UPSC ಸಾಧನೆ: ಪ್ರಿಯಾಂಕಾರನ್ನು ಸನ್ಮಾನಿಸಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ, ಆಗಸ್ಟ್ 16: ಯುಪಿಎಸ್ಸಿ ಪರೀಕ್ಷೆಯಲ್ಲಿ 670ನೇ ಶ್ರೇಯಾಂಕ ಪಡೆದು ಉತ್ತಮ ಸಾಧನೆ ಮಾಡಿದ ಚಿಕ್ಕೋಡಿಯ ಪ್ರಿಯಾಂಕಾ ಕಾಂಬಳೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭಾನುವಾರ ಸನ್ಮಾನಿಸಿ, ಗೌರವಿಸಿದರು.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಪ್ರಿಯಾಂಕಾ ಕಾಂಬಳೆ ಅವರಿಗೆ ಸಾವಿತ್ರಿಭಾಯಿ ಫುಲೆ ಅವರ ಭಾವಚಿತ್ರ ನೀಡಿ ಗೌರವಿಸಿದರು.
ಈ ವೇಳೆ ಪ್ರಿಯಂಕಾ ಅವರ ತಂದೆ ವಿಠ್ಠಲ ಕಾಂಬಳೆ ಹಾಗೂ ತಾಯಿ ಮಲ್ಲವ್ವ ಕಾಂಬಳೆಯವರಿಗೂ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಬಡತನದ ಮಧ್ಯೆಯೂ ಪ್ರಿಯಾಂಕಾ ಉತ್ತಮ ಸಾಧನೆ ಮಾಡಿ, ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದರು.

ಮುಂದೆ ಒಳ್ಳೆಯ ಅಧಿಕಾರಿಯಾಗಿ ದೇಶಕ್ಕೆ, ರಾಜ್ಯಕ್ಕೆ, ಹೆತ್ತವರಿಗೆ ಕೀರ್ತಿ ತರಲಿ, ಈ ಹಿಂದೆ ತಾವು ಹೇಳಿದಂತೆ ಕೆಎಎಸ್, ಐಎಎಸ್ ಪರೀಕ್ಷೆ ಎದುರಿಸುವ ಯುವ ಜನತೆಗಾಗಿ ತರಬೇತಿ ಕೇಂದ್ರ ಆರಂಭಿಸಿ ಅವರ ಬೆನ್ನೆಲುಬಾಗಿ ನಿಲ್ಲುವುದಾಗಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದರು.












Click it and Unblock the Notifications