ಮಹದಾಯಿಗೆ ಆಗ್ರಹಿಸಿ ರಾಮದುರ್ಗ ಶಾಸಕ ಅಶೋಕ್ ರಾಜೀನಾಮೆ
ರಾಮದುರ್ಗ(ಬೆಳಗಾವಿ), ಜುಲೈ 30: ಮಹದಾಯಿ ಯೋಜನೆಯಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ವಿರೋಧಿಸಿ ಬೆಳಗಾವಿ ಜಿಲ್ಲೆ ರಾಮದುರ್ಗದ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಒನ್ ಇಂಡಿಯಾ ಕನ್ನಡ ಜೊತಗೆ ಮಾತನಾಡಿದ ಅವರು, 'ನಾನು ನನ್ನ ಕ್ಷೇತ್ರದಲ್ಲಿರುವುದರಿಂದ ತಹಸೀಲ್ದಾರ್ ಮೂಲಕ ಸ್ಪೀಕರ್ ಗೆ ರಾಜೀನಾಮೆ ಪತ್ರವನ್ನು ನೀಡುತ್ತಿದ್ದೇನೆ. [ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]
ಒಂದು ವೇಳೆ ಖುದ್ದಾಗಿ ಬಂದು ರಾಜೀನಾಮೆ ಸಲ್ಲಿಸಬೇಕೆಂದು ಸಭಾಧ್ಯಕ್ಷರು ಹೇಳಿದರೆ ಬೆಂಗಳೂರಿಗೆ ತೆರಳಿ ಖುದ್ದಾಗಿ ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸುವೆ ಎಂದು ಹೇಳಿದರು. [ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]

ಕಳಸಾ ಬಂಡೂರಿ ಕೇವಲ ಪ್ರತಿಭಟನೆಗಳು ಮಾಡಿದರೇ ಮಾತ್ರ ಪರಿಹಾರ ಆಗುವುದಿಲ್ಲ ಈ ಭಾಗದ ಎಲ್ಲಾ ಶಾಸಕರು, ಸಂಸದರು, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ ಸದಸ್ಯರುಗಳು ರಾಜೀನಾಮೆ ನೀಡುವ ಮೂಲಕ ಪ್ರಧಾನಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರ.

ಮಹದಾಯಿ ಕುಡಿಯುವ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಇದರಿಂದ ನಾನು ಯಾರ ಒತ್ತಡಕ್ಕೆ ಒಳಗಾಗದೆ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆಂದು ಹೇಳಿದರು.
ಮಹದಾಯಿಗೆ ಬೆಂಬಲ ನೀಡಲು 2 ಜಿಲ್ಲಾ ಪಂಚಾಯಿತಿಯ ಸದಸ್ಯರು, 9 ತಾಲೂಕು ಮಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, 13 ಜನ ಪುರಸಭೆ ಸದಸ್ಯರು, 22 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗು ಉಪಾಧ್ಯಕ್ಷರು ಸಾಮೂಹಿಕವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂದು ತಿಳಿಸಿದರು.












Click it and Unblock the Notifications