ಡಿವೈಎಸ್ಪಿ ಗಣಪತಿ ಕೇಸ್: ತನಿಖೆ ತೀವ್ರಗೊಳಿಸಿದ ಸಿಬಿಐ
ಬೆಂಗಳೂರು, ನವೆಂಬರ್ 15: ಸುಪ್ರೀಂಕೋರ್ಟಿನ ನಿರ್ದೇಶನದಂತೆ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ತಂಡವು ಚುರುಕುಗೊಳಿಸಿದೆ.
ಮಂಗಳವಾರದಂದು ಮಡಿಕೇರಿಯಲ್ಲಿದ್ದ ಸಿಬಿಐ ಅಧಿಕಾರಿಗಳು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಗಣಪತಿ ಅವರ ಕುಟುಂಬದ ಸದಸ್ಯರನ್ನು ವಿಚಾರಣೆಗೊಳಪಡಿಸಲಿದ್ದಾರೆ. ತನಿಖೆಯ ಬೆಳವಣಿಗೆಗಳ ಮುಖ್ಯಾಂಶ ಇಲ್ಲಿದೆ:
* ಚೆನ್ನೈ ಸಿಬಿಐ ಕಚೇರಿಯ ತನಿಖಾಧಿಕಾರಿ ತಲೈಮಣಿ ನೇತೃತ್ವದ ತಂಡದ ಅಧಿಕಾರಿಗಳು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.
* ಬಳ್ಳಾರಿ ರಸ್ತೆಯಲ್ಲಿರುವ ಸಿಬಿಐ ಕಚೇರಿಯಲ್ಲಿ ಗಣಪತಿಯವರ ಅಕ್ಕ ಸಬಿತಾ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ. ಈ ಕುರಿತಂತೆ ನಿನ್ನೆ ನೋಟಿಸ್ ನೀಡಲಾಗಿತ್ತು.
* ಗಣಪತಿ ಸಹೋದರ ಎಂ.ಕೆ.ಮಾಚಯ್ಯ ಹಾಗೂ ಪ್ರಮುಖ ಸಾಕ್ಷಿಗಳಾದ ಬೆಳ್ಯಪ್ಪ, ಜಗನ್ ಅವರಿಂದ ಹೇಳಿಕೆ ಪಡೆಯಲಾಗಿದೆ.
ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?
* ಮಂಗಳವಾರದಂದು ಬೆಳಗ್ಗೆ 10ಕ್ಕೆ ವಿನಾಯಕ ವಸತಿ ಗೃಹಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿ ಪರಿಶೀಲಿಸಿ, ಲಾಡ್ಜ್ ಸಿಬ್ಬಂದಿ ಹೇಳಿಕೆ ಪಡೆದಿದ್ದಾರೆ.

*ಇನ್ಸ್ಪೆಕ್ಟರ್ ಮೇದಪ್ಪ, ಎಸ್ಐ ಭರತ್, ಮರಣೋತ್ತರ ಪರೀಕ್ಷೆ ನಡೆಸಿದ್ದ ಜಿಲ್ಲಾ ಆಸ್ಪತ್ರೆಯ ಡಾ.ಶೈಲಜಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ವಿನಾಯಕ್ ಲಾಡ್ಜಿನ ರೂಮ್ ನಂಬರ್ 315ರಲ್ಲಿ ಜುಲೈ 7, 2016ರಂದು ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ್ದ ಗಣಪತಿ ಅವರು ಅಂದಿನ ಗೃಹ ಸಚಿವ ಕೆಜೆ ಜಾರ್ಜ್, ಹಿರಿಯ ಅಧಿಕಾರಿಗಳಾದ ಪ್ರಣವ್ ಮೋಹಂತಿ ಹಾಗೂ ಎಎಂ ಪ್ರಸಾದ್ ಅವರ ಮೇಲೆ ಆರೋಪ ಹೊರೆಸಿದ್ದರು. ಈ ಕುರಿತಂತೆ ಸಿಐಡಿ ತನಿಖೆ ನಡೆದು, ಮೂವರು ಆರೋಪಿಗಳ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗಣಪತಿ ಅವರ ಪುತ್ರ ನೇಹಾಲ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈಗ ಸುಪ್ರೀಂಕೋರ್ಟಿನ ಆದೇಶದಂತೆ ಸಿಬಿಐ ತಂಡ ತನಿಖೆ ನಡೆಸುತ್ತಿದೆ.












Click it and Unblock the Notifications