ಕುರುಬರ ಸಮಾವೇಶದಲ್ಲಿ ಸಿಎಂ ಸಿದ್ದುಗೆ 'ಕಿಸ್ ಭಾಗ್ಯ'

Posted By:
Subscribe to Oneindia Kannada

ಬೆಂಗಳೂರು, ಜೂನ್ 26: ಕುರುಬ ಸಮುದಾಯದ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಹಿ ಮುತ್ತಿನ ಭಾಗ್ಯ ಸಿಕ್ಕಿದೆ. ಮಹಿಳೆಯೊಬ್ಬರು ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಕೆನ್ನೆಗೆ ಮುತ್ತಿಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ರಾಮಯ್ಯ, ಆ ಹೆಣ್ಣು ಮಗಳು ನನ್ನ ಮಗಳ ಸಮಾನದ ಹುಡುಗಿ ಎಂದರು.

ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂಗೆ ಮುತ್ತಿಟ್ಟ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಅಮೃತಪುರ ತಾಲೂಕು ಪಂಚಾಯಿತಿ ಸದಸ್ಯೆ ಗಿರಿಜಾ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. [ಮಾತು ಮನೆ ಕೆಡಿಸಿತು, ಮುತ್ತು ಮದುವೆಯನ್ನೇ ಕೆಡಿಸಿತು!]

ಸಮಾರಂಭದಲ್ಲಿ ಎಲ್ಲರಂತೆ ವೇದಿಕೆ ಏರಿ ಸಿಎಂ ರನ್ನು ಕಂಡ ಗಿರಿಜಾ ಅವರು ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಂತರ ಸಿಎಂ ಅವರಿಗೆ ಮುತ್ತಿಟ್ಟು ತೆರಳಿದ್ದಾರೆ. ಸಿಎಂ ಅವರು ಇದರಿಂದ ಗಾಬರಿಯಾದಂತೆ ಕಂಡು ಬರಲಿಲ್ಲ. [ನ್ಯಾಯವಾದಿ ಜೇಠ್ಮಲಾನಿ ಲಿಪ್ ಲಾಕ್]

Kuruba Community Meet : CM Siddaramaiah gets a 'Kiss' from his female fan

ನಂತರ ಈ ಬಗ್ಗೆ ಸಂತಸದಿಂದ ಮಾತನಾಡಿದ ಗಿರಿಜಾ, ನಾನು ಮೂಲತಃ ಸಿದ್ದರಾಮಯ್ಯ ಅವರ ವರಣಾ ಕ್ಷೇತ್ರದವಳು, ನಮ್ಮ ಜನಾಂಗದ ನಾಯಕರೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರಿರುವುದು ನನಗೆ ಹೆಮ್ಮೆಯ ವಿಷಯ. ಸಿದ್ದರಾಮಯ್ಯ ಅವರು ನನಗೆ ತಂದೆ ಸಮಾನ, ಅವರನ್ನು ಹತ್ತಿರದಿಂದ ಕಾಣುವ ಸೌಭಾಗ್ಯ ಈ ದಿನ ಒದಗಿ ಬಂದಿತು. ಇದು ನನ್ನ ಜೀವನದ ಅವಿಸ್ಮರಣೀಯ ದಿನ ಎಂದಿದ್ದಾರೆ.

Kuruba Community Meet : CM Siddaramaiah gets a 'Kiss' from his female fan

ನನ್ನ ಪತ್ನಿ, ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ, ಜನ ಸಾಮಾನ್ಯರು ಸಿಎಂ ಬಳಿ ಹೋಗುವುದೇ ಕಷ್ಟ, ಇಂದು ಈಕೆಗೆ ಹತ್ತಿರದಿಂದ ಫೋಟೊ ತೆಗೆಸಿಕೊಳ್ಳುವ ಅವಕಾಶ ಒದಗಿ ಬಂದಿದೆ, ಆರಾಧ್ಯ ದೈವವನ್ನು ಕಂಡಾಗ ಭಾವುಕಳಾಗಿ ಮುತ್ತಿಟ್ಟಿದ್ದರಲ್ಲಿ ತಪ್ಪೇನಿಲ್ಲ, ಆಕೆಯ ಸಂತಸ ಕಂಡು ನಾನು ಸಹಜವಾಗಿ ಖುಷಿಯಾದೆ ಎಂದು ಗಿರಿಜಾ ಅವರ ಪತಿ ಶ್ರೀನಿವಾಸ್ ಅವರು ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ.

Kuruba Community Meet : CM Siddaramaiah gets a 'Kiss' from his female fan

ನಂತರ ರಾಜ್ಯ ಕುರುಬ ಜನಾಂಗದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ನಾನು ಒಂದು ಜನಾಂಗದ ಪ್ರತಿನಿಧಿಯಲ್ಲ, ನಾನು ಈ ರಾಜ್ಯದ ಸಿಎಂ, ಎಲ್ಲರ ಆಶೀರ್ವಾದ ಪಡೆದು ಈ ಹುದ್ದೆಗೆ ಬಂದಿದ್ದೇನೆ, ಎಲ್ಲರ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ಹೊತ್ತಿದ್ದೇನೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kuruba Community Meet : CM Siddaramaiah gets a 'Kiss' from his female fan during a function held today (June 26) at Palace ground, Bengaluru. The woman who kissed CM Sidaramaiah is identified as Girija Srinivas Taluk Panchayat member from Tarikere, Chikkamagaluru.
Please Wait while comments are loading...