ಸಹೋದರನ ಸಿಎಂ ಮಾಡಲು ಬಿಜೆಪಿಗೆ ಹೊರಟರಾ ರಮೇಶ್ ಜಾರಕಿಹೊಳಿ?

Recommended Video

      ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಸದ್ಯದಲ್ಲೇ ಕಾದಿದೆ ಆಘಾತಕಾರಿ ಸುದ್ದಿ | Oneindia Kannada

      ಬೆಳಗಾವಿ, ಸೆಪ್ಟೆಂಬರ್ 10: ಸಹೋದರ ಸತೀಶ ಜಾರಕಿಹೊಳಿ ಅವರನ್ನು ಸಿಎಂ ಮಾಡುವ ಉದ್ದೇಶದಿಂದ ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಹೊರಟಿದ್ದಾರೆ ಎಂಬ ಸುದ್ದಿ ಬೆಳಗಾವಿಯಲ್ಲಿ ಗುಲ್ಲೆಬ್ಬಿಸಿದೆ.

      ಸಚಿವ ಸಂಪುಟ ವಿಸ್ತರಣೆಯಲ್ಲಿ ಸತೀಶ ಜಾರಕಿಹೊಳಿಗೆ ಅವಕಾಶ ನೀಡದಿರುವುದು ಇತ್ತೀಚೆಗೆ ಬೆಳಗಾವಿ ಕಾಂಗ್ರೆಸ್‌ನಲ್ಲಿ ನಡೆದ ಬೆಳವಣಿಗೆಯಲ್ಲಿ ಜಾರಕಿಹೊಳಿ ಸಹೋದದರಿಗೆ ಆಗಿರುವ ಹಿನ್ನಡೆ ಈ ಸುದ್ದಿಗೆ ಪುಷ್ಠಿ ನೀಡುತ್ತಿವೆ.

      ಜಾರಕಿಹೊಳಿ ಸಹೋದರರ ಜೊತೆಗೆ ಈಗಾಗಲೇ 12ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರಿದ್ದು ಎಲ್ಲರನ್ನೂ ಕರೆದುಕೊಂಡು ಬಿಜೆಪಿ ಹಾರಲು ಜಾರಿಕಹೊಳಿ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಜಿಲ್ಲೆಯಲ್ಲಿ ದಟ್ಟವಾಗಿ ಹರಡಿದೆ.

      ಬೆಳಗಾವಿ ಸಹೋದರರ ಆಟೋಪಾಟಗಳಿಂದ ಬೇಸತ್ತಿರುವ ಕಾಂಗ್ರೆಸ್ ಹೈಕಮಾಂಡ್ ಇಬ್ಬರಿಗೂ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಆದರೆ ರಮೇಶ ಜಾರಕೊಹೊಳಿ ಅವರು ಅದಕ್ಕೆಲ್ಲಾ ಸೊಪ್ಪು ಹಾಕಿಲ್ಲ.

      ಪಿಎಲ್‌ಡಿ ಬ್ಯಾಂಕ್ ವಿಷಯದಲ್ಲಿ ಅವಮಾನ

      ಪಿಎಲ್‌ಡಿ ಬ್ಯಾಂಕ್ ವಿಷಯದಲ್ಲಿ ಅವಮಾನ

      ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ ಜಾರಕಿಹೊಳಿ ನಡುವೆ ಗೊಂದಲ ಉಂಟಾದ ಸಂದರ್ಭದಲ್ಲಿ, 'ಸತೀಶ್‌ಗೆ ಅವಮಾನವಾದರೆ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪಕ್ಷ ಬಿಡುವ ಎಚ್ಚರಿಕೆ ರಮೇಶ ಜಾರಕಿಹೊಳಿ ಈ ಹಿಂದೆಯೇ ನೀಡಿದ್ದರು.

      ಬಿಜೆಪಿ ಮುಖಂಡರ ಜೊತೆ ಸತತ ಸಂಪರ್ಕ

      ಬಿಜೆಪಿ ಮುಖಂಡರ ಜೊತೆ ಸತತ ಸಂಪರ್ಕ

      ಬಿಜೆಪಿ ಮುಖಂಡರ ಜೊತೆಗೆ ರಮೇಶ ಜಾರಕಿಹೊಳಿ ಸತತ ಸಂಪರ್ಕದಲ್ಲಿದ್ದು, ಸತೀಶ ಜಾರಕಿಹೊಳಿ ಅವರನ್ನು ಒಂದು ವರ್ಷದ ಅವಧಿಗಾದರೂ ಮುಖ್ಯಮಂತ್ರಿ ಮಾಡುವುದಾದರೆ ಬೆಂಬಲ ನೀಡುವುದಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

      ರಮೇಶ ಜಾರಕಿಹೊಳಿ ಜೊತೆ ಕೆಲವು ಶಾಸಕರು

      ರಮೇಶ ಜಾರಕಿಹೊಳಿ ಜೊತೆ ಕೆಲವು ಶಾಸಕರು

      ಸಚಿವ ರಮೇಶ ಜಾರಕಿಹೊಳಿ, ಅಥಣಿಯ ಕಾಂಗ್ರೆಸ್‌ ಶಾಸಕ ಮಹೇಶ ಕಮಡೊಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರುಗಳು ಬಿಜೆಪಿ ಸೇರುತ್ತಿದ್ದಾರೆ ಎನ್ನಲಾಗಿದೆ. ಇವರ ಜೊತೆಗೆ ಇನ್ನೂ ಕೆಲವು ಶಾಸಕರು ಬಿಜೆಪಿ ಸೇರುತ್ತಿದ್ದಾರೆ ಎಂಬ ಸುದ್ದಿ ಇದೆ.

      ಸರ್ಕಾರ ಬೀಳುವ ಭಯ

      ಸರ್ಕಾರ ಬೀಳುವ ಭಯ

      ಜಾರಕಿಹೊಳಿ ಸಹೋದರರು ಬಿಜೆಪಿಗೆ ಹಾರಿದರೆ ಉತ್ತರ ಕರ್ನಾಟಕದಲ್ಲಿ ಬಿಜೆಪಿ ತನ್ನ ಪ್ರಮುಖ ನಾಯಕರನ್ನು ಕಳೆದುಕೊಂಡಂತಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಸರ್ಕಾರವೇ ಉರುಳುತ್ತದೆ. ಡಿ.ಕೆ.ಶಿವಕುಮಾರ್ ಸಹ ಈಗ ಐಟಿ ಕೂಪದಲ್ಲಿ ಸಿಲುಕಿಕೊಂಡಿದ್ದು ಅವರು ರಾಜ್ಯ ರಾಜಕರಣದಲ್ಲಿ ತಲೆ ಹಾಕುತ್ತಿಲ್ಲ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+