ಬೆಂಗಳೂರಲ್ಲಿ 24x7 ರಕ್ಷಣೆ ಸ್ಮಾರ್ಟ್ ಸಿಟಿ ಯೋಜನೆ
ಬೆಂಗಳೂರು, ಫೆ. 16: ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಹಾಗೂ ಗುಪ್ತದಳದ ವರದಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಿಂದೆಂದೂ ಕಾಣದ ರಕ್ಷಣಾ ವ್ಯವಸ್ಥೆ ಏರ್ಪಡಿಸಲು ನಗರ ಪೊಲೀಸರು ಸಜ್ಜಾಗಿದೆ.
ಮೊದಲ ಹಂತದಲ್ಲಿ 3,000 ಸಿಸಿಟಿವಿಯನ್ನು ಅಳವಡಿಸಲಾಗುವುದು. ಸುಮಾರು 300 ಸಿಬ್ಬಂದಿ ಪ್ರಮುಖ ಸ್ಥಳಗಳಲ್ಲಿ ದಿನದ 24 ಗಂಟೆ ಗಸ್ತು ತಿರುಗುತ್ತಿರುತ್ತಾರೆ. ರಕ್ಷಣಾ ಪಡೆಯ ಸಂಪೂರ್ಣ ಗಮನ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (Central Business District ಅಥವಾ CBD) ಮೇಲೆ ಇರಲಿದೆ. [ಬೆಂಗಳೂರು, ಕೋಲ್ಕತ್ತಾ ಉಗ್ರರ ತಾಣ]
ಸಿಬಿಡಿ ಅಡಿಯಲ್ಲಿ ವಿಧಾನಸೌಧ ಹಾಗೂ ಸುತ್ತಲಿನ ಮೂರು ಕಿ.ಮೀ. ದೂರದವರೆಗಿನ ಎಲ್ಲ ಕಟ್ಟಡಗಳು ಬರಲಿವೆ.

ಏನಿದು ಸಿಬಿಡಿ ಯೋಜನೆ? : ಸಿಬಿಡಿ ಅಥವಾ ಸ್ಮಾರ್ಟ್ ಸಿಟಿ ಯೋಜನೆಯು ಶೀಘ್ರ ಜಾರಿಗೆ ಬರಲಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ತಿಳಿಸಿದ್ದಾರೆ. [ಖಾಸಗಿ ಭದ್ರತಾ ಸಿಬ್ಬಂದಿಗೂ ತರಬೇತಿ]
ಸಂಗ್ರಹಣಾ ಪ್ರಕ್ರಿಯೆ ಜಾರಿಯಲ್ಲಿದೆ. ಈ ಯೋಜನೆಗಾಗಿ 'ಕರ್ನಾಟಕ ರಾಜ್ಯ ಕೈಗಾರಿಕಾ ರಕ್ಷಣಾ ಪಡೆ'ಯ 300 ಸಿಬ್ಬಂದಿಯನ್ನು ನೇಮಿಸಲಾಗುವುದು. ಇವರೆಲ್ಲರೂ ವಿಧಾನಸೌಧದ ಮೂರು ಕಿ.ಮೀ. ವ್ಯಾಪ್ತಿಯೊಳಗೆ ಕರ್ತವ್ಯ ನಿರ್ವಹಿಸಲಿದ್ದಾರೆ.
ಯೋಜನೆಯಿಂದೇನು ಪ್ರಯೋಜನ? : ಯಾವುದೇ ಘಟನೆ ನಡೆದ ತಕ್ಷಣ ಪ್ರತಿಕ್ರಿಯೆ ನೀಡುವುದು ಈ ಯೋಜನೆಯ ಹಿಂದಿನ ಉದ್ದೇಶ. ಈ ವಿಶೇಷ ಪಡೆಯು ಪ್ರತಿ ಘಟನೆಗೆ ತಕ್ಷಣ ಪ್ರತಿಕ್ರಿಯೆ ನೀಡಲಿದೆ. [ಶಿಕ್ಷಕರಿಗೆ ಪೆನ್ ಜೊತೆ ಗನ್]
ಸಾಮಾನ್ಯವಾಗಿ ಯಾವುದೇ ಘಟನೆ ನಡೆದ ನಂತರ ಪೊಲೀಸರು ಸ್ಥಳ ತಲುಪಲು ಸಮಯ ತೆಗೆದುಕೊಳ್ಳುತ್ತಾರೆ. ವಿಶೇಷ ಪಡೆಯು ನಗರದ ಮುಖ್ಯ ಸ್ಥಳಗಳಲ್ಲಿ ಗಸ್ತು ತಿರುಗುವ ಕಾರಣ ಶೀಘ್ರ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೊಂದಿರುತ್ತಾರೆ.
ಯೋಜನೆಯು ಇನ್ನೂ ಮೊದಲ ಹಂತದಲ್ಲಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಮಾತ್ರ ಜಾರಿಗೆ ತರಲಾಗುವುದು. ಮುಂದಿನ ದಿನಗಳಲ್ಲಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ನಿರೀಕ್ಷೆಯಿದೆ.












Click it and Unblock the Notifications