ಬೆಳಗಾವಿಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಕಾರು ಅಪಘಾತ; ಇಬ್ಬರ ಸಾವು
ಬೆಳಗಾವಿ, ಮೇ 25: ಬೆಳಗಾವಿಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಮಾಡಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
Recommended Video
ಬೆಳಗಾವಿಯ ಮುತಗಾ ಗ್ರಾಮದಲ್ಲಿ ನಿನ್ನೆ ರಾತ್ರಿ ವಾಕಿಂಗ್ ಹೋಗಿದ್ದ ಮಹಿಳೆಯರಿಗೆ ಬಿಜೆಪಿ ಯುವ ಮೋರ್ಚಾ ಮುಖಂಡ ಬಾಳೆಕುಂದ್ರಿ ಕೆಎಚ್ ಗ್ರಾಮದ ಯುವರಾಜ ಜಾಧವ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವಿಗೀಡಾಗಿದ್ದಾರೆ.
ನಿನ್ನೆ ರಾತ್ರಿ 1೦.30 ಗಂಟೆಗೆ ಸವಿತಾ ಬಾಲಕೃಷ್ಣ ಪಾಟೀಲ (44) ಮತ್ತು ವಿದ್ಯಾ ಬಾಲಕೃಷ್ಣ ಪಾಟೀಲ (52), ಶಾಂತಾ ಕೃಷ್ಣ ಚೌಗಲೆ ಎಂಬ ಮಹಿಳೆಯರು ಊಟದ ನಂತರ ವಾಕಿಂಗ್ ಗೆ ಹೋಗಿದ್ದರು. ಈ ಸಂದರ್ಭ ವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ಸವಿತಾ ಹಾಗೂ ವಿದ್ಯಾ ಎಂಬುವರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಶಾಂತಾ ಅವರು ಗಾಯಗೊಂಡಿದ್ದಾರೆ.

ಯುವರಾಜ ಜಾಧವ ಎನ್ನುವವರು ವೇಗ ಮತ್ತು ನಿರ್ಲಕ್ಷತನದಿಂದ ಕಾರು ಚಾಲನೆ ಮಾಡಿ ಮಹಿಳೆಯರಿಗೆ ಅಪಘಾತ ಮಾಡಿ, ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಮಾರಿಹಾಳ ಪೊಲೀಸರು ತಿಳಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications