ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ಪಕ್ಕಾ, ಮುಂದೂಡುವ ಮಾತೇ ಇಲ್ಲ: ದಿನೇಶ್ ಗುಂಡೂರಾವ್
ಬೆಳಗಾವಿ, ಡಿಸೆಂಬರ್ 17: ಸಿದ್ದರಾಮಯ್ಯ ಅವರು ಸೂಚಿಸಿರುವಂತೆ ಡಿಸೆಂಬರ್ 22 ಕ್ಕೆ ಸಂಪುಟ ವಿಸ್ತರಣೆ ಆಗುವುದು ಪಕ್ಕಾ ಮತ್ತೆ ಮುಂದೂಡುವ ಮಾತೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 22 ಪ್ರಶಸ್ತವಾದ ದಿನವೇ ಆಗಿದೆ. ಮಾಸ, ದಿನಗಳ ಸಬೂಬು ಹೇಳಿ ಸಂಪುಟ ವಿಸ್ತರಣೆ ಮುಂದೂಡುವುದಿಲ್ಲ ಎಂದು ಅವರು ಹೇಳಿದರು.

ನಾಳೆ ಸಿಎಲ್‌ಪಿ ಸಭೆಯಲ್ಲಿ ಶಾಸಕರಿಗೆ ತಮ್ಮ ಅಸಮಾಧಾನಗಳನ್ನು ಹೇಳಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಎಲ್ಲರೂ ತಮ್ಮ ಅಸಮಾಧಾನಗಳನ್ನು ಹೇಳಿಕೊಳ್ಳಬಹುದು ಎಂದು ಅವರು ಹೇಳಿದರು.
ಇಂದೇ ಅತೃಪ್ತ ಶಾಸಕರು ಸಭೆ ನಡೆಸಿದ್ದಾರೆ ಎಂಬ ಮಾತಿಗೆ ಇಂದೇ ಸಭೆ ನಡೆಸಿದರೆ ನನ್ನ ಅಭ್ಯಂತರವಿಲ್ಲ, ಯಾರು, ಎಲ್ಲಿ, ಯಾವಾಗ ಬೇಕಾದರೂ ಸಭೆ ನಡೆಸಬಹುದು ಎಂದರು. ಸಚಿವ ಸ್ಥಾನ ಯಾರಿಗೆ ಸಿಗುತ್ತದೆ ಎಂದು ಹೇಳಲು ಅವರು ನಿರಾಕರಿಸಿದರು.












Click it and Unblock the Notifications