''ಮುಸ್ಲಿಂ ತುಷ್ಟೀಕರಣ ಮಾಡುವ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಶಿಫ್ಟ್ ಆಗಲಿ''
ಬೆಂಗಳೂರು, ಏಪ್ರಿಲ್ 27: ಪಾಕಿಸ್ತಾನ್ ಉಗ್ರರ ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯರ ಹೇಳಿಕೆ ಪಾಕ್ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾದ ಮೇಲಂತೂ ಬಿಜೆಪಿ ನಾಯಕರು ಸೇರಿದಂತೆ ಹಿಂದೂಪರ ಸಂಘಟನೆಗಳು, ಹಿಂದೂ ಕಾರ್ಯಕರ್ತರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಸಂಸದರೊಬ್ಬರು, ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಶಿಫ್ಟ್ ಆಗುವುದು ಒಳ್ಳೆಯದು ಎಂದಿದ್ದಾರೆ.
ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಸಂಸದ ಜಗದೀಶ ಶೆಟ್ಟರ್ ಅವರು, ಯುದ್ಧದ ಅವಶ್ಯಕತೆ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇರುವ ಅವರು, ಭಾರತೀಯ 28 ಜನರನ್ನು ಉಗ್ರರರು ಭೀಕರವಾಗಿ ಹತ್ಯೆ ಮಾಡಿದರೂ ಸಹಿತ ಇಂತಹ ಹೇಳಿಕೆ ನೀಡುವುದು ಸರಿಯಲ್ಲ.

ಅಲ್ಪಸಂಖ್ಯಾತರ ತುಷ್ಟೀಕರಣ ಆರಂಭ
ಉಗ್ರಿಗೆ ಸರಿಯಾದ ಪಾಠ ಕಲಿಸಿ ಎಂದು ಜನ ಒಕ್ಕೂರಿಲಿನಿಂದ ಆಗ್ರಹಿಸುತ್ತಿದ್ದಾರೆ. ಜನರ ಭಾವನೆ, ಆಕ್ರೋಶ ಸಾಕಷ್ಟಿದೆ. ಇಂತಹ ಸಂದರ್ಭದಲ್ಲಿ, ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣ ಬೋದನೆ ಆರಂಭ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಲವು ನಿರ್ಧಾರ ಕೈಗೊಂಡಿದೆ. ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಕೇಂದ್ರ ಮಾಡುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಕೇಂದ್ರ ಸರ್ಕಾರ ಯುದ್ಧ ಘೋಷಣೆ ಮಾಡಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಕ್, ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡಲು ಕೀಳು ಮಟ್ಟದ ಹೇಳಿಕೆಯನ್ನು ಮುಖ್ಯಮಂತ್ರಿ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಖಂಡನಾರ್ಯ. ಯುದ್ಧ ಮಾಡೋದು, ಬಿಡೋದು ಕೇಂದ್ರಕ್ಕೆ ಬಿಟ್ಟಿದ್ದು.
ಇಂತಹ ಹೇಳಿಕೆಗಳಿಂದ ಸಿಎಂ ಸಿದ್ದರಾಮಯ್ಯ ಅವರು ದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ.

ಉಗ್ರರ ದಾಳಿ, ಹತ್ಯೆ ಬೆದರಿಕೆಗಳನ್ನು ನಾವು ಇದೇ ರೀತಿ ಸಹಿಸಿಕೊಂಡು ಹೋಗಬೇಕಾ? ನಾವು ಇದಕ್ಕೆ ಸರಿಯಾದ ಉತ್ತರ ಕೊಡಬೇಕಾದ ಸಮಯ ಬಂದಿದೆ. ಮರಳಿ ಭಾರತ ಎಚ್ಚರಿಕೆ, ದಾಳಿ ಮಾಡದಿದ್ದರೆ ಇಂತಹ ಘಟನೆಗಳು ಮರಕಳಿಸಬಹುದು ಎಂಬ ಸಣ್ಣ ವಿಚಾರವನ್ನು ಅರ್ಥ ಮಾಡಿಕೊಳ್ಳದವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ ಎಂದು ಅವರು ಟೀಕಿಸಿದರು.
ಸಿಎಂ ಪಾಕಿಸ್ತಾನಕ್ಕೆ ಹೋದರೆ ಒಳಿತು: ಶೆಟ್ಟರ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರಕ್ಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಆದರೆ ಸಿಎಂ ಅಲ್ಪಸಂಖ್ಯಾತರ ತುಷ್ಠಿಕರಣಕ್ಕಾಗಿ ಕೇಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಪಾಕಿಸ್ತಾನ ಟಿವಿ ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ಹೆಸರು ಬರುತ್ತಿದೆ.
ಪಾಕಿಸ್ತಾನದಲ್ಲಿ ಪಾಪುಲರ್ ಆಗಲು ಹೋರಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಪಾಕಿಸ್ತಾನಕ್ಕೆ ಹೋದರೆ ಒಳ್ಳೆಯದು ಎಂದು ಶೆಟ್ಟರ್ ದೂರಿದರು.
ಸಿಎಂ ವಿರುದ್ಧ ಅಶ್ವಥ್ ನಾರಾಯಣ್ ಕಿಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಓಲೈಕೆಯ ಮಾತುಗಳಿಂದ ಪಾಕಿಸ್ತಾನದಲ್ಲಿಯೂ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದೀರಿ. ತಮಗೆ ಹಾರ್ದಿಕ ಅಭಿನಂದನೆಗಳು ಎಂದು ಮಾಜಿ ಸಚಿವ, ಮಲ್ಲೇಶ್ವರಂ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಕಿಡಿ ಕಾರಿದ್ದಾರೆ.
ದೇಶ ಅತ್ಯಂತ ಸೂಕ್ಷ್ಮಪರಿಸ್ಥಿತಿಯಲ್ಲಿರುವಾಗ, ಅಮಾಯಕರನ್ನು ಪರಮ ಪಾಪಿಗಳಾದ ಉಗ್ರರು ಕೊಂದು ದೇಶಕ್ಕೇ ಒಂದು ರೀತಿ ಸವಾಲೆಸೆಯುವಾಗ ಈ ರೀತಿಯ ಹೇಳಿಕೆ ಯಾರನ್ನು ಓಲೈಸಲು ನೀಡಿದ್ದೀರಿ?. ನಿಮಗೆ ವೋಟ್ ಬ್ಯಾಂಕ್ ಗಿಂತ ಬೇರೆ ಚಿಂತನೆ ಇಲ್ಲವೇ. ಸತ್ತವರ ಕುಟುಂಬದ ಆಕ್ರಂದನ ಮನಸ್ಸಿಗೆ ನಾಟುವುದಿಲ್ಲವೇ? ಯೋಚಿಸಿ ಮಾತನಾಡಿ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.












Click it and Unblock the Notifications