ಶೂಟೌಟ್ ಕೇಸ್ : 'ಅಗ್ನಿ' ಶ್ರೀಧರ್ ಆರೋಪಿ ನಂ. 8

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 07: ಕಡಬಗೆರೆ ಶ್ರೀನಿವಾಸ್‌ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿ ಶ್ರೀಧರ್ ಮನೆ ಮೇಲೆ ಮಂಗಳವಾರ ಪೊಲೀಸರು ದಾಳಿ ನಡೆಸಿದರು. ನಂತರ ಬಚ್ಚನ್ ಸೇರಿದಂತೆ 10 ಜನರ ಮೇಲೆ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಕುಸಿದು ಬಿದ್ದ ಶ್ರೀಧರ್ ಸದ್ಯ ಅಪೊಲೊ ಆಸ್ಪತ್ರೆಯಲ್ಲಿದ್ದಾರೆ. ದಾಳಿ ವಿವರ ಮುಂದಿದೆ...

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಮನೆಯ ಮೇಲೆ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಡಿಸಿಪಿ ಹರ್ಷಾ, ಡಿಸಿ ಶರಣಪ್ಪ, ಡಿಸಿಪಿ ನಾರಾಯಣ ಅವರ ಪ್ರತ್ಯೇಕ ತಂಡಗಳು ವಾರೆಂಟ್ ಪಡೆದು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.[ಶ್ರೀಧರ್ ಆಪ್ತ ಸುನಿಲ್, ಒಂಟೆ ರೋಹಿತ್ ಬಂಧನ?]

ಪೊಲೀಸರ ದಾಳಿ ಸಂದರ್ಭದಲ್ಲಿ ಮನೆಯಲ್ಲಿ ಹಲವು ಮಾರಕಾಸ್ತ್ರಗಳು ಕಂಡು ಬಂದಿವೆ. ಈ ಪ್ರಕರಣ ಸಂಬಂಧ ಒಟ್ಟು ಹತ್ತು ಆರೋಪಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿ ಅಗ್ನಿ ಶ್ರೀಧರ್ ಅವರನ್ನ ಪರಿಗಣಿಸಲಾಗಿದೆ.

ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು

ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು

ಮಂಗಳವಾರ (ಫೆ. 7) ಬೆಳಗ್ಗೆ 9.30ರ ಸುಮಾರಿಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಇಸ್ರೋ ಲೇ ಔಟ್, ಪ್ರಶಾಂತಿನಗರದಲ್ಲಿರುವ ಅಗ್ನಿ ಶ್ರೀಧರ್ ಮನೆ ಮೇಲೆ ಎಸಿಪಿ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದ ತಂಡ ದಾಳಿ ನಡೆಸಿತು. ಇದಕ್ಕಾಗಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆಯಲಾಗಿತ್ತು. ಟಾಟಾ ರಮೇಶ್ ಅವರು ನೀಡಿದ್ದ ದೂರಿನ ಮೇರೆಗೆ ಯಲಹಂಕ ಪೊಲೀಸರು ಕೇಸ್ ನಂ 42/2017, ಐಪಿಸಿ ಸೆಕ್ಷನ್ 341,504,506, 34, 27,30 ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾಂಗ್ ಮಚ್ಚುಗಳ ರಾಶಿ

ಲಾಂಗ್ ಮಚ್ಚುಗಳ ರಾಶಿ

* ನಾಲ್ಕು ರಿವಾಲ್ವರ್, ಮದ್ದುಗುಂಡು
* ಎರಡು ಲಾಂಗ್
* ಎರಡು ಬಟನ್ ಚಾಕು
* ನಾಲ್ಕು ಬೇಸ್ ಬಾಲ್ ಬ್ಯಾಟ್
* ಮೂರು ಡ್ರಾಗರ್
* ಎರಡು ಪೋಕರ್
* ಎರಡು ಕತ್ತಿಗಳು
* 6,88,000 ರು ನಗದು
* 418 ಗ್ರಾಮ್ ಚಿನ್ನದ ಒಡವೆ ವಶ ಪಡಿಸಿಕೊಂಡು
ಕುಮಾರಸ್ವಾಮಿ ಲೇ ಔಟ್ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಕೆಎಸ್ ರೋಹಿತ್ ಅಲಿಯಾಸ್ ಒಂಟೆ

ಕೆಎಸ್ ರೋಹಿತ್ ಅಲಿಯಾಸ್ ಒಂಟೆ

ಕೆಎಸ್ ರೋಹಿತ್ ಅಲಿಯಾಸ್ ಒಂಟೆ -ರೌಡಿ ಪಟ್ಟಿ ಆಸಾಮಿಯಾಗಿದ್ದು, ಸ್ಫೋಟಕ ಕಾಯ್ದೆ, ಹಣಕ್ಕಾಗಿ ಅಪಹರಣ, ಹಲ್ಲೆ, ಸುಲಿಗೆ, ದೊಂಬಿ, ಗಲಭೆ, ಮೋಸ, ದರೊಡೆ ಯತ್ನ ಸೇರಿದಂತೆ ಹಲವು ಘೋರ ಅಪರಾಧ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದು, ಎಲ್ಲವೂ ವಿವಿಧ ಹಂತದಲ್ಲಿ ಇರುತ್ತವೆ. 14/01/2017ರಂದು ಹೈಕೋರ್ಟಿನಿಂದ ರೌಡಿ ಪಟ್ಟಿಯಿಂದ ಮುಕ್ತಾಯಗೊಳ್ಳಲು ನಿರ್ದೇಶನ ಸಿಕ್ಕಿದೆ.

ಸುನೀಲ್ ಅಲಿಯಾಸ್ ಸೈಲೆಂಟ್ ಸುನಿ

ಸುನೀಲ್ ಅಲಿಯಾಸ್ ಸೈಲೆಂಟ್ ಸುನಿ

11. ಸುನೀಲ್ ಅಲಿಯಾಸ್ ಸೈಲೆಂಟ್ ಸುನಿ

ರೌಡಿ ಪಟ್ಟಿ ಆಸಾಮಿಯಾಗಿದ್ದು, ಸ್ಫೋಟಕ ಕಾಯ್ದೆ, ಹಣಕ್ಕಾಗಿ ಅಪಹರಣ, ಹಲ್ಲೆ, ಸುಲಿಗೆ, ದೊಂಬಿ, ಗಲಭೆ, ಮೋಸ, ದರೊಡೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಸೇರಿದಂತೆ ಹಲವು ಘೋರ ಅಪರಾಧ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದು, ಎಲ್ಲವೂ ವಿವಿಧ ಹಂತದಲ್ಲಿ ಇರುತ್ತವೆ.

ಅಮಾನುಲ್ಲಾ ಷರೀಫ್ ಅಲಿಯಾಸ್ ಬಚ್ಚನ್

ಅಮಾನುಲ್ಲಾ ಷರೀಫ್ ಅಲಿಯಾಸ್ ಬಚ್ಚನ್

9 ಅಮಾನುಲ್ಲಾ ಷರೀಫ್ ಅಲಿಯಾಸ್ ಬಚ್ಚನ್- ರೌಡಿ ಪಟ್ಟಿ ಆಸಾಮಿಯಾಗಿದ್ದು, ಸ್ಫೋಟಕ ಕಾಯ್ದೆ, ಹಣಕ್ಕಾಗಿ ಅಪಹರಣ, ಹಲ್ಲೆ, ಸುಲಿಗೆ, ದೊಂಬಿ, ಗಲಭೆ, ಮೋಸ, ದರೊಡೆ ಯತ್ನ ಸೇರಿದಂತೆ ಹಲವು ಘೋರ ಅಪರಾಧ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದು, ಎಲ್ಲವೂ ವಿವಿಧ ಹಂತದಲ್ಲಿ ಇರುತ್ತವೆ. ಶ್ರೀಧರ್ ನಿಕಟವರ್ತಿ. ಸೈಯದ್ ಅಮಾನ್ ಅಲಿಯಾಸ್ ಅಹಮದ್ದುಲ್ಲಾ ಷರೀಫ್ ಅಲಿಯಾಸ್ ಬಚ್ಚನ್ ಬಿನ್ ಮಹಮದ್ ಅಮೀರ್.
ವಯಸ್ಸು : 54 ವರ್ಷ
ವಿಳಾಸ: 324, 1ನೇ ಮುಖ್ಯರಸ್ತೆ, 46ನೇ ಅಡ್ಡರಸ್ತೆ, ಕುಮಾರಸ್ವಾಮಿ ಲೇ ಔಟ್.(ಚಿತ್ರಕೃಪೆ: ಬಿಟಿವಿ tv grab)

ಇತರೆ ಆರೋಪಿಗಳು

ಇತರೆ ಆರೋಪಿಗಳು

ಆರೋಪಿ 2: ಬ್ರಿಜ್ ಭೂಷಣ್ ಹುಸೇನ್ ಪಾಂಡೆ ಬಿನ್ ಸಚ್ಚಿದಾನಂದ್ ಪಾಂಡೆ
ವಯಸ್ಸು : 38
ಉತ್ತರಪ್ರದೇಶದ ಘೋರಖ್ ಪುರ್ ಜಿಲ್ಲೆಯ ಮಹಮದ್ ಪುರ ನಿವಾಸಿ

ಆರೋಪಿ 3
ರಾಮ್ ಕುಮಾರ್
ರಾಮ್ ಕುಮಾರ್ ರಾಯ್ ಬಿನ್ ಶ್ರೀರಾಮ್ ರಾಯ್
37 ವರ್ಷ

ಉತ್ತರಪ್ರದೇಶದ ಅಜಂಗಾಡ್ ಜಿಲ್ಲೆ ರಾವಣಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖುತಬ್ ಪುರ ಗ್ರಾಮ.

ಆರೋಪಿ 4
ಸಾಬೀರ್ ಅಲಿ ಬಿನ್ ಭಗೇಲು
51 ವರ್ಷ
ಉತ್ತರಪ್ರದೇಶದ ಸಿಕಂದರ್ ಪುರ ಜಿಲ್ಲೆ ಇಸ್ಮಾಯಿಲ್ ಪುರ್ ಗ್ರಾಮದ ನಿವಾಸಿ

ಪ್ರಕರಣದ ಉಳಿದ ಆರೋಪಿಗಳು

ಪ್ರಕರಣದ ಉಳಿದ ಆರೋಪಿಗಳು

5ನೇ ಆರೋಪಿ
ತನ್ವೀರ್ ಬಿನ್ ಜಬ್ಬಾರ್
34 ವರ್ಷ
ಬೆಂಗಳೂರಿನ ಬನಶಂಕರಿ ಎರಡನೇ ಹಂತ ಕಾವೇರಿ ನಗರ್ ನಿವಾಸಿ

6 ಅರುಣ್ ಕುಮಾರ್ ಬಿನ್ ಲಕ್ಷ್ಮಣ್
24 ವರ್ಷ
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂತೇಕೊಡಹಳ್ಳಿ ನಿವಾಸಿ.

7 ವರುಣ್ ಕುಮಾರ್ ಬಿನ್ ಅಶೋಕ್
20 ವರ್ಷ
ಕುಮಾರಸ್ವಾಮಿ ಲೇ ಔಟ್ ನಿವಾಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Why did Bengaluru Police raid on Journalist Agni Sreedhar house? What are the things seized? Who are all arrested in connection with Kadabagere Srinivas Shoot out case? Know more details here
Please Wait while comments are loading...