ, ಬೆಳವಣಿಗೆ, ದೊರೆತ ಮಾಹಿತಿ ಆಧಾರದಲ್ಲಿ ಪೊಲಿಸ್ ಅಧಿಕಾರಿಗಳು ಮುಂದಿನ ಕ್ರಮ ಜರುಗಿಲಿಸದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸದ್ಯ ಚಾಲಕ ಮೃತಪಟ್ಟಿದ್ದು ಖಚಿತವಾಗಿದೆ. ಆದರೆ ಇದಕ್ಕೆ ಕೌಟಿಂಬಿಕ ವೈಷಮ್ಯ ಕಾರಣವಾ ಅಥವಾ ಘಟಕದಲ್ಲಿ ಚಾಲಕನಿಗೆ ಕಿರುಕುಳ ನೀಡಲಾಗಿತ್ತಾ? ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಲಿದೆ..












Click it and Unblock the Notifications