Rain: ಆಯ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದ ಬೈಕ್ ಸವಾರರು – ಓರ್ವ ನಾಪತ್ತೆ!

ಬೆಳಗಾವಿ ಆಗಸ್ಟ್ 4: ರಾಜ್ಯದ ಹಲವೆಡೆ ಅಧಿಕ ಮಳೆಯಾಗುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಮಳೆಯ ನಡುವೆ ಬೈಕ್‌ನಲ್ಲಿ ಸಾಗುತ್ತಿದ್ದ ಸವಾರರು ಆಯ ತಪ್ಪಿ ನದಿಗೆ ಬಿದ್ದಿದ್ದಾರೆ.

ಬೆಳಗಾವಿ ತಾಲೂಕಿನ ಕಂಗ್ರಾಳಿ ಬಳಿಯ ಮಾರ್ಕಂಡೇಯ ನದಿಗೆ ಇಬ್ಬರು ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಬೈಕ್ ನದಿಗೆ ಬೀಳುತ್ತಿದ್ದಂತೆ ಅಲತ್ತಗಾ ಗ್ರಾಮದ ಯುವಕ ನಾಪತ್ತೆಯಾಗಿದ್ದಾನೆ. ಆತನೊಂದಿಗೆ ಇದ್ದ ಮತ್ತೊರ್ವ ಯುವಕ ಈಜಿ ದಡ ಸೇರಿದ್ದಾನೆ.

Bike fell into Markandeya river in Belagavi - One missing

ನಾಪತ್ತೆಯಾದ ಯುವಕನನ್ನು ಓಂಕಾರ ಅರುಣ ಪಾಟೀಲ ಎಂದು ಗುರುತಿಸಲಾಗಿದೆ. ಜ್ಯೋತಿನಾಥ ಪಾಟೀಲ ಎಂಬ ಯುವಕ ಈಜಿ ದಡ ಸೇರಿದ್ದಾನೆ. ಸದ್ಯ ನಾಪತ್ತೆಯಾದ ಯುವಕ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಮಾರ್ಕಂಡೇಯ ನದಿಯಲ್ಲಿ ಕಾರ್ಯಚರಣೆ ಆರಂಭವಾಗಿದೆ.

ಅಮವಾಸ್ಯೆ ಇದ್ದ ಕಾರಣ ಹೇರ್‌ ಕಟ್ಟಿಂಗ್‌ಗಾಗಿ ಬೆಳಗಾವಿಗೆ ಹೊರಟಿದ್ದ ಯುವಕರು ನಿಯಂತ್ರಣ ತಪ್ಪಿ ಹರಿಯುವ ನದಿಗೆ ಬಿದ್ದಿದೆ. ಇದರಲ್ಲಿ ಒಬ್ಬರು ಈಜಿ ದಡ ಸೇರಿದ್ದಾರೆ. ಆದರೆ ಇನ್ನೊಬ್ಬ ಯುವಕ ಈಜಲು ಆಗದೆ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗೆ ಕಾರ್ಯಚರಣೆ ಆರಂಭವಾಗಿದೆ.

ಕೊಡಗಿನಲ್ಲಿ ಜಲಸ್ಪೋಟ-ಗುಡ್ಡ ಕುಸಿತದ ಆತಂಕ

ವಯನಾಡಿನಲ್ಲಿ ಗುಡ್ಡ ಕುಸಿತದಿಂದಾಗಿ ಸಾಕಷ್ಟು ಪ್ರಾಣ ಹಾನಿ ಸಂಭವಿಸಿದೆ. ಆದರೀಗ ಕೊಡಗು ಜಿಲ್ಲೆಯಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾಕೆಂದರೆ ಮುಂಗಾರು ಅಬ್ಬರಿಸಿ ಬೊಬ್ಬಿರಿಯುತ್ತಿರುವುದರಿಂದ ಬೆಟ್ಟ-ಗುಡ್ಡ ಕುಸಿಯುವ ಆತಂಕ ಶುರುವಾಗಿದೆ. ನದಿ ಅಂಚಿನಲ್ಲಿ ಅಪಾಯದ ವಾತಾವರಣ ಆರಂಭವಾಗಿದೆ.

ಈ ಹಿಂದೆ ಅಪಾಯ ಸಂಭವಿಸಿದ ಪ್ರದೇಶ ಆಧಾರದಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳನ್ನು ಗುರುತಿಸಲಾಗಿದೆ. ಹೀಗಾಗಿ ಈ ಅಪಾಯದ ಸ್ಥಳದಲ್ಲಿರುವ 2,995 ಕುಟುಂಬಗಳು ಸ್ಥಳಾಂತರಕ್ಕೆಂದು ಗುರುತು ಮಾಡಲಾಗಿದೆ. ಈಗಾಗಲೇ 313 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಹತ್ತು ಪರಿಹಾರ ಕೇಂದ್ರಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದೆ. ಅಪಾಯದಲ್ಲಿರುವ ಕೆಲವರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+