ಬೆಳಗಾವಿ ಜೈಲಿಗೆ ಪ್ರದೂಶ್ ಶಿಫ್ಟ್: ಸುಧಾರಿತ ಜಾಮರ್, ಸಿಸಿಟಿವಿ ಅಳವಡಿಕೆ ಮೊದಲೇ ಶಿಫ್ಟ್, ಜೈಲಧೀಕ್ಷಕರು ಹೇಳಿದ್ದೇನು?
ಬೆಳಗಾವಿ, ಆಗಸ್ಟ್ 29: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪಿಗಳಿಗೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕ ಹಿನ್ನೆಲೆಯಲ್ಲಿ ನಟ ದರ್ಶನ್, ಪ್ರದೂಶ್ ಸೇರಿ ಕೆಲವು ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಯಿತು. ಅದರಂತೆ ಪ್ರದೂಶ್‌ನನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಕುರಿತು ಜೈಲಿನ ಉಪ ಅಧೀಕ್ಷಕರು ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಬೆಳಗಾವಿ ಜೈಲಿಗೆ ರೇನುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಶ್ ಸ್ಥಳಾಂತರಿಸಿದ ಬಳಿಕ ಸುದ್ದಿಗಾರರ ಜೊತೆಗೆ ಹಿಂಡಲಗಾ ಕಾರಾಗೃಹದ ಉಪ ಅಧಿಕ್ಷಕ ವಿ. ಕೃಷ್ಣಮೂರ್ತಿ ಮಾತನಾಡಿದ್ದಾರೆ. ಪ್ರದೂಶ್‌ನನ್ನು ಅತಿ ಭದ್ರತಾ ಕೊಠಡಿಯಲ್ಲಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಜೈಲಿಗೆ ಪ್ರದೂಶ್ ಆಗಮನಕ್ಕೂ ಮುನ್ನ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆರೋಪಿಗಳ ಚಲನವಲನಗಳ ಮಾಹಿತಿಗಾಗಿ ಜೈಲಿನಲ್ಲಿ ಮತ್ತು ಹೊರಗೆ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಅತಿ ಭದ್ರತಾ ವಿಭಾಗದಲ್ಲಿ ಪ್ರದ್ರೂಶ್ ಸ್ಥಳಾಂತರಿಸಲಾಗಿದೆ ಎಂದರು.
ಈ ಜೈಲಿನಲ್ಲಿ ಆರೋಪಿಗಳ ಮೇಲೆ ಸಹಾಯಕ ಜೈಲರ್ ಹಾಗೂ ಏಳು ಜನ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ, ನಿಗ ಇಡಲಿದ್ದಾರೆ. ಜೈಲಿನ ಎಲ್ಲ ನಿಯಮ ಪಾಲಿಸಲಾಗುವುದು. ಜೈಲಿನಲ್ಲಿ 2 ಜಿ ಜಾಮರ್ ಇದ್ದು. 5G ಜಾಮರ್ ಅಳಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಟೆಂಡರ್ ಪಡೆದವರಿಗೆ ನಾವು ಒತ್ತಾಯ ಮಾಡಿದ್ದೇವೆ ಆದಷ್ಟು ಬೇಗ ಮುಗಿಸಿ ಕೊಡಬೇಕೆಂದು ಸೂಚಿಸಿದ್ದೇವೆ ಎಂದು ಅವರು ತಿಳಿಸಿದರು.
ಜೈಲಿನಲ್ಲಿ ಹೊರಗಿನ ಊಟ, ಬೀಡಿ, ಸಿಗರೇಟ್ ಎಲ್ಲಾ ವಸ್ತು ನಿಷೇಧ ಹೇರಿದ್ದೇವೆ. ನಮ್ಮ ಸಿಬ್ಬಂದಿಯನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ. ಯಾರೇ ಬಂದರೂ ಭದ್ರತೆ ದೃಷ್ಟಿಯಿಂದ ಅಂದೇರಿ ಸೆಲ್ ನಲ್ಲಿ ಇಡುತ್ತೇವೆ. ನಿಯಮಗಳ ಪ್ರಕಾರ ಸಂಬಂಧಿಗಳು ಬಂದರೆ ನಿಗಿತ ಅವಧಿಯ ಅವಕಾಶ ಕೊಡುತ್ತೇವೆ ಎಂದು ಹೇಳಿದರು.












Click it and Unblock the Notifications