ಬೆಳಗಾವಿ : ವಿದ್ಯಾರ್ಥಿಯೊಂದಿಗೆ ಪ್ರಿನ್ಸಿಪಾಲ್ ಕಾಮದಾಟ

ಬೆಳಗಾವಿ, ಡಿ.16 : ತನ್ನ ಕಾಲೇಜಿನ ವಿದ್ಯಾರ್ಥಿಗೆ ಸಾಲ ಕೊಟ್ಟಿದ್ದ ಪ್ರಿನ್ಸಿಪಾಲ್ ಅವನನ್ನು ದೈಹಿಕವಾಗಿ ಬಳಸಿಕೊಂಡ ಅಮಾನವೀಯ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯೊಂದಿಗೆ ಪ್ರಿನ್ಸಿಪಾಲ್ ಸಲಿಂಗ ಕಾಮದಲ್ಲಿ ತೊಡಗಿರುವ ವಿಡಿಯೋಗಳು ಫೋನ್‌ಗಳಲ್ಲಿ ಹರಿದಾಡುತ್ತಿವೆ. ಪ್ರಿನ್ಸಿಪಾಲ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರನ್ನು ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನ ಪ್ರಾಂಶುಪಾಲ ಅಶೋಕ ಬೈಲವಾಡ (62) ಎಂದು ಗುರುತಿಸಲಾಗಿದೆ. ತನ್ನದೇ ಕಾಲೇಜಿನ ರಮೇಶ ಲಮಾಣಿ (22) ಎಂಬ ವಿದ್ಯಾರ್ಥಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಅಶೋಕ ಆತನ ಜೊತೆ ಕಳೆದ ಒಂದು ವರ್ಷದಿಂದ ಸಲಿಂಗಕಾಮದಲ್ಲಿ ತೊಡಗಿದ್ದ. ಈಗ ಪ್ರಕರಣ ಬೆಳಕಿಗೆ ಬಂದಿದೆ.

arrest

ಸಾಲಕೊಟ್ಟು ಬ್ಲಾಕ್ ಮೇಲ್ : ಬಂಧಿತ ಅಶೋಕ ಬೈಲವಾಡ ವಿದ್ಯಾರ್ಥಿಗೆ ಸಾಲದ ರೂಪದಲ್ಲಿ ಹಣ ನೀಡಿದ್ದ. ನಂತರ ಆತನನ್ನು ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿ, ಬೆಳಗಾವಿ ಹೊರ ವಲಯದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. [ಶಾಲೆಯಲ್ಲಿ ಪ್ರಿನ್ಸಿಪಾಲ್ ಪಾನಗೋಷ್ಠಿ]

ಪ್ರಾಂಶುಪಾಲರ ವರ್ತನೆಯಿಂದ ರೋಸಿ ಹೋದ ವಿದ್ಯಾರ್ಥಿ ಸ್ನೇಹಿತರಿಗೆ ಈ ವಿಷಯವನ್ನು ತಿಳಿಸಿದ್ದ. ವಿದ್ಯಾರ್ಥಿಗಳು ಪ್ರಾಂಶುಪಾಲರ ಈ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿರುವುದಲ್ಲದೇ, 20 ಲಕ್ಷ ಹಣ ಕೊಡದಿದ್ದರೆ, ಇದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು.

ವಿದ್ಯಾರ್ಥಿಗಳ ಬೆದರಿಕೆಗೆ ಜಗ್ಗಿದ ಪ್ರಿನ್ಸಿಪಾಲ್ 25 ಸಾವಿರ ರೂ. ಹಣ ನೀಡಲು ಒಪ್ಪಿಕೊಂಡಿದ್ದರು. ಆದರೆ, ವಿದ್ಯಾರ್ಥಿಗಳು ಇದಕ್ಕೆ ಒಪ್ಪದೇ ಪದೇ-ಪದೇ ಪೀಡಿಸತೊಡಗಿದರು. ಇದರಿಂದ ಕೋಪಗೊಂಡ ಪ್ರಿನ್ಸಿಪಾಲ್, ಬೆಳಗಾವಿಯ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ದೂರು ನೀಡಿದ್ದರು.

ಪ್ರಿನ್ಸಿಪಾಲ್‌ನಿಂದ ದೌರ್ಜನ್ಯಕ್ಕೊಳಗಾದ ಯುವಕನೂ ಅವರ ವಿರುದ್ಧ ಪ್ರತಿದೂರು ನೀಡಿದ. ಸದ್ಯ ಪೊಲೀಸರು ಪ್ರಾಂಶುಪಾಲರನ್ನು ಬಂಧಿಸಿ, ಬೆಳಗಾವಿ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರಿಕ್ಷೆಗಾಗಿ ದಾಖಲು ಮಾಡಿದ್ದಾರೆ. ಇತ್ತ ಪ್ರಿನ್ಸಿಪಾಲ್‌ಗೆ ಬ್ಲಾಕ್ ಮೇಲ್ ಮಾಡಿದ ಯುವಕರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+