ಗುಜರಾತ್ ರಾಜ್ಯಪಾಲರ ಮನವಿಗೆ ಸ್ಪಂದಿಸಿದ ಕರ್ನಾಟಕ ಸರ್ಕಾರ

ಬೆಳಗಾವಿ, ಏಪ್ರಿಲ್ 27: ಗುಜರಾತ್ ರಾಜ್ಯಪಾಲರು ಹಾಗೂ ಗುಜರಾತಿನ ಸಂಸದರ ಮನವಿಗೆ ಕರ್ನಾಟಕ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಗಳು ಅಹ್ಮದಾಬಾದ್ ಗೆ ತೆರಳಲು ಅನುಮತಿ ನೀಡಿದೆ‌.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂರು ರಾಜಹಂಸ ಬಸ್ ಗಳಲ್ಲಿ ಸುಮಾರು 45 ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಗುಜರಾತಿಗೆ ತೆರಳಲಿದ್ದಾರೆ.

ನಿನ್ನೆ ಸಂಜೆ ಈ ಮೂರು ಬಸ್ ಗಳು ಬೆಳಗಾವಿಯ ಬಸ್ ನಿಲ್ದಾಣದಲ್ಲಿ ಡಿಸೇಲ್ ತುಂಬಿಸಿಕೊಂಡು ಮುಂದೆ ಸಾಗಿವೆ. ಗುಜರಾತಿನಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಗಳನ್ನು ಅಹ್ಮದಾಬಾದ್ ಗೆ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

The Government Of Karnataka Has Responded To The Request Of The Gujarat Governor

ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ಗುಜರಾತ್ ಸರ್ಕಾರದ ಮನವಿ ಮತ್ತು ರಾಜೀವ ಗಾಂಧಿ ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ಕರ್ನಾಟಕದ ನರ್ಸಿಂಗ್ ವಿದ್ಯಾರ್ಥಿಗಳನ್ನು ಗುಜರಾತಿಗೆ ರವಾನಿಸಿದೆ.

The Government Of Karnataka Has Responded To The Request Of The Gujarat Governor

ದಾವಣಗೆರೆಯ ಅಶ್ವಿನಿ ಆಯುರ್ವೇದ ಕಾಲೇಜು, ಹಾವೇರಿಯ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ಕಾಲೇಜು, ಬಾಗಲಕೋಟೆಯ ಬಿವಿಎಸ್ಎಸ್ ಆಯುರ್ವೇದ ಮೆಡಿಕಲ್ ಕಾಲೇಜುಗಳಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಗಳನ್ನು ಅವರ ತವರೂರಿಗೆ ಕಳುಹಿಸುವ ಮೂಲಕ ಕರ್ನಾಟಕವು ಗುಜರಾತ್ ಸರ್ಕಾರದ ಮನವಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+