ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಮಾದರಿ ಪಿಸ್ತೂಲ್ ಬಳಸಿ ಕಲಬುರ್ಗಿ, ಗೌರಿ ಹತ್ಯೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆ. 06: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲು ಬಳಸಲಾದ ಪಿಸ್ತೂಲ್ ಹಾಗೂ ಕಲಬುರ್ಗಿ ಅವರ ಹತ್ಯೆಗೆ ಬಳಸಲಾದ ಪಿಸ್ತೂಲ್ ಎರಡು ಒಂದೇ ಮಾದರಿಯದ್ದು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. 7.65 ಎಂಎಂ ಪಿಸ್ತೂಲ್ ಬಳಕೆ ಬಗ್ಗೆ ಪೊಲೀಸರಿಗೆ ಇದ್ದ ಶಂಕೆ ಈಗ ನಿಜವಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳುಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳು

ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ,ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಗೆ ಒಂದೇ ರೀತಿಯ ಪಿಸ್ತೂಲ್ ಬಳಕೆ ಮಾಡಲಾಗಿದೆ. ಈ ಬಗ್ಗೆ ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ ಪಡೆಯಲಾಗಿದೆ.

Similar weapon used in murder of Gauri Lankesh, Kalburgi similar: Ballistics

ಈ ಪ್ರಕರಣದಲ್ಲಿ ಸದ್ಯಕ್ಕೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿರುವ ಬೆಂಗಳೂರು ಪೊಲೀಸರು, ಕಲಬುರ್ಗಿ ಅವರ ಮನೆ ಮುಂದಿನ ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದ ದುಷ್ಕರ್ಮಿಯ ಹೋಲಿಕೆ ಇರುವುದನ್ನು ಗುರುತಿಸಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಅವರ ಮನೆ ಬಳಿಯ ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದಿರುವ ವ್ಯಕ್ತಿಯ ಚಹರೆ ಪತ್ತೆ ಕಾರ್ಯ ಮುಂದುವರೆದಿದೆ.

ಇದಲ್ಲದೆ, ಗೌರಿ ಅವರ ಮೊಬೈಲ್ ಫೋನ್, ಬಳಸುತ್ತಿದ್ದ ಲ್ಯಾಪ್ ಟಾಪ್ ನಲ್ಲಿ ಮಾಹಿತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ನಡೆದ ದಿನ ಹಾಗೂ ಕಳೆದ ಕೆಲ ದಿನಗಳಿಂದ ಅವರು ಬೆಂಗಳೂರಿನಲ್ಲಿ ಓಡಾಡಿದ ಜಾಗಗಳಲ್ಲಿ ಸಿಗುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತದೆ.

ಕಲಬುರ್ಗಿ ಹತ್ಯೆಯಾಗಿ 2ವರ್ಷ, ಹಂತಕರು ಯಾರು?ಕಲಬುರ್ಗಿ ಹತ್ಯೆಯಾಗಿ 2ವರ್ಷ, ಹಂತಕರು ಯಾರು?

2013ರ ಆಗಸ್ಟ್ 20ರಂದು ಪುಣೆಯಲ್ಲಿ ಮೂಢನಂಬಿಕೆಗಳ ವಿರುದ್ಧದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ನರೇಂದ್ರ ದಾಬೋಲ್ಕರ್ ಹತ್ಯೆ ನೆಡೆದಿತ್ತು. 2015ರ ಫೆಬ್ರವರಿ 17ರಂದು ಸಿಪಿಐ ಹಿರಿಯ ನಾಯಕ ಗೋವಿಂದ ಪನ್ಸಾರೆ ಹತ್ಯೆ ಮುಂಬೈನಲ್ಲಿ ನಡೆದಿತ್ತು

2015ರ ಆಗಸ್ಟ್ 30ರಂದು ಧಾರವಾಡ ಕಲ್ಯಾಣ ನಗರದ ನಿವಾದಲ್ಲಿ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಎಲ್ಲರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, 7.65 ಎಂಎಂ ಪಿಸ್ತೂಲ್ ಬಳಕೆ ಮಾಡಲಾಗಿದೆ

English summary
The preliminary investigations being conducted into the murder of journalist Gauri Lankesh suggests that it had the same modus operandi was found in the M M Kalburgi case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X