ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#ProtectWithPen: ಗೋರಕ್ಷಣೆಗಾಗಿ ಟ್ವಿಟ್ಟರ್ ನಲ್ಲಿ ಚಳವಳಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಗೋಹತ್ಯೆಯ ವಿರುದ್ಧ ದನಿ ಎತ್ತುವ ಮತ್ತು ಗೋ ಮಾಂಸ ಭಕ್ಷಣೆ ತಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಶ್ರೀ ರಾಮಚಂದ್ರಾಪುರ ಮಠ ಆರಂಭಿಸಿರುವ ವಿನೂತನ ಕಾರ್ಯಕ್ರಮ ಅಭಯಾಕ್ಷರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಗೋವುಗಳ ರಕ್ಷಣೆ, ಜರ್ಮನ್ ಮಹಿಳೆಯ ಕಾರ್ಯಕ್ಕೆ ಸಲಾಂ!ಗೋವುಗಳ ರಕ್ಷಣೆ, ಜರ್ಮನ್ ಮಹಿಳೆಯ ಕಾರ್ಯಕ್ಕೆ ಸಲಾಂ!

ಗೋಹತ್ಯೆಯನ್ನು ವಿರೋಧಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಿಯ ಮೂಲಕ ಮನವಿ ಮಾಡಿಕೊಳ್ಳುವ ಈ ಚಳವಳಿ ಇದೀಗ #ProtectWithPen ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟ್ಟರ್ ನಲ್ಲೂ ಜನಪ್ರಿಯತೆ ಗಳಿಸಿದೆ.

ಶಿರಾಳಕೊಪ್ಪದಲ್ಲಿ ಗೋಸಂರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ಶಿರಾಳಕೊಪ್ಪದಲ್ಲಿ ಗೋಸಂರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ

ಕಾಮಧೇನು ಎಂದೇ ಕರೆಸಿಕೊಳ್ಳುವ, ಪೂಜನೀಯ ಗೋಮಾತೆಯನ್ನು ಉಳಿಸಿಕೊಳ್ಳುವುದು ಇಡಿ ದೇಶದ ಕರ್ತವ್ಯ. ಅದಕ್ಕೆಂದೇ #ProtectWithPen ಎಂಬ ಟ್ವಿಟ್ಟರ್ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು, ಎಲ್ಲ ಗಣ್ಯರನ್ನೂ ಗಮನಸೆಳೆಯಲಾಗುತ್ತಿದೆ.

ಸಿ ಟಿ ರವಿ

ಗೋಮಾಂಸ ಮನುಷ್ಯನ ಆರೋಗ್ಯಕ್ಕೆ ಮತ್ತು ದೇಶದ ಆರ್ಥಿಕತೆಗೆ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿದೇ ಜಗತ್ತಿನ ಹಲವು ದೇಶಗಳು ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಿವೆ ಎಂದು ಶಾಸಕ ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ.

ಗೋವಿನ ರೋದನ ಎಲ್ಲರನ್ನೂ ತಲುಪುತ್ತಿದೆ.

ಗೋವುಗಳ ರೋದನ ಎಲ್ಲರನ್ನೂ ತಲುಪುತ್ತಿದೆ. ಅದಕ್ಕೆಂದೇ ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಗೋ ರಕ್ಷಣೆ ದೇಶದ ಬೇಡಿಕೆ, ದಯವಿಟ್ಟು ಈ ಬಗ್ಗೆ ಚಿಂತಿಸಿ ನರೇಂದ್ರ ಮೋದಿಜೀ ಎಂದು ಮಹೇಶ್ ಕೊರಿಕ್ಕರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಗಿರೀಶ್ ಆಳ್ವಾ

ಗೋಮಾಂಸ ನಿಲ್ಲಿಸಿ, ಅವುಗಳಿಗೆ ಬದುಕಲು ಬಿಡಿ. #ProtectWithPen ಎಂಬುದು ಗೋಮಾತೆಯನ್ನು ಉಳಿಸುವುದಕ್ಕೆ ಒಂದು ಆನ್ ಲೈನ್ ಅಭಿಯಾನ. ಇಂದಿನಿಂದ ನಾವು ಗೋಮಾಂಸ ಭಕ್ಷಣೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅರಿವು ಮೂಡಿಸೋಣ ಎಮದು ಗಿರೀಶ್ ಆಳ್ವಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಗೋಮಾಂಸ ತಿರಸ್ಕರಿಸಿ

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ, ನಿಮ್ಮ ಜೀವನ ನಿಮ್ಮ ನಿರ್ಧಾರದ ಮೇಲೆ ನಿಮತಿರುತ್ತದೆ. ಹಾಗೆಯೇ ಗೋವುಗಳನ್ನು ರಕ್ಷಣೆ, ಅವುಗಳ ಬದುಕು ನಿಮ್ಮ ಕೈಯಲ್ಲೇ ಇದೆ. ಗೋಮಾಂಸವನ್ನು ತಿರಸ್ಕರಿಸಿ ಎಂದು ವಿದ್ಯಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
To protect cows, ramachandrapur math has started an online campaign in #ProtectWithPen hashtag in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X