ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಡಿಸೆಂಬರ್ 20 ರಂದು ಕಾರ್ ಫ್ರೀ ಡೇ ಇಲ್ಲ

|
Google Oneindia Kannada News

ಬೆಂಗಳೂರು, ಡಿಸೆಂಬರ್, 10 : ಬೆಂಗಳೂರಿನಲ್ಲಿ ಡಿಸೆಂಬರ್ 20 ರಂದು 'ಕಾರ್ ಫ್ರೀ ಡೇ' ಆಚರಣೆ ಇಲ್ಲ. ಈ ಬಗ್ಗೆ ಯಾವುದೇ ವದಂತಿಗೆ ಒಳಗಾಗಬಾರದು ಎಂದು ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಎಂಎ ಸಲೀಂ ಸ್ಪಷ್ಟಪಡಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಡಿಸೆಂಬರ್ 20 ರಂದು ಕಾರ್ ಫ್ರೀ ಡೇ ಹಮ್ಮಿಕೊಳ್ಳಲಾಗಿದೆ ಎಂಬ ವರದಿಗಳು ಬಿತ್ತರವಾಗಿದ್ದವು. ಆದರೆ ಸಲೀಂ ಈ ಬಗ್ಗೆ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.[ಪಾದಚಾರಿಗಳಿಗೆ ನರಕ ದರ್ಶನ ಮಾಡಿಸುವ ರೆಸಿಡೆನ್ಸಿ ರಸ್ತೆ]

Relax! No Car Free Day in Bengaluru on Dec 20

ಒನ್ ಇಂಡಿಯಾದೊಂದಿಗೆ ಮಾತನಾಡಿದ ಸಲೀಂ, ಡಿಸೆಂಬರ್ ನಲ್ಲಿ ಕಾರ್ ಫ್ರೀ ಡೇ ಬಗ್ಗೆ ಯಾವುದೇ ಚಿಂತನೆಯಿಲ್ಲ. ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ಹಮ್ಮಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು. ಮಾಧ್ಯಮವೊಂದು ದೆಹಲಿಯ ಗುರ್ ಗಾಂವ್ ನಲ್ಲಿ ಹಮ್ಮಿಕೊಂಡಂತೆ ಬೆಂಗಳೂರಲ್ಲಿ ಕಾರ್ ಫ್ರೀ ಡೇ ಹಮ್ಮಿಕೊಳ್ಳಲಾಗುತ್ತಿದೆ ಎಂದು ವರದಿ ಮಾಡಿತ್ತು.[ಮಾರತ್ ಹಳ್ಳಿ ಟು ವೈಟ್ ಫೀಲ್ಡ್ = 7 ಕಿಮೀ = 2 ಗಂಟೆ!?]

ನಮ್ಮ ಮೆಟ್ರೋ(ಬಿಎಂಆರ್ ಸಿಎಲ್) ಮತ್ತು ಪ್ರವಾಸೋದ್ಯಮ ಇಲಾಖೆ ಕಾರ್ ಫ್ರೀ ಡೇ ಮುಂದಾಳತ್ವ ವಹಿಸಿಕೊಳ್ಳಲಿವೆ ಎಂದು ತಿಳಿಸಿದರು. ಕಾರ್ ಫ್ರೀ ಡೇ ಬಗ್ಗೆ ಇದ್ದ ಗೊಂದಲಕ್ಕೆ ಸಲೀಂ ತೆರೆ ಎಳೆದಿದ್ದು ಡಿಸೆಂಬರ್ 20 ರಂದು ಅಂಥ ಯಾವ ಆಚರಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
Bengaluru's Additional Commissioner of Police, MA Saleem, confirmed, on Wednesday, that there is no such event of 'Car Free Day' planned on December 20. Speculations were rife that the 'city of gardens' will observe its maiden 'Car Free Day' on Dec 20th on the famous MG Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X