ಬೆಳಗಾವಿಗೆ ಬಂದ ಸರಗಳ್ಳರು, 4 ಕಡೆ ಕಳ್ಳತನ

ಬೆಳಗಾವಿ, ಜುಲೈ 26 : ಕೆಲವು ದಿನಗಳ ನಂತರ ಬೆಳಗಾವಿ ನಗರದಲ್ಲಿ ಸರಗಳ್ಳರು ಕೈ ಚಕಳಕ ತೋರಿಸಿದ್ದಾರೆ. ಭಾನವಾರ ಒಂದೇ ದಿನ 4 ಕಡೆ ಸರಗಳ್ಳತನ ನಡೆದಿದೆ. ವಿವಿಧ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪವೇ ಶಾಂತಾ ಹೆಬ್ಬಾಳ್ ಎಂಬುವವರ ಸರವನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. 40 ಗ್ರಾಂ ಸರವನ್ನು ಕಿತ್ತುಕೊಂಡು ಹೋಗವಾಗ ಅವರ ಮೇಲೆ ಹಲ್ಲೆ ಮಾಡಿದ್ದು, ಖಾಸಗಿ ಆಸ್ಪತ್ರೆಗೆ ಶಾಂತಾ ಅವರನ್ನು ದಾಖಲು ಮಾಡಲಾಗಿದೆ. [ಬೆಂಗಳೂರು : 1 ಗಂಟೆಯಲ್ಲಿ 10 ಕಡೆ ಸರಗಳ್ಳತನ]

gold

ಮತ್ತೊಂದು ಪ್ರಕರಣದಲ್ಲಿ ಸಂಗಮಣಿ ಎಂಬುವವರ 45 ಗ್ರಾಂ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಎಪಿಎಂಸಿ ಠಾಣೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳರು ದಿಚಕ್ರ ವಾಹನದಲ್ಲಿ ಬಂದಿದ್ದರು ಎಂದು ಸಂಗಮಣಿ ಮಾಹಿತಿ ನೀಡಿದ್ದಾರೆ. [ಪಣಂಬೂರು ಬೀಚ್‌ನಲ್ಲಿ ಕದ್ದ ಚಿನ್ನ ಬೆಂಗಳೂರಲ್ಲಿ ಸಿಕ್ತು]

ಯಮುನಾಪುರದಲ್ಲಿ ಮತ್ತೊಂದು ಸರಗಳ್ಳತನ ನಡೆದಿದೆ. ಕಾವೇರಿ ನಾಯಕ್ ಎಂಬುವರ ಕತ್ತಿನಲ್ಲಿದ್ದ 15 ಗ್ರಾಂ ಸರವನ್ನು ಕಸಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಲೀಲಾವತಿ ಕರಿಯಪ್ಪ ಗೌಡರ್ ಎಂಬುವರ ಕತ್ತಿನಲ್ಲಿದ್ದ 30 ಗ್ರಾಂ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+