ಚಿಕ್ಕೋಡಿ ಬಿಜೆಪಿ ಟಿಕೆಟ್: ಯಡಿಯೂರಪ್ಪ vs ಬಿಎಲ್ ಸಂತೋಷ್- ಯಾರಿಗೆ ಮಣೆ ಹಾಕುತ್ತೆ ಹೈಕಮಾಂಡ್?
ಬೆಂಗಳೂರು, ಮಾರ್ಚ್ 13: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಆಗಿಲ್ಲ. ಕ್ಷೇತ್ರವು ಈ ಬಾರಿ ಯಾರ ಪಾಲಾಗಲಿದೆ ಎಂಬ ಕುತೂಹಲ ಗರಿಗೆದರಿದೆ. ಇದೇ ವಿಚಾರವು ಬಿಜೆಪಿ ಇಬ್ಬರು ಪ್ರಮುಖ ನಾಯಕರ ಮಧ್ಯೆ ಬಿಗ್ ಫೈಟ್ ತಂದಿಟ್ಟಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರ ಟಿಕೆಟ್ ಹಂಚಿಕೆ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಮುಖಾಮುಖಿ ಆಗಿದ್ದಾರೆ.

ಕಾಂಗ್ರೆಸ್ ಹಿಡಿತದಲ್ಲಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 2019 ರಲ್ಲಿ ಬಿಜೆಪಿ ಗೆಲವು ಸಾಧಿಸಿತು. ಆಗ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರು ಸಂಸತ್‌ಗೆ ಆಯ್ಕೆ ಆದರು. ಇವರು ಬಿಎಲ್ ಸಂತೋಷ್ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದವರಾಗಿದ್ದಾರೆ.
ಅಂದು 2019 ರಲ್ಲಿ ಬಿಜೆಪಿ ಪಕ್ಷದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಅವರಿಂದ ಟಿಕೆಟ್ ಕಸಿದುಕೊಳ್ಳುವಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಯಶಸ್ವಿಯಾಗಿದ್ದರು. ಸ್ಪರ್ಧಿಗೆ ಗೆಲುವು ಸಾಧಿಸಿದರು.
2019 ರಿಂದ ಆಕಾಂಕ್ಷಿಗಳ ಮಧ್ಯೆ ಪೈಪೋಟಿ
2014ರಲ್ಲಿ ಇದೇ ರಮೇಶ್ ಕತ್ತಿಯವರು ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಬಳಿಕ ನಡೆದ 2019 ರ ಚುನಾವಣೆಯಲ್ಲಿ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ಸಿಗಲಿಲ್ಲ. ಆಗಲೂ ಬಿಜೆಪಿ ಅಧಿಕಾರ ಬಂತಾದರೂ ಈ ಇಬ್ಬರು ನಾಯಕ ಮಧ್ಯದ ಶೀತಲ ಸಮರ ಅಂದಿನಿಂದ 2024ರ ಚುನಾವಣೆವರೆಗೂ ಮುಂದುವರಿದೆ ಎನ್ನಲಾಗಿದೆ.

ಚಿಕ್ಕೋಡಿ ಟಿಕೆಟ್‌ಗೆ ಭಾರೀ ಲಾಭಿ
ಬಿಎಸ್ ಯಡಿಯೂರಪ್ಪ ಬಣ್ಣದಲ್ಲಿ ಗುರುತಿಸಿಕೊಂಡಿರುವ ರಮೇಶ್ ಕತ್ತಿಯವರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಒಲವು ಹೊಂದಿದ್ದಾರೆ. ಆದರೆ ಅದಕ್ಕೆ ಬಿಎಲ್ ಸಂತೋಷ್ ಅವರ ಬಳಿಕ ಹೈಕಮಾಂಡ್ ಮಟ್ಟದಲ್ಲಿ ಲಾಭಿ ಮಾಡುವ ಮೂಲಕ ಅಣ್ಣಾ ಸಾಹೇಬ್ ಜೊಲ್ಲೆಯವರು ಅಡ್ಡಗಾಲು ಹಾಕುತ್ತಿದ್ದಾರೆ. ತಮಗೆ ಈ ಬಾರಿಯ ಟಿಕೆಟ್ ಕೊಡಿಸುವಂತೆ ಪಟ್ಟು ಹಿಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕಾರಣಗಳಿಂದ ಚಿಕ್ಕೋಡಿ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವರ್ಸಸ್ ಬಿಎಲ್ ಸಂತೋಷ್ ಎಂಬ ವಾತಾವರಣ ಏರ್ಪಟ್ಟಿದೆ. ಪ್ರಭಾವಿ ನಾಯಕರು ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಪೈಪೋಟಿಗೆ ಬಿದ್ದವರಂತೆ ಕಾಣುತ್ತಿದೆ. ಹೀಗಾಗಿಯೇ ಕ್ಷೇತ್ರ ವಿಚಾರವು ಸದ್ಯ ಕೇಂದ್ರ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ.
ಪಟ್ಟು ಸಡಿಲಿಸದ ಬಿಎಸ್‌ವೈ-ಸಂತೋಷ್?
ಕರ್ನಾಟಕ ಅರಿತ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಮಿತಿಯಿಂದ ಹೊರಗಿಡಲಾಗಿತ್ತು. ಆಗಲೂ ಟಿಕೆಟ್ ಹಂಚಿಕೆ ಉಸ್ತುವಾರಿ ಹೊಣೆ ಹೊತ್ತವರು ಇದೇ ಬಿಎಲ್ ಸಂತೋಷ್ ಅವರು. ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ. ಅದರಲ್ಲೂ ಲಿಂಗಾಯತ ಪ್ರಭಾವಿ ನಾಯಕರ ಬಿಎಸ್ ಯಡಿಯೂರಪ್ಪರನ್ನು ಬಿಎಲ್ ಸಂತೋಷ್ ಅವರೇ ಉದ್ದೇಶಪೂರ್ವಕವಾಗಿ ಸೈಡ್‌ಲೈನ್ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಈ ಇಬ್ಬರು ನಾಯಕರು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮುಖಾಮುಖಿ ಆಗಿದ್ದಾರೆ. ಯಾರೋಬ್ಬರು ಪಟ್ಟು ಸಡಿಲಿಸದ ಕಾರಣ ಚಿಕ್ಕೋಡಿ ಟಿಕೆಟ್ ಹಂಚಿಕೆಯು ದೆಹಲಿ ನಾಯಕರಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಸಾರಿ ಕ್ಷೇತ್ರದ ಟಿಕೆಟ್ ಅನ್ನು ಅಣ್ಣಾಸಾಹೇಬ್ ಅವರಿಗೆ ತಪ್ಪಿಸಲು ರಮೇಶ್ ಕತ್ತಿ ಅವರು ತಂತ್ರ ರೂಪಿಸಿದ್ದಾರೆ. ಅದಕ್ಕೆ ಯಡಿಯೂರಪ್ಪ ಅವರ ಸಹಾಯ ಕೇಳಿರುವ ಬಗ್ಗೆ ಮಾಹಿತಿ ಇದೆ.
28 ಕ್ಷೇತ್ರಗಳ ಕರ್ನಾಟಕ ಲೋಕಸಭಾ ಚುನಾವಣೆಯ ಒಂದೇ ಒಂದು ಕ್ಷೇತ್ರಕ್ಕೂ ಬಿಜೆಪಿಯ ಟಿಕೆಟ್ ಘೋಷಣೆ ಆಗಿಲ್ಲ. ಇಂದು ಇಲ್ಲವೇ ನಾಳೆ ಮಾರ್ಚ್ 13ರಂದು ಟಿಕೆಟ್ ಘೋಷಣೆ ಆಗುವ ನಿರೀಕ್ಷೆ ಇದೆ.












Click it and Unblock the Notifications