ರಾಮದುರ್ಗ: ಅಕ್ಷರ ದಾಸೋಹ ಊಟ ಸೇವಿಸಿ 60 ವಿದ್ಯಾರ್ಥಿಗಳು ಅಸ್ವಸ್ಥ

Recommended Video

      ಅಕ್ಷರ ದಾಸೋಹ ಊಟದಿಂದ ಸುಮಾರು 60 ವಿದ್ಯಾರ್ಥಿಗಳು ಅಸ್ವಸ್ಥ | Oneindia Kannada

      ಬೆಳಗಾವಿ, ಜೂನ್.20 : ಅಕ್ಷರ ದಾಸೋಹ ಊಟ ಸೇವಿಸಿ ಸುಮಾರು 60 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ರಾಮದುರ್ಗ ತಾಲೂಕಿನ ಲಕನಾಯಕನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

      ಅಸ್ವಸ್ಥ ವಿದ್ಯಾರ್ಥಿಗಳನ್ನು ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಪಾಲಕರು ಆಸ್ಪತ್ರೆಗೆ ಘೆರಾವ್ ಹಾಕಿದ್ದಾರೆ.
      ಇತ್ತ ಕಡೆ ಮಕ್ಕಳನ್ನು ಸಮಾಧಾನಪಡಿಸಿ, ಚಿಕಿತ್ಸೆ ನೀಡಲು ವೈದ್ಯರು ಪರದಾಡುತ್ತಿದ್ದಾರೆ.

      ಅಡುಗೆಗೆ ಹುಳ ಇರುವ ಆಹಾರ ಪದಾರ್ಥಗಳನ್ನು ಉಪಯೋಗಿಸಿದ್ದರಿಂದ ಈ ಘಟನೆ ಸಂಭವಿಸಿರಬಹುದು ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿದ್ದು,
      ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

      Around 60 students have been ill for eating Akshara dasoha food.

      ಊಟದ ವಿಚಾರದಲ್ಲಿ ಸದಾ ಎಚ್ಚರಿಕೆ ಇರಬೇಕು. ಮೈ ಮರೆತರೆ ಜೀವಕ್ಕೇ ಅಪಾಯ. ಈ ಹಿಂದೆ ಬಿಹಾರದಲ್ಲಿ ಬಿಸಿಯೂಟ ಸೇವಿಸಿ 23 ಮಕ್ಕಳು ಬಲಿಯಾಗಿದ್ದರು. ಇದು ನಮಗೂ ಎಚ್ಚರಿಕೆ ಗಂಟೆಯಾಗಿದ್ದು, ಶುಚಿತ್ವಕ್ಕೆ ಆದ್ಯತೆ ನೀಡಬೇಕೆನ್ನುವ ಎಸ್ಸೆಮ್ಮೆಸ್ ಗಳು ಆಗಾಗ ಅಧಿಕಾರಿ ವಲಯದಲ್ಲಿ ಹರಿದಾಡುತ್ತಿರುತ್ತವೆ.

      ವಾಸ್ತವವಾಗಿ, ನಮ್ಮ ರಾಜ್ಯದಲ್ಲಿ ಅಕ್ಷರ ದಾಸೋಹ ಜಾರಿಯಾದಾಗಲೂ ಇಂಥದ್ದೇ ನೂರೆಂಟು ಸಮಸ್ಯೆಗಳು ತೊಡರುಗಾಲಾಗಿದ್ದವು. ಎಲ್ಲ ಶಾಲಾ ಮಕ್ಕಳಿಗೆ ಊಟ ಕೊಡುವುದೆಂದರೆ, ಉಡಿಯಲ್ಲಿ ಕೆಂಡ ಇಟ್ಟುಕೊಂಡ ಹಾಗೆಯೇ. ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಸ್ಥಿತಿ. ಇಂಥದ್ದೇ ಆತಂಕದೊಂದಿಗೇ ನಮ್ಮ 'ಅಕ್ಷರ ದಾಸೋಹ' ಯೋಜನೆ ಶುರುವಾಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+