ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಬರಲಿದೆ ಬೈಕ್‌ ಆ್ಯಂಬುಲೆನ್ಸ್‌

|
Google Oneindia Kannada News

ಬೆಂಗಳೂರು, ಜ.20 : ಬೆಂಗಳೂರಿನಲ್ಲಿ ತುರ್ತು ಚಿಕಿತ್ಸೆಗೆ ರೋಗಿಯನ್ನು ಕರೆದೊಯ್ಯುವಾಗ ಆ್ಯಂಬುಲೆನ್ಸ್‌ಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಕೊಳ್ಳುತ್ತವೆ. ಇದನ್ನು ತಪ್ಪಿಸಲು ಸರ್ಕಾರ ಚಿಂತನೆ ನಡೆಸಿದ್ದು, ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೈಕ್‌ ಆ್ಯಂಬುಲೆನ್ಸ್‌ ಪರಿಚಯಿಸಲು ಚಿಂತನೆ ನಡೆಸಿದೆ. ಬೈಕ್‌ ಆ್ಯಂಬುಲೆನ್ಸ್‌ ಪರಿಕಲ್ಪನೆ ತಯಾರಿಸಲಾಗಿದ್ದು, ಶೀಘ್ರದಲ್ಲೇ ಇದನ್ನು ರಸ್ತೆಗಿಳಿಸಲು ಸಜ್ಜಾಗಿದೆ.

ಬೆಂಗಳೂರು ಮಹಾನಗರದಲ್ಲಿ ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿವೆ. ಆದ್ದರಿಂದ ಆರೋಗ್ಯ ಇಲಾಖೆ ಸಂಚಾರದಟ್ಟಣೆಯಲ್ಲಿ ಸುಲಭವಾಗಿ ಸಂಚರಿಸಲು ಬೈಕ್‌ ಆ್ಯಂಬುಲೆನ್ಸ್‌ ಎಂಬ ಪರಿಕಲ್ಪನೆ ತಯಾರಿಸಿದೆ. ಶೀಘ್ರವೇ ಇವುಗಳು ತಮ್ಮ ಓಡಾಟ ಆರಂಭಿಸಲಿವೆ.

ambulance

ಬೈಕ್ ಆ್ಯಂಬುಲೆನ್ಸ್‌ ಹೇಗಿರಬೇಕು ಎಂಬ ಮಾದರಿಯನ್ನು ಆರೋಗ್ಯ ಇಲಾಖೆ ತಯಾರಿಸಿದೆ. ಬಜಾಜ್‌ ಕಂಪನಿ ತಯಾರಿಸಿರುವ ಬೈಕ್‌ ಆ್ಯಂಬುಲೆನ್ಸ್‌ನ ಮಾದರಿಯನ್ನು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್‌ ಭಾನುವಾರ ಪ್ರದರ್ಶಿಸಿದರು. ಇದನ್ನು ಪ್ರಾಯೋಗಿಕವಾಗಿ ಶೀಘ್ರದಲ್ಲೇ ರಸ್ತೆಗಿಳಿಸಲು ಇಲಾಖೆ ಸಿದ್ಧತೆ ಆರಂಭಿಸಿದೆ. [ಬೆಂಗಳೂರಿಗೆ ಬೈಕ್ ಆ್ಯಂಬುಲೆನ್ಸ್‌]

ಬೈಕ್‌ ಆ್ಯಂಬುಲೆನ್ಸ್‌ ಕುರಿತು ಮಾಹಿತಿ ನೀಡಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್‌ ಗೋಪಾಲ್‌, ಬೆಂಗಳೂರು ನಗರಕ್ಕಾಗಿಯೇ ವಿಶೇಷವಾಗಿ ಬೈಕ್‌ ಆ್ಯಂಬುಲೆನ್ಸ್‌ ಪರಿಚಯಿಸಲು ಉದ್ದೇಶಿಸಲಾಗಿದೆ. ಸದ್ಯ ಇದರ ಪರಿಕಲ್ಪನೆಯನ್ನು ಪ್ರದರ್ಶಿಸಲಾಗಿದೆ. ಈ ಬಗ್ಗೆ ವಿಸ್ತ್ರತವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಳ್ಳುವ ವ್ಯಕ್ತಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಬೈಕ್‌ ಆ್ಯಂಬುಲೆನ್ಸ್‌ ಬಿಡುಗಡೆ ಮಾಡಬೇಕು ಎಂಬ ಆಲೋಚನೆ ಇದೆ. ಬೈಕ್‌ ಆ್ಯಂಬುಲೆನ್ಸ್‌ನ ಚಾಲಕನಿಗೆ ತರಬೇತಿ ನೀಡಲಾಗುವುದು. ಪ್ರಾಥಮಿಕ ಚಿಕಿತ್ಸೆ ನೀಡುವ ಎಲ್ಲಾ ಸೌಲಭ್ಯಗಳು ಬೈಕ್ ನಲ್ಲಿ ಇರಲಿವೆ. ನಗರ ಆರೋಗ್ಯ ಮಿಷನ್‌ನಡಿಯಲ್ಲಿ ಇದನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು.

English summary
A model of two-wheeler ambulance that the government is contemplating introducing in Bangalore was unveiled on Sunday, Jan 19 by the Health Minister U.T. Khader. The two-wheeler ambulance has a first-aid kit using which the rider of the vehicle would provided needed medical care to the patient before shifted him/her to a four-wheeler ambulance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X