ಯೋಧನ ಕುಟುಂಬದ ಮೇಲೆ ಬಿಜೆಪಿ ಮುಖಂಡನಿಂದ ದಬ್ಬಾಳಿಕೆ ಆರೋಪ

ಬೆಳಗಾವಿ, ಫೆಬ್ರವರಿ 3: ದೇಶ ಕಾಯುವ ಯೋಧನ ಕುಟುಂಬದ ಮೇಲೆ ಬೆಳಗಾವಿ ಬಿಜೆಪಿ ಮುಖಂಡನಿಂದ ದಬ್ಬಾಳಿಕೆ ಆರೋಪ ಕೇಳಿಬಂದಿದ್ದು, ಸೈಟ್ ವಿವಾದ ಹಿನ್ನೆಲೆ ಯೋಧನ ಪುತ್ರನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಯೋಧ ಭೀಮಪ್ಪ ನರಸಗೋಳ ಪುತ್ರ ವಿಜಯ್ ಮೇಲೆ ಹಲ್ಲೆ ಹಲ್ಲೆ ಮಾಡಲಾಗಿದ್ದು, ಬೆಳಗಾವಿ ಜಿಲ್ಲಾ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ್ ಸೇರಿ ಮೂವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

ಬೆಳಗಾವಿ ತಾಲೂಕಿನ ಕಣಬರಗಿಯಲ್ಲಿ ಜನವರಿ 31ರಂದು ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ.

Belagavi: BJP Leader Was Assault On Soldier Son In Kanabaragi

ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಬೆಳಗಾವಿ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಆದರೂ ಆರೋಪಿಗಳ ಬಗ್ಗೆ ಪೊಲೀಸರು ಮೃದು ಧೋರಣೆ ತೋರುತ್ತಿದ್ದಾರೆ.

ರಾಜಿ ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಹೇಳುತ್ತಿದ್ದಾರೆ. ಗಾಯಾಳು ಮಗ, ಇಬ್ಬರು ಮಕ್ಕಳ ಸಮೇತ ಯೋಧನ ಪತ್ನಿ ಇಂದಿರಾರಿಂದ ಬೆಳಗಾವಿ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ.

ರಾಡ್‌ನಿಂದ ಮನಬಂದಂತೆ ಮಗನನ್ನು ಥಳಿಸಿದ್ದಾರೆ. ಮುರುಘೇಂದ್ರಗೌಡ ಪಾಟೀಲ್, ಬಾಹುಬಲಿ ವೀರಗೌಡರ್, ಬಸವರಾಜ್ ಯಳ್ಳೂರಕರ್ ವಿರುದ್ಧ ಆರೋಪ ಮಾಡಲಾಗಿದೆ.

Belagavi: BJP Leader Was Assault On Soldier Son In Kanabaragi

ಕಣಬರಗಿ ಬಸ್‌ನಿಲ್ದಾಣ ಬಳಿಯ‌ ಪ್ಲಾಟ್ ನಂಬರ್ 423/1/1 ಕುರಿತು ವಿವಾದವಾಗಿದ್ದು, 2005ರಲ್ಲಿ ಸೈಟ್ ಖರೀದಿಸಿದ್ದ ಯೋಧ ಭೀಮಪ್ಪ ನರಸಗೋಳ, ಸೈಟ್ ಬಳಿ ತೆರಳಿದ್ದ ಯೋಧ ಭೀಮಪ್ಪ ಮಗ ವಿಜಯ್ ಮೇಲೆ ಹಲ್ಲೆ ಮಾಡಲಾಗಿದೆ.

ತಮಗೆ ನ್ಯಾಯ ದೊರಕಿಸಿಕೊಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಯೋಧನ ಪತ್ನಿಯಿಂದ ಮನವಿ ಮಾಡಿದ್ದು, ಮಕ್ಕಳ ಸಮೇತ ಯೋಧನ ಪತ್ನಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+