ನಾವು ಕಾರಿನಲ್ಲಿ ಹೋದರೂ ಹೆಲ್ಮೆಟ್ ಹಾಕಬೇಕಾ?

Subscribe to Oneindia Kannada

ಬೆಂಗಳೂರು, ಮಾರ್ಚ್.09: ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸಿದರೆ ತಪ್ಪು ನಮ್ಮದೆ. ಅದಕ್ಕೆ ದಂಡವನ್ನು ನೀಡಬೇಕು ಬಿಡಿ.. ಹೆಲ್ಮೆಟ್ ಹಾಕದೇ ಕಾರು ಚಲಾಯಿಸಿದರೂ ದಂಡ ನೀಡಬೇಕೆ?

ಹೌದು.. ಕಾರಿನಲ್ಲಿ ತೆರಳಿದ್ದ ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಕಾಶ್ ಅವರಿಗೆ ಹೆಲ್ಮೆಟ್ ಹಾಕಿಲ್ಲ ಎಂದು ನೋಟಿಸ್ ಜಾರಿ ಮಾಡಿದ್ದ ಟ್ರಾಫಿಕ್ ಪೊಲೀಸ್ ಇಲಾಖೆ ಇದೀಗ ಮತ್ತೆ ಅಂಥದ್ದೊಂದು ಪ್ರಮಾದ ಎಸಗಿದೆ.[ಹೆಲ್ಮೆಟ್‌ ಹಾಕದ ಕಾರು ಮಾಲೀಕರಿಗೆ ನೋಟಿಸ್!]

ಹಿರಿಯ ಪತ್ರಕರ್ತ ಮತ್ತು ರಕ್ಷಣಾ ಇಲಾಖೆ ವಕ್ತಾರರಾಗಿರುವ ಡಾ. ಎಂ ಎಸ್ ಪಾಟೀಲ್ ಕಾರಿನಲ್ಲಿ ಸಂಚರಿಸಿದ್ದರೂ ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸಿದ್ದಾರೆ ಎಂಬ ನೋಟಿಸ್ ಪಡೆದುಕೊಂಡಿದ್ದಾರೆ. ಟ್ರಾಫಿಕ್ ಪೊಲೀಸರು 100 ರು. ದಂಡ ಕಟ್ಟುವಂತೆಯೂ ಸೂಚನೆ ನೀಡಿದ್ದಾರೆ. ಟ್ರಾಫಿಕ್ ಪೊಲೀಸರ ಅಚಾತಯರ್ಯದ ವಿವರಗಳನ್ನು ಪಾಟೀಲ್ ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ.

ನನ್ನ ಬಳಿ ಇರುವುದು ಕಾರು

ನನ್ನ ಬಳಿ ಇರುವುದು ಕಾರು

ನನ್ನ ಬಳಿ ಇರುವುದು ಹಳೆಯ ಮಾಜಿಝ್ ಕಾರು. ಆದರೆ ಹೆಲ್ಮೆಟ್ ಹಾಕದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಾ ಎಂದು ನೋಟಿಸ್ ಕಳುಹಿಸಲಾಗಿದೆ.

ಮೈಕೋ ಲೇಔಟ್ ವ್ಯಾಪ್ತಿ

ಮೈಕೋ ಲೇಔಟ್ ವ್ಯಾಪ್ತಿ

ದೂರದರ್ಶನದಲ್ಲಿ ಕೆಲಸ ಮಾಡುತ್ತಿರುವ ನಾನು ಮೈಕೋ ಲೇಔಟ್ ಸಾಗರ್ ಜಂಕ್ಷನ್ ಬಳಿ ಟ್ರಾಫಿಕ್ ನಿಯಮ ಮೀರಿದ್ದೇನೆ ಎಂದು ನೋಟಿಸ್ ಹೇಳುತ್ತಿದೆ.

ಇಲಾಖೆಯ ವಾಹನವಿದೆ

ಇಲಾಖೆಯ ವಾಹನವಿದೆ

ನನ್ನ ಕಾರು (ಕೆಎ 02 ಬಿ 2488) ಸದ್ಯ ದುರಸ್ತಿಯಲ್ಲಿದೆ. ಇಲಾಖೆಯ ವಾಹನವನ್ನೇ ಬಳಸುತ್ತಿದ್ದೇನೆ. ಅದು ಹೇಗೆ ದಂಡ ವಿಧಿಸಿದರೋ ಅವರಿಗೆ ಗೊತ್ತು.

ಹಣ ಮಮುಖ್ಯವಲ್ಲ

ಹಣ ಮಮುಖ್ಯವಲ್ಲ

100 ರು. ದಂಡ ಪಾವತಿ ಮಾಡುವುದು ಮುಖ್ಯ ಸಂಗತಿಯಲ್ಲ. ಆದರೆ ತಪ್ಪೆ ಮಾಡದೇ ಯಾಕೆ ದಂಡ ಪಾವತಿ ಮಾಡಬೇಕು ಎಂದು ಹಿರಿಯ ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ.

ಗಮನಕ್ಕೆ ಬಂದಿಲ್ಲ

ಗಮನಕ್ಕೆ ಬಂದಿಲ್ಲ

ಇಂಥ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಸಮಗ್ರ ಮಾಹಿತಿ ಕಲೆ ಹಾಕಿ ಎಲ್ಲಿ ಪ್ರಮಾದವಾಗಿದೆ ಎಂಬುದನ್ನು ಕಂಡುಹಿಡಿಯಲಾಗುವುದು ಎಂದು ಟ್ರಾಫಿಕ್ ಆಯುಕ್ತ ಎಂ ಎ ಸಲಿಂ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defence journalists received an unusual email from Dr M S Patil, Ministry of Defence Spokesperson (Bengaluru), on Tuesday. The subject line said: Irresponsible Bengaluru Traffic Police Notice. Dr Patil, a senior journalist-cum-spokesperson, reached out to the media after the Bengaluru Traffic Police (BTP) sent him a traffic violation notice."I have received a notice by post from BTP asking me to pay a fine of Rs 100 for not wearing a helmet. Actually it is an old car (Matiz), which is grounded for the last one year. The notice says that it is a motorcycle and the violation took place at Sagar Junction in MICO Layout. It is totally wrong," says the press release from Dr Patil, who was with the Doordarshan for 30 years, before moving to MoD.
Please Wait while comments are loading...