ರೈತ ಆತ್ಮಹತ್ಯೆ ತಡೆಯಲು ಬೆಳಗಾವಿಯಲ್ಲಿ ಸಂಕಲ್ಪ ಜಾಥಾ
ಬೆಳಗಾವಿ, ಜುಲೈ 26 : ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರ ಮನವೊಲಿಸಲು ಮತ್ತು ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಬೆಳಗಾವಿಯಲ್ಲಿ ಶನಿವಾರ ಬೃಹತ್ ಸಂಕಲ್ಪ ಜಾಥಾ ನಡೆಯಿತು. ಸ್ವಾಮೀಜಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ನೂರಾರು ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಕೋಟೆ ಕೆರೆಯಿಂದ ಹೊರಟ ಸಂಕಲ್ಪ ಜಾಥಾ ರಾಣಿ ಚನ್ನಮ್ಮ ವೃತ್ತದ ಮೂಲಕ ಗಾಂಧಿಭವನ ತಲುಪಿತು. ರೈತ ಸಮುದಾಯ ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಮಸ್ಯೆಗಳು ಎದುರಾದಾಗ ಅವುಗಳನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಜಾಥಾದಲ್ಲಿ ಪಾಲ್ಗೊಂಡವರು ಕರೆ ನೀಡಿದರು. [ಎರಡು ದಿನ ಕರ್ನಾಟಕ ಪ್ರವಾಸ ಮಾಡಲಿದ್ದಾರೆ ರಾಹುಲ್ ಗಾಂಧಿ]
ಜಾಥಾದಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, 'ರೈತರ ಆತ್ಮಹತ್ಯೆ ಘಟನೆಗಳಲ್ಲಿ ಸರ್ಕಾರ ಮತ್ತು ಬ್ಯಾಂಕುಗಳ ಪಾತ್ರ ಎಷ್ಟಿದೆ? ಎಂಬುದರ ಕುರಿತು ಗಂಭೀರ ಚಿಂತನೆ ಆಗಬೇಕು. ಆತ್ಮಹತ್ಯೆ ತಡೆಗೆ ಸಾಮೂಹಿಕ ಪ್ರಯತ್ನಗಳು ಆಗಬೇಕು ಎಂದು ಹೇಳಿದರು. [ರೈತ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಅಂದ್ರು ಕೃಷಿ ಸಚಿವರು]
ಸಂಕಲ್ಪ ಜಾಥಾದಲ್ಲಿ ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ, ಹುಕ್ಕೇರಿ ಗುರುಶಾಂತೇಶ್ವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳೇಶ್ವರ ಸ್ವಾಮೀಜಿ, ಸಂಸದ ಪ್ರಕಾಶ ಹುಕ್ಕೇರಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್, ಜಿಲ್ಲಾಧಿಕಾರಿ ಎನ್. ಜಯರಾಮ್ ಮುಂತಾದವರು ಪಾಲ್ಗೊಂಡಿದ್ದರು. ಜಾಥಾದ ಚಿತ್ರಗಳು...

ಬೆಳಗಾವಿಯಲ್ಲಿ ನಡೆಯಿತು ಸಂಕಲ್ಪ ಜಾಥಾ
ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರ ಮನವೊಲಿಸಲು ಮತ್ತು ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಬೆಳಗಾವಿಯಲ್ಲಿ ಶನಿವಾರ ಬೃಹತ್ ಸಂಕಲ್ಪ ಜಾಥಾ ನಡೆಯಿತು. ಸ್ವಾಮೀಜಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ನೂರಾರು ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು
ಜಾಥಾದಲ್ಲಿ ಪಾಲ್ಗೊಂಡಿದ್ದ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರು ಮಾತನಾಡಿ, 'ಸಮಾಜದ ಎಲ್ಲ ವರ್ಗ ಒಂದಿಲ್ಲೊಂದು ಸಮಸ್ಯೆಯ ಸುಳಿಯಲ್ಲಿದೆ. ರೈತ ಸಮುದಾಯ ಹೆಚ್ಚಿನ ಸಂಕಷ್ಟದಲ್ಲಿದೆ. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ' ಎಂದರು.

ಬದುಕು ಕಟ್ಟಿಕೊಳ್ಳಿ ಎಂದು ಕರೆ ನೀಡಿದ ಸಂಸದರು
ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಮಾತನಾಡಿ, 'ರೈತರ ನೆರವಿಗೆ ಸರ್ಕಾರ ಸಾರ್ವಜನಿಕರು, ಜನಪ್ರತಿನಿಧಿಗಳು, ಮಠಾಧೀಶರು ಎಲ್ಲರೂ ಇದ್ದಾರೆ. ರೈತರು ಆತ್ಮಹತ್ಯೆಯ ಸಮುಹ ಸನ್ನಿಯಿಂದ ಹೊರಬಂದು ಬದುಕು ಕಟ್ಟಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮಾರುಕಟ್ಟೆ ಆಧಾರಿತ ಬೆಳೆಗೆ ಆದ್ಯತೆ ನೀಡಿ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿದೆ. ಕೇಂದ್ರದಿಂದ ನೆರವು ಪಡೆದುಕೊಳ್ಳಲು ಪ್ರಯತ್ನವನ್ನು ನಡೆಸುತ್ತಿದೆ. ರೈತ ಸಮುದಾಯ ಮಾರುಕಟ್ಟೆ ಆಧಾರಿತ ಬೆಳೆಗೆ ಒತ್ತುಕೊಡಬೇಕು ಎಂದು ಅವರು ಹೇಳಿದರು.

ಯಾದಗಿರಿಯಲ್ಲೂ ಅಭಿಯಾನ
ಯಾದಗಿರಿಯಲ್ಲಿ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ನಿಸರ್ಗ ವಿವಿದೊದ್ಧೇಶ ಸೇವಾ ಸಂಸ್ಥೆ ಅಭಿಯಾನವೊಂದನ್ನು ಆರಂಭಿಸಿದೆ. ಸಾಲಕ್ಕೆ ಸಾವು ಒಂದೇ ಪರಿಹಾರವಲ್ಲ ಎಂದು ಜಾಗೃತಿ ಮೂಡಿಸುತ್ತಿದೆ. ಆಟೋ ಮೂಲಕ ಗ್ರಾಮಗಳಿಗೆ ತೆರಳುವ ಸೇವಾ ಸಂಸ್ಥೆಯ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತರಿಗೆ ಕರೆ ನೀಡುತ್ತಿದ್ದಾರೆ.












Click it and Unblock the Notifications