Get Updates
Get notified of breaking news, exclusive insights, and must-see stories!

ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡ ರಾಹುಲ್!

ಬೆಂಗಳೂರು, ನ.25: ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜೊತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಡೆಸಿದ ಸಂವಾದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೊಳಪಡುತ್ತಿದೆ. ಎಂದಿನಂತೆ 'ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡ', 'ಬಾಯಿ ಬಿಟ್ಟರೆ ಬಣ್ಣಗೇಡು' ಎಂಬ ಪರಿಸ್ಥಿತಿಯಲ್ಲಿ ರಾಹುಲ್ ನಿಂತಿದ್ದಾರೆ.

ಮೋದಿ ಅವರು ಏಕವ್ಯಕ್ತಿ ಸರ್ಕಾರ ನಡೆಸುತ್ತಿದ್ದಾರೆ. ಒಬ್ಬ ವ್ಯಕ್ತಿಯಿಂದ ಭಾರತದ ಬದಲಾವಣೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುತ್ತಿದೆ. ಸೂಟು ಬೂಟಿನ ಸರ್ಕಾರ ಪತನವಾಗಲಿದೆ ಎಂದು ರಾಹುಲ್ ಅವರು ಸಂವಾದದಲ್ಲಿ ಹೇಳಿದರು.[ಕಾರ್ಮೆಲ್ ಹುಡ್ಗಿಯರ ಸಂವಾದದಲ್ಲಿ ರಾಹುಲ್ ಕನ್ ಫೂಸ್ಡ್]

ಸ್ವಚ್ಛ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೀವೇನು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಕ್ಲೀನ್ ಇಂಡಿಯಾ ಅಭಿಯಾನ ಯಶಸ್ವಿಯಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ 'ಯೆಸ್' ಎಂದು ಉತ್ತರ ಬಂದಾಗ ರಾಹುಲ್ ತಬ್ಬಿಬ್ಬಾದರು. ನಂತರ ಮೇಕ್ ಇನ್ ಇಂಡಿಯಾ ಕೂಡಾ ಸರಿಯಾಗಿ ಯಶಸ್ವಿಯಾಗಿಲ್ಲ ಎಂದು ಹೇಳಿದ ರಾಹುಲ್ ಅವರು ಮತ್ತೆ ಪ್ರಶ್ನಿಸಲು ಹೋಗಲಿಲ್ಲ.

ಅದರೆ, ರಾಹುಲ್ ಗಾಂಧಿ ತಬ್ಬಿಬ್ಬಾಗಿದ್ದನ್ನು ಮೈಕ್ರೋಬ್ಲಾಗಿಂಗ್ ತಾಣಗಳಲ್ಲಿ ಸಕತ್ತಾಗಿ ಕಾಲೆಳೆಯಾಗಿದೆ. ಟ್ವೀಟ್ ಗಳ ಸಂಗ್ರಹ ಇಲ್ಲಿದೆ.

ಸ್ವಚ್ಛ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಬಗ್ಗೆ ಪ್ರಶ್ನೆ

ಸ್ವಚ್ಛ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಬಗ್ಗೆ ಪ್ರಶ್ನೆ

ಕ್ಲೀನ್ ಇಂಡಿಯಾ ಅಭಿಯಾನ ಯಶಸ್ವಿಯಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ 'ಯೆಸ್' ಎಂದು ಉತ್ತರ ಬಂದಾಗ ರಾಹುಲ್ ತಬ್ಬಿಬ್ಬಾದರು. ನಂತರ ಮೇಕ್ ಇನ್ ಇಂಡಿಯಾ ಕೂಡಾ ಸರಿಯಾಗಿ ಯಶಸ್ವಿಯಾಗಿಲ್ಲ ಎಂದು ಹೇಳಿದ ರಾಹುಲ್ ಅವರು ಮತ್ತೆ ಪ್ರಶ್ನಿಸಲು ಹೋಗಲಿಲ್ಲ.

ವಿದ್ಯಾರ್ಥಿನಿಯರ ಮುಂದೆ ತಬ್ಬಿಬ್ಬಾದ ರಾಹುಲ್

ಮಿ. ಯೂಥ್ ಐಕಾನ್ ನೀವು ಇನ್ಮುಂದೆ ಬೆಂಗಳೂರಿನ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡಬೇಡಿ

ನಿಮ್ಮ ಡಿಂಪಲ್ ನೋಡಿ ಮೋಸ ಹೋಗಲ್ಲ

ಬೆಂಗಳೂರಿಗರು ನಿಮ್ಮ ಗುಳಿಕೆನ್ನೆ ನೋಡಿ ಮೋಸ ಹೋಗಲ್ಲ. ಇಲ್ಲೇ ನಮ್ಮ ರಸ್ತೆಯಲ್ಲಿ ಸಾಕಷ್ಟೂ ಕುಳಿಗಳಿವೆ.

ಮೋದಿಯಿಂದ ರಾಗಾ ಪಾಠ ಕಲಿಯಬೇಕಿದೆ

ಮೋದಿಯಿಂದ ರಾಗಾ ಪಾಠ ಕಲಿಯಬೇಕಿದೆ, ಪೂರ್ವ ಲಿಖಿತ ಭಾಷಣ, ಅಥವಾ ರಿಹರ್ಸಲ್ ಅಲ್ಲದಿದ್ದರೆ ಈ ರೀತಿ ಪ್ರಶ್ನೆ ಮಾಡಿ ಅವಲಕ್ಷಣ ಮಾಡಿಕೊಳ್ಳಬಾರದು.

ಲಕ್ಷಾಂತರ ಮಂದಿ 2014ರಲ್ಲೇ ನಿಮಗೆ ದಾರಿ ತೋರಿಸಿದ್ರು

ಲಕ್ಷಾಂತರ ಮಂದಿ 2014ರಲ್ಲೇ ನಿಮಗೆ ದಾರಿ ತೋರಿಸಿದ್ರು, ಇಂದು ಬೆಂಗಳೂರಿನ ವಿದ್ಯಾರ್ಥಿನಿಯರು ದೊಡ್ಡ ದನಿಯಲ್ಲಿ ಹೇಳಿದ್ದಾರೆ ಅಷ್ಟೇ.

ನಮ್ಮ ಬೆಂಗಳೂರಿಗರು ತುಂಬಾ ಸ್ಮಾರ್ಟ್

ನಮ್ಮ ಬೆಂಗಳೂರಿಗರು ತುಂಬಾ ಸ್ಮಾರ್ಟ್ ನಮ್ಮನ್ನು ಫೂಲ್ ಮಾಡಲು ಸಾಧ್ಯವಿಲ್ಲ.

ಸಂವಾದ ಮುಗಿದ ಮೇಲೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಸಂವಾದ ಮುಗಿದ ಮೇಲೆ ರಾಹುಲ್ ಗಾಂಧಿ ಪ್ರತಿಕ್ರಿಯೆ, ಸ್ಪಷ್ಟನೆ ಬಗ್ಗೆ ನೀಡಿದ್ದು ಹೀಗೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+