CM Post: ಇವರನ್ನೇ ಸಿಎಂ ಮಾಡಿ: ಕಾಂಗ್ರೆಸ್ ದಲಿತ ನಾಯಕರ ಪರ ಬಿಜೆಪಿ ಸಂಸದ ಬ್ಯಾಟಿಂಗ್
ಬೆಳಗಾವಿ, ಫೆಬ್ರವರಿ 23: ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇತ್ತ ಸರ್ಕಾರ ಆಡಳಿತ ವೈಫಲ್ಯತೆಯಿಂದ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಣ್ಮರೆಯಾಗಿದೆ ಎಂದು ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ, ಕಾಂಗ್ರೆಸ್ ದಲಿತ ನಾಯಕರ ಪರ ಬ್ಯಾಟ್ ಬೀಸಿದ್ದಾರೆ. ಇವರನ್ನು ಸಿಎಂ ಮಾಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಹೆಸರಿಗಟ್ಟೆ ಬೇರೆ ಬೇರೆ ರಾಜ್ಯಗಳು. ಕರ್ನಾಟಕದಲ್ಲಿರುವ ಮಹಾರಾಷ್ಟ್ರ ಸಮಾಜದವರು ಕನ್ನಡಿಗರೇ ಆಗಿದ್ದಾರೆ. ಇಲ್ಲಿ ಕನ್ನಡಿಗರು, ಮರಾಠಿ ಅಂತಾ ಭಾಷೆ ಹೆಸರಿನಲ್ಲಿ ಗಲಾಟೆಯಾಗಿಲ್ಲ. ಹಿಂದಿನಿಂದಲೂ ಕೆಲ ಕಿಡಗೇಡಿಗಳು ಭಾಷೆ ಹೆಸರಿನಲ್ಲಿ ಗಲಾಟೆ ಎಬ್ಬಿಸುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಭಾನುವಾರ ಬಿಜೆಪಿ ಹಿರಿಯ ನಾಯಕ, ಸಂಸದ ಗೋವಿಂದ್ ಕಾರಜೋಳ ಬೇಸರ ವ್ಯಕ್ತಪಡಿಸಿದರು.

2013ರಲ್ಲಿ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿಸಿದವರಲ್ಲಿ ಹೆಚ್ಚಾಗಿ ಮರಾಠಿಗರೇ ಇದ್ದಾರೆ. ಚಾಮುಂಡಿ ಮೂರ್ತಿ ಮನೆ ಮನೆಗೆ ಹೋದಾಗ ಸ್ವಾಗತ ಮಾಡಿಕೊಂಡು ಸಂಭ್ರಮಾಚರಣೆ ಮಾಡಿದ್ದರು. ಮನೆ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ಆಚರಣೆ ಮಾಡಿದ್ದನ್ನು ಅವರ ಸ್ಮರಿಸಿದರು. ಹೀಗಿದ್ದರೂ ಆಗಾಗ ಕೆಲವು ಕಿಡಗೇಡಿಗಳು ಗದ್ದಲ ಎಬ್ಬಿಸುತ್ತಿದ್ದಾರೆ ಎಂದು ಅವರು ದೂರಿದರು.
ಕರ್ನಾಟಕ ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಸ್ ಹಾನಿಗೊಳಿಸಲಾಗಿದೆ. ಇದರ ವಿರುದ್ಧ ಎರಡು ರಾಜ್ಯಗಳ ಸರ್ಕಾರಗಳು ಬಿಗಿ ಕ್ರಮ ಕೈಗೊಂಡು ಬಸ್ ಗಳನ್ನ ಓಡಿಸಬೇಕು. ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಉತ್ತರ ಕರ್ನಾಟಕದವರು ಮುಂಬೈ ಸೇರಿದಂತೆ ಬೇರೆ ಕಡೆ ವ್ಯಾಪಾರ ವಹಿವಾಟಿಗೆ ತೆರಳುತ್ತಾರೆ. ಇಡೀ ಸರ್ಕಾರ ಕೈಕಟ್ಟಿಕೊಂಡು ಕೂಡುವುದು ಸರಿಯಲ್ಲ. ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಗೃಹ ಲಕ್ಷ್ಮೀ ಹಣ ನೀಡಿಲ್ಲ, ಇದು ಭಂಡತನದ ಸರ್ಕಾರ
ಬೆಳಗಾವಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಗೋವಿಂದ್ ಕಾರಜೋಳಅ ಅವರು, ಸಿದ್ದರಾಮಯ್ಯ ಸರ್ಕಾರ ಬಂದು ಎರಡು ವರ್ಷ ಆಗಿದೆ. ಭಂಡತದನದಿಂದ ಐದು ಗ್ಯಾರಂಟಿ ಕೊಡುವುದಾಗಿ ಹೇಳಿದ್ದರು. ಈಗ ನೋಡಿದರೆ, ಉಚಿತ ಅಕ್ಕಿ ಹಣ, ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ನೀಡಿಲ್ಲ. ಬೋಗಸ್ ಹೇಳಿಕೆ, ಭರವಸೆ ನೀಡಿ ಮತ ಹಾಕಿಸಿಕೊಂಡು ಅಧಿಕಾರಕ್ಕೆ ಬಂದಿದ್ದರು.
ಸಿದ್ದರಾಮಯ್ಯ ನವರು ಜನರಿಗೆ ಮೋಸ ಮಾಡುವ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಬಜೆಟ್ ಮಂಡನೆ ಮಾಡಿದ್ದರ ಪೈಕಿ ಒಂದೂವರೆ ಲಕ್ಷ ಕೋಟಿ ಹಣ ಬಾಕಿ ಇದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ನಿತ್ಯ ಕೊಲೆ ಸುಲಿಗೆ ಆಗುತ್ತಿವೆ, ಅಂತರ್ ರಾಜ್ಯದವರು ಬಂದು ಕಳ್ಳತನ ಮಾಡುತ್ತಿದ್ದಾರೆ. ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ಪುಂಡರ ಹಾವಳಿ ಪುಂಡಾಟಿಕೆ ಜಾಸ್ತಿ ಆಗಿದೆ. ಸರ್ಕಾರದ ಹಿಡಿತ ತಪ್ಪಿ ಹೋಗಿದೆ ಸಿದ್ದರಾಮಯ್ಯ ಎಲ್ಲದರಲ್ಲೂ ವಿಫಲರಾಗಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಅತೀ ಹೆಚ್ಚು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯ ಅವರೇ ಇದೇನಾ ಇವರು ನುಡಿದಂತೆ ನಡೆದಿರುವುದು. ನಾಡಿನ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ದೂರಿದರು.
ಸಿಎಂ ಸ್ಥಾನಕ್ಕಾಗಿ ಕಚ್ಚಾಟ, ಇವರೇನ್ನೆ ಸಿಎಂ ಮಾಡಿ
ಇವತ್ತೆ ರಾಜ್ಯದಲ್ಲಿ ಚುನಾವಣೆ ಆದರೆ ಕಾಂಗ್ರೆಸ್ 20 ಸ್ಥಾನಕ್ಕೆ ಇಳಿಯುತ್ತದೆ. ಅಭಿವೃದ್ಧಿ ಸಂಪೂರ್ಣವಾಗಿ ಶೂನ್ಯವಾಗಿದೆ. ನಾಡಿನ ಜನ ಸಂಕಷ್ಟದಲ್ಲಿದ್ದಾರೆ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರು ಕೂಡಲೇ ಇವರು ರಾಜೀನಾಮೆ ಕೊಡಬೇಕು ಚುನಾವಣೆ ಎದುರಿಸಬೇಕು. ಪಾರ್ಟಿ ಅಧ್ಯಕ್ಷ ಡಿಸಿಎಂಗೆ ಕಿರೀಟ ಇದೆಯಾ ಎಂದು ಕೆ.ಎನ್. ರಾಜಣ್ಣ ಕೇಳಿದ್ದಾರೆ. ನಾಲ್ಕು ಗುಂಪಾಗಿ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ರಣ ಹದ್ದು ರೀತಿಯಲ್ಲಿ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ದಲಿತ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಈಗ ದಲಿತ ಮುಖ್ಯಮಂತ್ರಿ ಮಾಡಲು ಅವಕಾಶ ಇದೆ. ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ನಾಯಕರಲ್ಲಿ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಘೋಷಿಸಿದ್ದರು. ಸದ್ಯ ಗೃಹ ಸಚಿವ ಜಿ.ಪರಮೇಶ್ವರ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಸಿಎಂ ಮಾಡಲಿ. ಇಲ್ಲವೇ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯಮಂತ್ರಿ ಆಗಲಿ ಎಂದು ಹೇಳಿದರು.












Click it and Unblock the Notifications