ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ! ತಾಯಿ-ಮಗಳ ಜತೆ ಜಗಳ: ಸಾರ್ವಜನಿಕವಾಗಿ ಬಟ್ಟೆ ಹರಿದು ಹಲ್ಲೆ
ಬೆಂಗಳೂರು, ನವೆಂಬರ್ 16: ರಾಜ್ಯದ ದೊಡ್ಡ ಜಿಲ್ಲಾಯಾದ, ಮಹಾರಾಷ್ಟ್ರಕ್ಕೆ ಹೊಂದಿಕೊಮಡ ಬೆಳಗಾವಿ ಮಹಿಳೆ ಬೆತ್ತಲೆಗೊಳಿಸಿದ ಮತ್ತೊಂದು ಪ್ರಕರಣ ವರದಿ ಆಗಿದೆ. ಹಳೆಯ ಘಟನೆ ಮಾಸುವ ಮೊದಲೇ ಮತ್ತೊಂದು ಅಂತದ್ದ ಕೃತ್ಯ ನಡೆದಿದೆ. ಆರೋಪಿಗಳ ವಿರುದ್ಧ ವಿವಿಧ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದೆ, ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಓಡಿಸಿಕೊಂಡು ಹೋದ ಎಂಬ ಕಾರಣಕ್ಕೆ ಯುವತಿ ಸಂಬಂಧಿಕರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದರು. ಈ ಪ್ರಕರಣ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿತ್ತು. ನ್ಯಾಯಾಲಯ ಬೇಸರ ವ್ಯಕ್ತಪಡಿಸಿತ್ತು. ಇದೀಗ ಮತ್ತೊಬ್ಬ ಮಹಿಳೆಯನ್ನು ಎಳೆದಾಡಿ ಅರೆಬೆತ್ತಲೆ ಮಾಡಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಲಾಗಿದೆ. ಜಿಲ್ಲೆಯ ವಡ್ಡರವಾಡಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಮಗಳು ವೇಶಾವಾಟಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಡೆದ ಹಲ್ಲೆ ಘಟನೆ ಇದಾಗಿದೆ. ಮನೆಗೆ ನುಗ್ಗಿ bಮನೆಯಲ್ಲಿದ್ದ ತಾಯಿ ಹಾಗೂ ಮಗಳನ್ನು ಹೊರಕ್ಕೆ ಎಳೆದು ತಂದು ದಾಂಧಲೆ ಮಾಡಿ ಅಟ್ಟಹಾಸ ಮೆರೆಯಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ತಾಯಿ ಮಗಳು ವಾಸವಿದ್ದ ಮನೆಯ ಪಕ್ಕದ ಅಷ್ಟೇಕರ್ ಕುಟುಂಬದಿಂದ ಹಲ್ಲೆ ನಡೆದಿದೆ ಎಂಬ ಆರೋಪ. ಮನೆಯಿಂದ ಹೊರಕ್ಕೆ ಎಳೆದೊಯ್ದ ಪಕ್ಕ ಮನೆಯ ಸದಸ್ಯರು ಎಳೆದಾಡಿದ್ದಾರೆ. ಈ ವೇಳೆ ಮನೆ ಮುಂದೆ ಓಣಿಯ ಜನರೆಲ್ಲ ಸೇರಿದ್ದಾರೆ. ಗಲಾಟೆ ದೊಡ್ಡದಾಗಿದೆ. ಈ ವೇಳೆ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತಿಲಸಾಗಿದೆ.
ಈ ಅಮಾನವೀಯ ಘಟನೆಗೆ ಕಾರಣವೇನು?
ಈ ತಾಯಿ ಹಾಗೂ ಮಗಳಿರುವ ಮನೆಗೆ ಸಂಬಂಧಿಕರು ಅಲ್ಲದವರು, ಮನೆಯಲ್ಲಿ ಇಲ್ಲದವರು ಆಗಾಗ ಮನೆಗೆ ಬಂದು ಹೋಗುತ್ತಾರೆ. ಇವರಿಬ್ಬರು ಸೇರಿಕೊಂಡು ವೇಶಾವಾಟಿಕೆ ದಂಧೆ ಮಾಡುತ್ತಿದ್ದಾರೆ ಎಂದು ಪಕ್ಕದ ಮನೆಯವರು ಆರೋಪಿಸಿದ್ದಾರೆ.
ಕಾರಣದಿಂದಲೇ ಇವರನ್ನು ಹಾಲಿ ಮನೆಯಿಂದ ಬಿಡಿಸುವ ಉದ್ದೇಶದಿಂದ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಲಾಗಿದೆ. ತಾಯಿ ಮಗಳನ್ನ ಮನೆ ಬಿಡಿಸಲು ಈ ರೀತಿ ಸುಖಾಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದಾರೆ. ತಮಗೆ ಜೀವ ಭಯ ಇದೆ ರಕ್ಷಣೆ ನೀಡಿ ಎಂದು ತಾಯಿ ಮತ್ತು ಮಗಳು ಮನವಿ ಮಾಡಿದ್ದಾರೆ. ಪುಟ್ಟ ಬಾಲಕಿ ಜೊತೆಗೆ ನಾಲ್ಕು ವರ್ಷದಿಂದ ತಾಯಿ, ಮಗಳು ಸೇರಿ ಮೂವರು ಈ ಮನೆಯಲ್ಲಿ ವಾಸವಿರುವುದಾಗಿ ಘಟನೆ ಬಳಿಕ ಅವರು ಪೊಲೀಸರ ಮುಂದೆ ತಿಳಿಸಿದ್ದಾರೆ.
ಎರಡು ದಿನ ನ್ಯಾಯಕ್ಕಾಗಿ ಅಲೆದ ತಾಯಿ, ಮಗಳು
ಬಟ್ಟೆ ಹರಿದು ಹಲ್ಲೆ ಮಾಡಿರುವ ಘಟನೆ ನಂತರ ನ್ಯಾಯಕ್ಕಾಗಿ ಎರಡು ದಿನ ಅಲೆದರು ಮಾಳಮಾರುತಿ ಠಾಣೆ ಪೊಲೀಸರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮನೆಗೆ ನುಗ್ಗಿ ಹಲ್ಲೆ ಮಾಡಿ ಬಟ್ಟೆ ಹರಿದು ಹಾಕುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸೋಮವಾರ ಸಂಜೆಯಿಂದ ಮನೆ ಬಿಟ್ಟು ನ್ಯಾಯ ಕೊಡಿಸಿ, ರಕ್ಷಣೆ ನೀಡಿ ಎಂದು ಆ ತಾಯಿ ಮತ್ತು ಮಗಳು ಓಡಿದ್ದಾರೆ. ಘಟನೆಯ ವಿಡಿಯೋ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.
ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಎಫ್‌ಐಆರ್ ದಾಖಲಾಗಿದೆ. ನಿನ್ನೆ ರಾತ್ರಿ ಮೂರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ ಪೊಲೀಸರು. ಬಿಎನ್‌ಎಸ್ ಕಾಯ್ದೆಯಡಿ ಆರೋಪಿಗಳ ವಿರುದ್ಧ 115(2), 3(5), 331, 352, 74 ಸೆಕ್ಷನ್ ನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನೆ ಬಗ್ಗೆ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯೆ
ಬೆಳಗಾವಿಯ ವಡ್ಡರವಾಡಿಯಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಅವರಿಗೆ ಖುದ್ದಾಗಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಿ, ಪ್ರಕರಣದ ಕುರಿತು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.












Click it and Unblock the Notifications