ಪಾಕ್ ಷಡ್ಯಂತ್ರಕ್ಕೆ ಕಾಂಗ್ರೆಸ್ ಸಹಕಾರ ನೀಡುತ್ತಿದೆ ಎಂದ ಕೇಂದ್ರ ಸಚಿವ
ಚಿಕ್ಕೋಡಿ, ಜೂನ್ 13: ದೇಶದಲ್ಲಿ ಅರಾಜಕತೆ, ಅನುಮಾನ ಸೃಷ್ಟಿಸಲು ಪಾಕಿಸ್ತಾನ ಷಡ್ಯಂತ್ರ ನಡೆಸುತ್ತಿದೆ. ಕಾಂಗ್ರೆಸ್ ನ ಕೆಲವರು ಇದರ ಟೆಂಡರ್ ಪಡೆದುಕೊಂಡಿದ್ದಾರೆ ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ ಸಿಂಗ್ ರಾಠೋಡ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಬಿಜೆಪಿ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವುದಕ್ಕೆ ಪಾಕಿಸ್ತಾನ ಹಲವು ತಿಂಗಳಿಂದ ಯತ್ನಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಆ ಕೆಲಸಕ್ಕೆ ಯತ್ನಿಸಿತು. ಆದರೆ ನಮ್ಮ ದೇಶದ ಯುವ ಸಮುದಾಯ ಅದಕ್ಕೆ ಅವಕಾಶ ನೀಡಲಿಲ್ಲ ಎಂದರು.

ನಾವೀಗ ಮಾಧ್ಯಮದಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಇದಕ್ಕೂ ಮುಂಚೆ ಸರಕಾರದ ನಿರ್ಧಾರಗಳಲ್ಲಿ ಪತ್ರಕರ್ತರೂ ಭಾಗವಾಗಿರುತ್ತಿದ್ದರು. ಆದರೆ ಈಗ ಜನರಿಗೆ ಅನುಕೂಲ ಆಗುವ ಯೋಜನೆಗಳಷ್ಟನ್ನೇ ಜಾರಿ ಮಾಡುತ್ತಿದ್ದೇವೆ ಎಂದ ಅವರು, ಮತ್ತೆ ಆರಂಭವಾಗುತ್ತಿರುವ ನ್ಯಾಷನಲ್ ಹೆರಾಲ್ಡ್ ನಲ್ಲಿ ಬರುವ ಸುದ್ದಿ ಎಷ್ಟರ ಮಟ್ಟಿಗೆ ನಿಜವಿರಬಹುದು ಎಂಬ ಆಲೋಚನೆ ಮಾಡಬೇಕಿದೆ ಎಂದು ಹೇಳಿದರು.












Click it and Unblock the Notifications