ಬೆಳಗಾವಿಯಲ್ಲಿ ಪಲ್ಟಿಯಾದ KSRTC ಬಸ್: ಇಬ್ಬರ ದುರ್ಮರಣ
ಬೆಳಗಾವಿ, ಜುಲೈ 14: ಕೆಎಸ್ ಆರ್ ಟಿಸಿಗೆ ಸೇರಿದ ಬಸ್ಸೊಂದು ಪಲ್ಟಿಯಾದ ಪರಿಣಾಮ ಇಬ್ಬರು ದುರ್ಮರಣಕ್ಕೀಡಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯಿಂದ ಉಡುಪಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸು ಬೆಳಗಾವಿಯ ಬಡೇಕೋಳ ಮಠ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು.
ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಗುರುತು ಪತ್ತೆಯಾಗಿಲ್ಲ.

ಇತ್ತೀಚೆಗಷ್ಟೇ ಚಿಕ್ಕಮಗಳೂರಿನ ಶೃಂಗೇರಿ ಬಳಿ ಕೆಎಸ್ ಆರ್ ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದರಿಂದ 20 ಜನ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿತ್ತು.
ಈ ಘಟನೆಯಲ್ಲಿ ಬಸ್ಸು ಪಲ್ಟಿಯಾದ ನಂತರ ರಸ್ತೆ ಬದಿಯಲ್ಲಿದ್ದ ದೊಡ್ಡ ಕಲ್ಲೊಂದಕ್ಕೆ ಹೊಡೆದು ನಿಂತಿದ್ದರಿಂದ ಅದು ಪ್ರಪಾತಕ್ಕೆ ಬೀಳದಂತೆ ತಡೆದಿತ್ತು. ಈ ಮೂಲಕ ಭಾರೀ ಅವಘಡವೊಂದು ತಪ್ಪಿತ್ತು.












Click it and Unblock the Notifications