ಇಂಜಿನಿಯರ್ಸ್ ಡೇ: ಸರ್. ಎಂ. ವಿಶ್ವೇಶ್ವರಯ್ಯ ಟಾಪ್ ಟ್ರೆಂಡಿಂಗ್
ಬೆಂಗಳೂರು, ಸೆ. 15: ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಯಾವಾಗ ಯಾವ ವಿಷಯ ಟ್ರೆಂಡಿಂಗ್ ಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಹಬ್ಬ ಹರಿದಿನ, ಮಹಾತ್ಮರ ಹುಟ್ಟುಹಬ್ಬಗಳನ್ನು ಟ್ರೆಂಡಿಂಗ್ ಮಾಡುವುದಕ್ಕೆ ಭಕ್ತರ ಪಡೆಗಳಿವೆ. ಅದರೆ, ಇಂದು ಭಾರತದ ಟ್ವಿಟ್ಟರ್ ಟ್ರೆಂಡಿಂಗ್ ಪಟ್ಟಿಯಲ್ಲಿ #EngineersDay ಟಾಪ್ ಟ್ರೆಂಡಿಂಗ್ ನಲ್ಲಿದೆ. ದೇಶದೆಲ್ಲೆಡೆಯಿಂದ ಸರ್. ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಸಾರ್ವಜನಿಕರು ಸ್ಮರಿಸುತ್ತಿದ್ದಾರೆ.
ಭಾರತದ ಇಂಜಿನಿಯರ್ ಕ್ಷೇತ್ರದಲ್ಲಿ ಸರ್ ಎಂವಿ ಅವರು ಸಲ್ಲಿಸಿರುವ ಅಪಾರ ಕೊಡುಗೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು (ಸೆಪ್ಟೆಂಬರ್ 15) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.[ವಿಶ್ವೇಶ್ವರಯ್ಯನವರ ಸಾಧನೆಗಳು]
ಮುಂಬೈ ಮಹಾನಗರಿಯಲ್ಲಿ ಮಹಾಮಳೆ ಸುರಿದರೂ ನೀರು ಇಂಗುವ ವ್ಯವಸ್ಥೆಯನ್ನು 1884ರಲ್ಲೇ ಸರ್ ಎಂ. ವಿಶ್ವೇಶ್ವರಯ್ಯ ಅವರು ರೂಪಿಸಿದ್ದರು.
ಕೃಷ್ಣರಾಜಸಾಗರ ನಿರ್ಮಾಣ, ಭದ್ರಾವತಿಯ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅಭಿವೃದ್ಧಿಗೆ * ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ ಹೀಗೆ ವಿಶ್ವೇಶ್ವರಯ್ಯನವರ ಪ್ರಾಮಾಣಿಕತೆ, ವೃತ್ತಿಪರತೆಗಳು ಕೂಡ ದಂತೆಕತೆಗಳಾಗಿ ಹೋಗಿವೆ.
ನದಿ ನೀರು ಹಂಚಿಕೆ ಸಮಸ್ಯೆ ಬಗ್ಗೆ ಮುಂಚಿತವಾಗಿ ಯೋಚನೆ ಮಾಡಿದ್ದ ಸರ್ ಎಂವಿ ಅವರು ಭಾರತದ ನದಿಗಳನ್ನು ಜೋಡಿಸುವ ಯೋಜನೆಯನ್ನು ರೂಪಿಸಿ ಅಂದಿನ ಪ್ರಧಾನಿ ಪಂಡಿತ್ ನೆಹರೂ ಅವರಿಗೆ ನೀಡಿದ್ದರು ಎಂಬ ಸುದ್ದಿಯೂ ಇದೆ. ಸರ್ ಎಂವಿ ಅವರ ಸಾಧನೆಯನ್ನು ಸ್ಮರಿಸುತ್ತಾ ಬಂದಿರುವ ಟ್ವೀಟ್ ಗಳು ಇಲ್ಲಿವೆ...

ಇಂಜಿನಿಯರ್ಸ್ ದಿನ
ಕೃಷ್ಣರಾಜಸಾಗರ ನಿರ್ಮಾಣ, ಭದ್ರಾವತಿಯ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅಭಿವೃದ್ಧಿ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ,
ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ ಹೀಗೆ ವಿಶ್ವೇಶ್ವರಯ್ಯನವರ ಪ್ರಾಮಾಣಿಕತೆ, ವೃತ್ತಿಪರತೆಗಳು ಕೂಡ ದಂತೆಕತೆಗಳಾಗಿ ಹೋಗಿವೆ.
|
ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಇಂಜಿನಿಯರ್ಸ್ ಬೇಕು
ಭಾರತದ ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಇಂಜಿನಿಯರ್ಸ್ ಬೇಕು
|
ಸಮಸ್ಯೆಗಳನ್ನು ಬಗೆಹರಿಸುವುದು ಇಂಜಿನಿಯರ್ಸ್ ಕೆಲಸ
ಸಮಸ್ಯೆಗಳನ್ನು ಬಗೆಹರಿಸುವುದು ಇಂಜಿನಿಯರ್ಸ್ ಕೆಲಸ, ಅದು ಯಾವುದೇ ಬಗೆಯ ಸಮಸ್ಯೆ ಇರಲಿ.
|
ಇಂಜಿನಿಯರ್ಸ್ ಗಳ ಪಾಡು ಹೀಗಿರುತ್ತದೆ
ಇಂಜಿನಿಯರ್ಸ್ ಗಳ ಪಾಡು ಹೀಗಿರುತ್ತದೆ, ಎಷ್ಟು ದಿನ, ಎಷ್ಟು ಪ್ರಯೋಗಗಳು,ಎಷ್ಟು ಗಂಟೆ ವ್ಯಯಿಸುತ್ತಾರೆ ನೋಡಿ..
|
ಸರ್ ಎಂವಿಯನ್ನು ನೆನದ ಪಂಜಾಬಿಗಳು
ಪಂಜಾಬ್ ಕೇಸರಿಯಿಂದ ಸರ್ ಎಂವಿ ಹುಟ್ಟುಹಬ್ಬ ಹಾಗೂ ಇಂಜಿನಿಯರ್ಸ್ ಡೇಗೆ ಶುಭಹಾರೈಕೆ.
|
ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್ಸ್ ಪಾತ್ರ
ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್ಸ್ ಪಾತ್ರ ಅಧಿಕ, ಎಲ್ಲಾ ಇಂಜಿನಿಯರ್ಸ್ ಗೆ ಶುಭಹಾರೈಕೆ ಎಂದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್.
|
ನದಿ ಜೋಡಣೆ ಬಗ್ಗೆ ನೀಲನಕ್ಷೆ ರೂಪಿಸಿದ್ದ ಸರ್ ಎಂವಿ
ನದಿ ಜೋಡಣೆ ಬಗ್ಗೆ ನೀಲನಕ್ಷೆ ರೂಪಿಸಿದ್ದ ಸರ್ ಎಂವಿ ಅವರ ಯೋಜನೆಗೆ ನೆಹರೂ ಅವರು ಒಪ್ಪಿಗೆ ನೀಡಿರಲಿಲ್ಲ.












Click it and Unblock the Notifications