ಮಗಳ ಮೇಲೆ ಅತ್ಯಾಚಾರ ಆರೋಪದಿಂದ ಪ್ಯಾಸ್ಕಲ್ ಮುಕ್ತ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 19: ತನ್ನ ಮೂರುವರೆ ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸಿದ್ದ ಫ್ರೆಂಚ್ ರಾಯಭಾರ ಕಚೇರಿಯ ಮಾಜಿ ಅಧಿಕಾರಿ ಪ್ಯಾಸ್ಕರ್ ಮಜೂರಿಯರ್ ಅವರಿಗೆ ಬುಧವಾರದಂದು ಬೆಂಗಳೂರಿನ ವಿಶೇಷ ನ್ಯಾಯಾಲಯದಿಂದ ಆರೋಪ ಮುಕ್ತರಾಗಿ ಹೊರ ಬಂದಿದ್ದಾರೆ.

ಸುಮಾರು ಒಂದೂವರೆವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪ ಹೊತ್ತಿದ್ದ ಫ್ರೆಂಚ್ ರಾಯಭಾರಿ ಕಚೇರಿ ಸಿಬ್ಬಂದಿ ಪಾಸ್ಕಲ್ ಮಜೂರಿಯರ್ ಅವರನ್ನು ಹೈಗ್ರೌಂಡ್ ಪೊಲೀಸರು ಜೂನ್ 19, 2012ರಲ್ಲಿ ಬಂಧಿಸಲಾಗಿತ್ತು.

Former French diplomat Pascal Mazurier aquitted by Bengaluru court

ಫ್ರೆಂಚ್ ರಾಯಭಾರಿ ಕಚೇರಿಯ ಸಿಬ್ಬಂದಿ ಎನ್ನುವುದಕ್ಕೆ ಯಾವುದೇ ದಾಖಲೆ ಹೊಂದಿರದ ಫಾಸ್ಕಲ್ ಸಾಧಾರಣ ವೀಸಾದಲ್ಲಿದ್ದಾನೆ. ಪೊಲೀಸರ ಕ್ರಮ ಕೈಗೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು Ministry of External Affairs (MEA)ವಿದೇಶಾಂಗ ಸಚಿವಾಲಯ ಕೂಡಾ ಒಪ್ಪಿಗೆ ಸೂಚಿಸಿತ್ತು. ಆರೋಪಿ ಪಾಸ್ಕಲ್ 2001ರಲ್ಲಿ ಮದುವೆಯಾಗಿದ್ದನು. ಕೇರಳದ ಎರ್ನಾಕುಲಂನಲ್ಲಿ ವಾಸವಾಗಿದ್ದ ವೇಳೆ 2005ರಲ್ಲಿ ದಂಪತಿಗಳಿಗೆ ಗಂಡು ಮಗು ಜನಿಸಿತ್ತು.

2008ರಲ್ಲಿ ಅಲ್ಲಿದ ಬೆಂಗಳೂರಿಗೆ ವರ್ಗಾವಣೆಯಾದ ನಂತರ ಆಗಸ್ಟ್ ನಲ್ಲಿ ಹೆಣ್ಣು ಮಗು ಜನ್ಮತಾಳಿತು. ಅದಾದ ನಂತರ ಮತ್ತೊಂದು ಮಗು ಹುಟ್ಟಿದ್ದು ಮೂರು ಮಕ್ಕಳೊಂದಿಗೆ ವಸಂತನಗರದ ಪೈನ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ ಕುಟುಂಬ ವಾಸವಾಗಿದ್ದರು. ಪಶುವಿನಂತೆ ವರ್ತಿಸುತ್ತಿದ್ದ ಈತ 2010ರಿಂದ ತನ್ನ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಮಗಳ ಮೇಲೆ ಹಲ್ಲೆ, ದೈಹಿಕ ಹಿಂಸೆ ನೀಡುತ್ತಿದ್ದ. ದಿನಗಳು ಕಳೆದಂತೆ ಮಗಳು ಮೂರು ವರ್ಷ 10 ತಿಂಗಳು ತುಂಬಿದ ಮಗಳಿಗೆ ಬುದ್ದಿ ಬಂದು ತಾಯಿಯೊಂದಿಗೆ ತನ್ನ ನೋವು ಹೇಳಿಕೊಳ್ಳುವುದಕ್ಕೆ ಮುಂದಾಗುತ್ತದೆ.

ಆ ವೇಳೆ ಪಾಸ್ಕಲ್ ವರ್ತನೆ ಮಿತಿಮೀರುತ್ತದೆ. 2012ರಲ್ಲಿ ಹಿಂಸೆಗೆ ಒಳಗಾಗಿದ್ದ ಹಸುಗೂಸು ನಿತ್ಯಕರ್ಮಕ್ಕೆ ಹೋಗಬೇಕಾದರೆ ನೋವು ಆಗುತ್ತದೆ ಎಂದು ತಾಯಿ ಬಳಿ ನೋವು ತೋರಿಕೊಂಡಿತ್ತು. ಏನೂ ಅರಿಯದ ಈ ಕಂದಮ್ಮ ತಂದೆ ಮಾಡುತ್ತಿದ್ದ ಕ್ರೌರ್ಯವನ್ನು ತಾಯಿಯ ಬಳಿ ಬಿಚ್ಚಿಟ್ಟಿತು. ಮಗಳು ಎರಡು ವರ್ಷ ಹಸುಗೂಸು ಆಗಿದ್ದಾಗಿಂದಲೇ ಈತ ಇಂತಹ ಹೇಯ ಕೃತ್ಯ ನಡೆಸುತ್ತಿದ್ದನು.

ತನ್ನ ಕರುಳಕುಡಿಯ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ತಪ್ಪಿಸಲು ಶತಾಯುಗತಾಯು ಪ್ರಯತ್ನಿಸಿ ವಿಫಲಳಾದ ತಾಯಿ ಸುಜಾ(42) ಕೊನೆಗೆ ಹೈಗ್ರೌಂಡ್ ಪೋಲೀಸರ ಮೊರೆ ಹೋಗಿದ್ದರು. ನಗರದ ಅರಮನೆ ಮೈದಾನದ ಸಮೀಪವಿರುವ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಮುಖ್ಯ ಜಂಟಿ ಛಾನ್ಸಿಲರ್ ಅಧಿಕಾರಿಯಾಗಿದ್ದ ಪಾಸ್ಕಲ್ ಪತ್ನಿ ನೀಡಿದ ದೂರಿನ ಅನ್ವಯ ಹೈಗ್ರೌಂಡ್ ಪೊಲೀಸರು ಈತನನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Bengaluru court on Wednesday acquitted former French diplomat Pascal Mazurier in a rape case. Mazurier who was the deputy head of chancery at the French consulate was accused by his wife of raping their three-year-old daughter in 2012. Mazurier who put up a long legal battle said, that his wife was a 'criminal' for 'framing' him.
Please Wait while comments are loading...