ಲಕ್ಷ್ಮೀ ಹೆಬ್ಬಾಳ್ಕರ್‌ರಿಂದ ಮತ್ತೊಂದು ದೂರು: CID ಸ್ಥಳ ಮಹಜರಿಗೆ ಅವಕಾಶ ಕೊಡಲ್ಲ: ಸಭಾಪತಿ

ಬೆಳಗಾವಿ, ಜನವರಿ 05: ಬೆಳಗಾವಿ ಚಳಿಗಾಲ ಅಧಿವೇಶನ ವೇಳೆ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಎಂಎಲ್‌ಸಿ ಸಿಟಿ ರವಿ ಅವರು ಆಕ್ಷೇಪಾರ್ಹ ಮಾತು ಆಡಿದ್ದಾರೆ ಎಂಬ ವಿಚಾರ ಸಿಐಡಿ ತನಿಖೆ ಹಂತದಲ್ಲಿದೆ. ಈ ಮಧ್ಯೆ ಸಭಾಪತಿಗೆ ಸಚಿವೆ ಮತ್ತೊಮ್ಮೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಳ ಮಹಜರು ಕುರಿತು ಮಹತ್ವ ಹೇಳಿಕೆ ನೀಡಿದ್ದಾರೆ.

ಭಾನುವಾರರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಿಐಡಿ ತನಿಖಾಧಿಕಾರಿಗಳು ಯಾವ ರೀತಿ ಸ್ಥಳ ಮಹಜರು ಮಾಡುತ್ತಾರೆ ಎಂದು ತಿಳಿಸಬೇಕಾಗುತ್ತದೆ. ಸದನದಲ್ಲಿ ಕುರ್ಚಿ ಅಥವಾ ಟೇಬಲ್ ಸ್ಥಳ ಮಹಜರು ಮಾಡುತ್ತಾರಾ? ಇಲ್ಲವೇ ಸದನಕ್ಕೆ ಕರೆದುಕೊಂಡು ಬಂದು ತನಿಖೆ ಮಾಡುತ್ತಾರೆ ಎಂಬುದನ್ನು ಹೇಳಬೇಕು.

Basavaraj Horatti reaction to Can allow to CID for Spot inspection of Lakshmi Hebbalkar Case

ಮಹಜರು ಬಗ್ಗೆ ಸಿಐಡಿ ತಿಳಿಸಲಿ: ಹೊರಟ್ಟಿ

ತನಿಖಾಧಿಕಾರಿಗಳು ಯಾವ ರೀತಿ ಪಂಚನಾಮೆ ಮಾಡುತ್ತಾರೆ ಎಂಬುದನ್ನು ಮೊದಲು ತಿಳಿಸಬೇಕು. ಸಿಐಡಿ ಅವರಿಗೆ ಸದನದ ಮಹಜರು ಮಾಡಲು ಅನುಮತಿ ಕೊಡಬೇಕೋ ಕೊಡಬಾರದೋ ಎಂಬುದನ್ನು ಹೇಳೊಕೆ ಆಗೊದಿಲ್ಲ, ಪರಿಶೀಲನೆ ಮಾಡುತ್ತೇನೆ. ಸದ್ಯಕ್ಕೆ ಸಿಐಡಿ ಅವರಿಗೆ ಮಹಜರಿಗೆ ಅವಕಾಶ ಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ಸಾಕ್ಷ ಕೊಡಿ ಎಂಬ ಸಿಐಡಿ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶನಿವಾರ ವಿಡಿಯೋ ಸಾಕ್ಷಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೊಟ್ಟಿದ್ದಾರೆ. ಇದಕ್ಕೆ ಮೊದಲು ಬಿಜೆಪಿ ನಾಯಕ ಸಿಟಿ ರವಿ ಅವರು ಕೊಟ್ಟಿದ್ದರು. ಅವರ ಕೊಟ್ಟಾಗ ಒಂದು ಸೈಡ್ ಆಗಿತ್ತು. ಇದೀಗ ಸಿಐಡಿಗೆ ಎರಡು ಕಡೆಯವರಿಂದ ವಿಡಿಯೋ ಸಾಕ್ಷ್ಯಗಳು ಸಿಕ್ಕಿವೆ.

ನಾವು ಕಾರ್ಯದರ್ಶಿಗಳ ಮುಖೇನ ವಿಡಿಯೋ ನೀಡಿದ್ದೇವೆ. ಈ ಕುರಿತು ನಾಳೆಗೆ ಯಾವ ವರದಿ ಬರಲಿದೆ ಎಂದು ನೋಡಿಕೊಂಡು ಎಫ್ಎಸ್ ಎಲ್ ಗೆ ಕಳುಹಿಸುತ್ತೇವೆ. FSL ಗೆ ವಿಡಿಯೋ ಹೋದ ಬಳಿಕ ಸತ್ಯಾಂಶದ ಹೊರ ಬಿದ್ದ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಮತ್ತೊಂದು ಭಾರಿ ಸಂಧಾನ ಯತ್ನ: ಹೊರಟ್ಟಿ

ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವೆ ಸಂಧಾನ ಕುರಿತು ಇಂದು ನಮ್ಮ ಕಾರ್ಯದರ್ಶಿಗೆ ಹೇಳಿದ್ದೇನೆ. ಸೋಮವಾರ ಇಲ್ಲವೇ ಮಂಗಳವಾರ ಇಬ್ಬರಿಗೆ ಪತ್ರ ಬರೆದು ಆ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು.

ಸಚಿವರು ಮತ್ತು ಎಂಎಲ್‌ಸಿ ನಡೆ ನೋಡಿದರೆ ಇಬ್ಬರು ಸಂಧಾನ ಆಗುವುದು ಅನುಮಾನ. ಈಗಾಗಲೇ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ. ಹೀಗಿದ್ದರು ಇಬ್ಬರಿಗೂ ಕರೆ ಮಾಡಿ ಸಂಧಾನ ಮಾಡಲು ಪ್ರಯತ್ನಿಸುವೆ. ಆದರೆ ಇದು ಶೇಕಡಾ 99 ರಷ್ಟು ಸಂಧಾನ ಆಗುವುದು ಅನುಮಾನ ಎಂದು ಹೇಳಿದರು.

ಮೊದಲು ಸಿಐಡಿ ಅಧಿಕಾರಿಗಳು ಮಹಜರು ಕುರಿತು ನಮಗೆ ಸೂಕ್ತ ಕಾರಣ ನೀಡಬೇಕು. ಬಳಿಕವೇ ಮಹಜರಿಗೆ ಅನುಮತಿ ನೀಡುವ ಬಗ್ಗೆ ನಿರ್ಧಾರಕ್ಕೆ ಬರಲಿದ್ದೇವೆ. ನಮಗೆ ಬೇರಾವುದೇ ವಿಡಿಯೋ ಸಿಕ್ಕಿಲ್ಲ. ಮಾಧ್ಯಮಗಳು ಆಡಿಯೋ, ವಿಡಿಯೋ ಕೊಟ್ಟರೂ ಸಹ ಅದನ್ನು ಎಫ್ ಎಸ್ ಎಲ್ ಗೆ ಕಳುಹಿಸುತ್ತೇನೆ.

ಲಕ್ಷ್ಮೀ ಹೆಬ್ಬಾಳಕರ್ ಮತ್ತು ಸಿಟಿ ರವಿ ಇಬ್ಬರು ಪ್ರಕರಣ ಸಂಬಂಧ ಕಳೆದ ಡಿಸೆಂಬರ್ 19ರಂದೇ ದೂರು ನೀಡಿದ್ದರು. ಸಭಾಪತಿಯಾದ ನಾನು ದೂರು ಸ್ವೀಕರಿಸಿ, ಒಂದಷ್ಟು ವಿಷಯಗಳನ್ನು ತಿರ್ಮಾನಿಸಿದ್ದೆ. ಸಭಾಪತಿಯಾದ ನನ್ನ ಕೆಲಸ ನಾನು ಮಾಡಿದ್ದೇನೆ. ಇದೀಗ ಸಚಿವೆ ಮತ್ತೊಮ್ಮೆ ಸಿಟಿ ರವಿ ಅವರ ವಿರುದ್ಧ ದೂರು ಕೊಟ್ಟಿದ್ದಾರೆ. ಈ ದೂರನ್ನು ನಾನು ಸೋಮವಾರ ಪರಿಶೀಲನೆ ಮಾಡುತ್ತೇನೆ.

ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೋ ಆಡಿಯೋ ನೋಡುತ್ತೇವೆ. ಎಫ್ ಎಸ್ ಎಲ್ ಗೆ ಕಳುಹಿಸುವ ಹಾಗೆ ಇದ್ದಲ್ಲಿ ಕಳುಹಿಸುತ್ತೆವೆ, ನಂತರ ವರದಿ ಬಂದ ನಂತರ ಮುಂದಿನ ಪ್ರಕ್ರಿಯೆಗೆ ಹೋಗುತ್ತೇವೆ. ಅಲ್ಲಿಯವರೆಗೆ ಮತ್ತೊಮ್ಮೆ ಸಂಧಾನ ಯತ್ನ ಮಾಡಲಾಗುವುದು ಎಂದು ಅವರು ಪುನರುಚ್ಚರಿಸಿದರು.

ಇಬ್ಬರು ಸಿಟ್ಟು ಕಡಿಮೆ ಮಾಡಿಕೊಂಡು ಸಂಧಾನಕ್ಕೆ ಬರುವುದಾದರೆ, ನಾನು ಜವಾಬ್ದಾರಿ ಹೊರಬಹುದು. ಕಾಳಜಿ ವಹಿಸಬಹುದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+