ರೆಡ್ಡಿ ಡೈಲಾಗ್ ರಿಪೀಟ್, 'ಸತ್ಯಮೇವ ಜಯತೆ' ಎಂದ ಯಡಿಯೂರಪ್ಪ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 26: ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧದ ಕಿಕ್ ಬ್ಯಾಕ್ ಪ್ರಕರಣದ ಆರೋಪದಿಂದ ದೋಷಮುಕ್ತರಾಗಿದ್ದಾರೆ. ಸಿಟಿ ಸಿವಿಲ್ ಕೋರ್ಟ್ ಆವರಣದಿಂದ ಹೊರ ಹೋಗುವಾಗ ಕಾರಿನ ಬಳಿ ನಿಂತು. ತಕ್ಷಣದ ಪ್ರತಿಕ್ರಿಯೆ ನೀಡಿ, 'ಸತ್ಯಮೇವ ಜಯತೇ' ಎಂದಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ವೇಳೆ 'ಸತ್ಯಮೇವ ಜಯತೇ' ಎಂದು ಹೇಳಿದ್ದರು. ಈಗ ಯಡಿಯೂರಪ್ಪ ಅವರು ಕೂಡಾ ಇದೇ ಮಾತನ್ನು ಹೇಳಿದರು. ಇದೊಂದು ರಾಜಕೀಯ ಪಿತೂರಿ ಕೇಸ್, ದ್ವೇಷದಿಂದ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಆರೋಪ ಹೊರೆಸಲಾಗಿತ್ತು. ಕೋರ್ಟ್ ತೀರ್ಪು ತೃಪ್ತಿ ತಂದಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.[LIVE: ಕಿಕ್ ಬ್ಯಾಕ್ ಕೇಸ್, ಯಡಿಯೂರಪ್ಪ ದೋಷಮುಕ್ತ]

ಬಿಎಸ್ ಯಡಿಯೂರಪ್ಪ ಹಾಗೂ ಇತರೆ ಆರೋಪಿಗಳ ವಿರುದ್ಧ ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿರುವ ಆರೋಪಗಳನ್ನು ಸಾಬೀತು ಪಡಿಸಲು ಸೂಕ್ತ ಸಾಕ್ಷಿಗಳಿಲ್ಲದ ಕಾರಣ, ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂದು ನ್ಯಾ. ಧರ್ಮಗೌಡರ್ ಅವರು ತೀರ್ಪು ಪ್ರಕಟಿಸಿದರು.[ಯಡಿಯೂರಪ್ಪಗೆ ಮತ್ತೆ 5 ಡಿನೋಟಿಫಿಕೇಷನ್ ಕಂಟಕ]

ಯಡಿಯೂರಪ್ಪ ಹಾಗೂ ಅವರ ಮಕ್ಕಳ ಪ್ರೇರಣಾ ಟ್ರಸ್ಟ್ ತನ್ನ ಅದಾಯವನ್ನು ಬಹುಪಾಲು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿದೆ.ಟ್ರಸ್ಟಿಗೆ ಯಾವುದೇ ಲಂಚದ ಮೊತ್ತ ಬಂದಿಲ್ಲ ಎಂದು ಯಡಿಯೂರಪ್ಪ ಅವರ ಪರ ವಕೀಲ ಸಿವಿ ನಾಗೇಶ್ ರಿಂದ ವಾದಿಸಿದರು.

ಲಕ್ಷಾಂತರ ಕಾರ್ಯಕರ್ತರಿಗೆ ಸಂತಸವಾಗಿದೆ

ಲಕ್ಷಾಂತರ ಕಾರ್ಯಕರ್ತರಿಗೆ ಸಂತಸವಾಗಿದೆ

ಇದೊಂದು ರಾಜಕೀಯ ಪಿತೂರಿ ಕೇಸ್, ದ್ವೇಷದಿಂದ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಆರೋಪ ಹೊರೆಸಲಾಗಿತ್ತು. ಕೋರ್ಟ್ ತೀರ್ಪು ತೃಪ್ತಿ ತಂದಿದೆ. ನನ್ನ ಕಷ್ಟಕಾಲದಲ್ಲಿ ಜತೆಗಿದ್ದ ನನ್ನ ಬೆಂಬಲಿಗರು, ಜತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಕಳೆದ ಐದು ವರ್ಷಗಳು ಏನಾಯಿತು ಎಂಬುದು ನಿಮಗೆ ತಿಳಿದಿದೆ. ಮುಂದಿನ ಕೆಲಸ ಮಾಡಲು ಆತ್ಮವಿಶ್ವಾಸ ಸಿಕ್ಕಿದೆ. ನನ್ನ ಮೇಲಿದ್ದ ಆರೋಪ ದೂರಾಗಿ ಲಕ್ಷಾಂತರ ಕಾರ್ಯಕರ್ತರಿಗೆ ಸಂತಸವಾಗಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವತ್ತ ನಾವು ಶ್ರಮಿಸಬೇಕಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.[2012: ಸತ್ಯಮೇವ ಜಯತೆ ಎಂದ ಗಾಲಿ ಜನಾರ್ದನ ರೆಡ್ಡಿ]

ಏನಿದು ಕಿಕ್ ಬ್ಯಾಕ್ ಪ್ರಕರಣ

ಏನಿದು ಕಿಕ್ ಬ್ಯಾಕ್ ಪ್ರಕರಣ

ಜಿಂದಾಲ್ ಸ್ಟೀಲ್ ವರ್ಕ್ಸ್, ಸೌತ್ ವೆಸ್ಟ್ ಮೈನಿಂಗ್ ಕಂಪನಿಗಳಿಗೆ ಗಣಿಗಾರಿಕೆ ಗುತ್ತಿಗೆ ನೀಡಲು ಯಡಿಯೂರಪ್ಪನವರು ಪ್ರೇರಣಾ ಟ್ರಸ್ಟ್, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಮತ್ತು ಭಗತ್ ಹೋಂ ಕಂಪನಿಗಳ ಹೆಸರಿನಲ್ಲಿ 20 ಕೋಟಿ ರು. ಲಂಚ ಪಡೆದಿದ್ದರೆಂದು ಆರೋಪಿಸಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ತಮ್ಮ ಅಕ್ರಮ ಗಣಿಗಾರಿಕೆಯ ವರದಿಯಲ್ಲಿಯೂ ಪ್ರಸ್ತಾಪಿಸಿದ್ದರು.[ಗಾಲಿ ರೆಡ್ಡಿ ಪತ್ರ: ಕುರುಡರಿಗೆ ದೃಷ್ಟಿ ಬರಲಿ, ಸತ್ಯಮೇವ ಜಯತೆ!]

ಸಿಬಿಐ ಆರೋಪ ಪಟ್ಟಿಯಲ್ಲಿ ಏನು ಉಲ್ಲೇಖ

ಸಿಬಿಐ ಆರೋಪ ಪಟ್ಟಿಯಲ್ಲಿ ಏನು ಉಲ್ಲೇಖ

ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಜತೆಗಿನ ಜಂಟಿ ಪಾಲುದಾರಿಕೆ ಗಣಿಗಾರಿಕೆ ವ್ಯವಹಾರದಲ್ಲಿ ಜಿಂದಾಲ್ ಸಮೂಹಕ್ಕೆ ಅನುಕೂಲ ಮಾಡಿಕೊಟ್ಟಿರುವುದಕ್ಕಾಗಿಯೇ ಜಿಂದಾಲ್ ಕಂಪನಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ 40 ಕೋಟಿ ರೂಪಾಯಿ ಲಂಚ ನೀಡಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಸಿಬಿಐನ ಬೆಂಗಳೂರು ಭ್ರಷ್ಟಾಚಾರ ನಿಯಂತ್ರಣ ಘಟಕದ ಹೆಚ್ಚುವರಿ ಎಸ್‌ಪಿ ಬಿಸ್ವಜಿತ್ ದಾಸ್ ಅಕ್ಟೋಬರ್ 16, 2012ರಂದು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರು

ಒಟ್ಟು 13 ಜನ ಆರೋಪಿಗಳು

ಒಟ್ಟು 13 ಜನ ಆರೋಪಿಗಳು

ಬಿಎಸ್ ಯಡಿಯೂರಪ್ಪ, ಅವರ ಇಬ್ಬರು ಮಕ್ಕಳಾದ ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಜಿಂದಾಲ್ ಸ್ಟೀಲ್ ವರ್ಕ್ಸ್ ಮತ್ತು ಸೌತ್ ವೆಸ್ಟ್ ಮೈನಿಂಗ್ ಕಂಪನಿ ನಿರ್ದೇಶಕರು ಸೇರಿ ಒಟ್ಟು 13 ಜನ ಆರೋಪಿಗಳು.

ಬಿಎಸ್ ಯಡಿಯೂರಪ್ಪ ಅವರಿಗೆ ಗಣಿ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆದ ಪ್ರಕರಣದಲ್ಲಿ ಹೈಕೋರ್ಟ್ ಡಿಸೆಂಬರ್ 10, 2012ರಲ್ಲಿ ಜಾಮೀನು ನೀಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Satyameva Jayate is what B S Yeddyurappa had to say after being acquitted in the Rs 40 crore bribery case. Justice is done, I stand vindicated. Thanks to all my well wishers, friends and supporters who stood by me in these tough times, Yeddyurappa the former Karnataka Chief Minister and state BJP president had to say in the aftermath of the verdict.
Please Wait while comments are loading...