ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳಗಾವಿಯ ಯೋಧ ಹುತಾತ್ಮ

ಬೆಳಗಾವಿ, ನವೆಂಬರ್ 27 : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಬೆಳಗಾವಿ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಿದ್ದ ಅವರು ಕೆಲವು ದಿನಗಳ ಹಿಂದೆ ಕರ್ತವ್ಯಕ್ಕೆ ಮರಳಿದ್ದರು.

ಹುತಾತ್ಮರಾದ ಯೋಧರನ್ನು ಪುಂಡಲೀಕ ಜಾಧವ್ (28) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಲಗಾಮ್‌ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಹುತಾತ್ಮರಾದರು.

ಪುಂಡಲೀಕ ಜಾಧವ್ 11 ವರ್ಷಗಳಿಂದ ಮರಾಠ ರೆಜಿಮೆಂಟ್‌ನಲ್ಲಿ ಯೋಧರಾಗಿದ್ದರು. ಜಾಧವ್ ಅವರ ತಂದೆ ಸಹ ನಿವೃತ್ತ ಸೈನಿಕರು. ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಪುಂಡಲೀಕ ಅವರು ಪತ್ನಿ ಮತ್ತು 3 ತಿಂಗಳ ಮಗುವನ್ನು ಅಗಲಿದ್ದಾರೆ.

Belagavi army soldier martyred in Jammu and Kashmir

ದೀಪಾವಳಿ ಹಬ್ಬಕ್ಕೆ ಮನಗೆ ಬಂದಿದ್ದ ಪುಂಡಲೀಕ ಅವರು ಮಗುವಿನ ಜೊತೆ ಕಾಲ ಕಳೆದಿದ್ದರು. ಕೆಲವು ದಿನಗಳ ಹಿಂದೆ ಕರ್ತವ್ಯಕ್ಕೆ ಮರಳಿದ್ದರು. ಪುಂಡಲೀಕ ಅವರು ಹುತಾತ್ಮರಾಗಿದ್ದಾರೆ ಎಂದು ಕುಟುಂಬದವರಿಗೆ ಮಾಹಿತಿ ರವಾನಿಸಲಾಗಿದೆ.

ಪುಂಡಲೀಕ ಅವರ ಸಾವಿನಿಂದಾಗಿ ಸ್ವಗ್ರಾಮ ಬೂದಿಹಾಳ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+